(www.vknews.in). ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಪಾಪ್ಯುಲರ್ ಫ್ರಂಟ್ ಕಲ್ಲಡ್ಕ ವಲಯ ವತಿಯಿಂದ ದ್ವಜಾರೋಹಣ ಕಾರ್ಯಕ್ರಮವು ಕಲ್ಲಡ್ಕ ಜಂಕ್ಷನ್ನಿನಲ್ಲಿ ನಡೆಯಿತು. ವಲಯಾಧ್ಯಕ್ಷರಾದ ಅಯ್ಯೂಬ್ ದ್ವಜಾರೋಹಣಗೈದರು, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಿವಿಝನ್ ಅಧ್ಯಕ್ಷರಾದ ಸಿದ್ದೀಖ್ ಪನಾಮಾ ನಮ್ಮ ಪೂರ್ವಿಕರು ತಮ್ಮ ಜೀವ, ಜೀವನವನ್ನು ಬಲಿಯರ್ಪಿಸಿದ ಪರಿಣಾಮವಾಗಿ ಈ ದೇಶವಿಂದು ಸ್ವತಂತ್ರ್ಯಗೊಂಡಿದೆ, ಆದರೆ ಅಂದು ಬ್ರಿಟೀಷರ ಪಾದಸೇವೆಗೈಯ್ಯುತ್ತಿದ್ದ ಮಂದಿಗಳು ಇಂದು ತಮ್ಮ ಅಧಿಕಾರ ಧರ್ಪದಿಂದ ಇತರರ ದೇಶಪ್ರೇಮವನ್ನು ಪ್ರಶ್ನಿಸುತ್ತಿದ್ದಾರೆ, ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಚುವ ಸಲುವಾಗಿ ದೇಶಪ್ರೇಮದ ವಕ್ತಾರರಾಗಿ ಈ ಮಂದಿಗಳಿಂದು ರಂಗಕ್ಕಿಳಿದಿದ್ದಾರೆ ಎಂದು ಸಾಂಧರ್ಭಿಕವಾಗಿ ನುಡಿದರು.
ಮುಖ್ಯ ಅಥಿತಿಗಳಾಗಿ ಜಿಲ್ಲಾ ಸಮಿತಿ ಸದಸ್ಯರಾದ ಝಕರಿಯಾ ಗೋಳ್ತಮಜಲು, ಡಿವಿಝನ್ ಕಾರ್ಯದರ್ಶಿಗಳಾದ ಯಾಸಿರ್ ಕಲ್ಲಡ್ಕ, ಮೊದಲಾದವರು ಉಪಸ್ಥಿತರಿದ್ದರು. ಇಲ್ಯಾಸ್ ಗೋಳ್ತಮಜಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.