ಅಬುದಾಭಿ (www.vknews.in) : ಬ್ರಿಟಿಷರ ಸದೀರ್ಘ 200 ವರ್ಷಗಳ ಆಳ್ವಿಕೆಯಿಂದ ಮುಕ್ತಿ ಪಡೆದು 75 ವರ್ಷಗಳನ್ನು ಕಳೆದು ಅಮೃತ ಮಹೋತ್ಸವನ್ನು ಆಚರಿಸುತ್ತಿರುವ ಕೋಟ್ಯಂತರ ಭಾರತೀಯರ ಪೈಕಿ ವಿದೇಶಕ್ಕೆ ಜೀವನ ಸಾಗಿಸಲು ತಮ್ಮ ಕುಟುಂಬ ನಿರ್ವಹಣೆಗೆ ತೆರಳಿದ್ದ ಕೊಡಗಿನ ಅನೇಕ ಅನಿವಾಸಿ ಯುವಕರು ದುಬೈಯ ಕುಂಜಿಲ ರೂಮಿನಲ್ಲಿ ಕೇಕ್ ಕತ್ತರಿಸಿ ಮತ್ತು ರಾಷ್ಟ್ರ ಗೀತೆ ಹಾಡುವ ಮೂಲಕ ಅದ್ದೂರಿಯಾಗಿ ಆಚರಿಸಿದರು.
14 ರಾತ್ರಿ ಕಳೆದು ಮದ್ಯ ರಾತ್ರಿ 15ನೇ ಆಗಸ್ಟ್ 12ಗಂಟೆಗೆ ಮೊದಲಿಗರಾಗಿ ಸ್ವಾತಂತ್ರ್ಯ ಆಚರಿಸಿದ್ದು ವಿಶೇಷವಾಗಿತ್ತು. ರಫೀಕಲಿ ಕುಂಡಂಡ, ಅಜ್ಜು,ಜಾಬಿರ್,ಅಶ್ರಫ್, ಸಿದ್ದಿಕ್, ನವಾಜ್, ಫಾಝಿಲ್,ಜುನೈದ್,ಶಿಯಾಬ್, ನಿಜಾರ್, ಮೊಹಸಿನ್, ಆರಿಫ್ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಫೀಕಲಿ ಕುಂಜಿಲ ಅವರು ಸ್ವಾತಂತ್ರ್ಯ ದಿನದ ಮಹತ್ವವನ್ನು ಮತ್ತು ಹೋರಾಟಗಾರರ ತ್ಯಾಗವನ್ನು ವಿವರಿಸಿ ಹಿರಿಯರ ತ್ಯಾಗ ಬಲಿದಾನವನ್ನು ಉಳಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನುಡಿದು ಸರವರಿಗೂ ಅಮೃತ ಮಹೋತ್ಸವದ ಶುಭವನ್ನು ಕೋರಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.