ಬಳ್ಳಾರಿ (www.vknews.in) ; ಸದಾ ಸಿದ್ದರಾಮಯ್ಯ ವಿರುದ್ಧ ಟಿಕೆ ಮಾಡುತ್ತಿದ್ದ ಸಚಿವ ಬಿ. ಶ್ರೀರಾಮುಲು ಇದೀಗ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ. ಶ್ರೀರಾಮುಲು ಕುರುಬ ಸಮುದಾಯ, ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದ್ರೆ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ನನಗೂ ಇದೆ. ನಾನು ಸಿಎಂ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯ ಕೂಡ ಒಪ್ಪುತ್ತಾರೆ ಅಂತ ಹೇಳುವ ಸಿಎಂ ಕುರ್ಚಿಯ ಮೇಲೆ ಶ್ರೀರಾಮುಲು ಕಣ್ಣಿಟ್ಟಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನ ಮಾಡಲೇಬೇಕು. ಮುಂದೊಂದು ದಿನ ನಾನು ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ಜಾತಿಗಳನ್ನ ಒಂದು ಮಾಡುವ ಪ್ರಯತ್ನವನ್ನ ನಾನು ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ವಿ. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಅನ್ನೋದನ್ನ ಮುಂದೊಂದು ದಿನ ಹೇಳುವೆ ಅಂತ ತಿಳಿಸಿದ್ದಾರೆ.
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ರು ಅನ್ನೋದನ್ನ ಹೋಗಿ ಅವರನ್ನ ಕೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು ಸಹಕಾರ ಮಾಡಿದ್ರಂತೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡೋಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಏನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮ್ಮಗ್ಯಾಕೆ..? ನಿಮಗೆ ಗೊತ್ತಗಲ್ಲ ಅಂತ ಹೇಳುವ ಮೂಲಕ ಸಿದ್ದರಾಮಯ್ಯ ಪರ ರಾಮುಲು ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ ಶ್ರೀರಾಮುಲು ಕಾಂಗ್ರೆಸ್ ಕಡೆ ವಾಲಿದ್ರಾ ಅನ್ನೋ ಸಂಶಯವನ್ನು ಅವರು ಬಿತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.