(www.vknews.in). ಮಂಗಳೂರು :ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಕಚೇರಿಯಲ್ಲಿ ದೇಶದ ಸ್ವಾತಂತ್ರ್ಯದ ಅಮ್ರತಮಹೋತ್ಸವನ್ನು ಆಚರಿಸಲಾಯಿತು. ಜಿಲ್ಲಾ ಅಧ್ಯಕ್ಷ ಕೆ ಎಂ ಫಯಾಝ್ ರವರು ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡುತ್ತಾ ದೇಶದ ಸ್ವಾತಂತ್ರ್ಯಕ್ಕಾಗಿ ಜೀವಾರ್ಪಣೆ ಮಾಡಿದವರನ್ನು ನಮ್ಮ ಇತಿಹಾಸದಿಂದ ಮರೆಮಾಚಿ ಬ್ರಿಟೀಷರ ಪಾದಸೇವೆ ಮಾಡಿದವರನ್ನು ಮುಂಚೂಣಿಗೆ ತರುವ ಕಪಟ ದೇಶಪ್ರೇಮಿಗಳ ಹುನ್ನಾರ ಅಪಾಯಕಾರಿ ಎಂದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರಿಯಾಝ್ ಹರೇಕಳ, ಅಬ್ದುಲ್ ಖಾದರ್ ಜೆಪ್ಪು, ಎ ಎಸ್ ಇಬ್ರಾಹಿಂ ಕೆರೀಂ ಕಡಬ, ಎಚ್ ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.