(www.vknews.in) ಮಂಗಳೂರು ; ಮುಸ್ಲಿಂ ಸ್ಟುಡೆಂಟ್ ಫೆಡರೇಶನ್ ದ.ಕ ಜಿಲ್ಲೆಯ ವತಿಯಿಂದ “ದೇಶವೇ ! ಎಲ್ಲಿದೆ ನನ್ನ ಸ್ವಾತಂತ್ರ್ಯ…?” ಎಂಬ ದ್ಯೆಯ ವಾಕ್ಯದೊಂದಿಗೆ ಜಾಗೃತಿ ಸಭೆಯು ಮುಲ್ಕಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಜೋಕಟ್ಟೆಯಲ್ಲಿ ನಡೆಯಿತು. ಎಂ.ಎಸ್.ಎಫ್ ದ.ಕ ಜಿಲ್ಲಾಧ್ಯಕ್ಷರಾದ ನೂಮಾನ್ ಜೋಕಟ್ಟೆ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಸಂದೇಶ ಭಾಷಣವನ್ನು ಜೋಕಟ್ಟೆ ಗ್ರಾಮ ಪಂಚಾಯತಿ ಸದಸ್ಯರಾದ ಫಾರೂಕ್ ಜೋಕಟ್ಟೆ ರವರು ನೆರವೇರಿಸಿದರು. ಮುಖ್ಯ ಭಾಷಣವನ್ನು ಎಂ.ಎಸ್.ಎಫ್ ಕರ್ನಾಟಕ ರಾಜ್ಯ ಸಂಚಾಲಕರಾದ ಇಶ್ರಾರ್ ಗೂಡಿನಬಳಿ ಮಾಡಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಆಝಾದ್ ಯೂತ್ ಕಲ್ಚರಲ್ ಜೋಕಟ್ಟೆ ಯ ಅಧ್ಯಕ್ಷರಾದ ಸಮೀರ್ ಗುಡ್ಡೆ, ಎಂ.ಎಸ್.ಎಫ್ ದ.ಕ ಜಿಲ್ಲಾ ಕೋಶಾಧಿಕಾರಿ ಶಾಹಿದ್ ಬಿಸಿರೋಡ್ , ಎಂ.ಎಸ್.ಎಫ್ ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಸಾಬಿತ್ ಜೋಕಟ್ಟೆ, ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಸಯೀದ್ ಮತ್ತು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಮ್ರಾನ್ ಈದ್ಗಾ , ಮೊದಲಾದ ನಾಯಕರುಗಳು ಉಪಸ್ಥಿತರಿದ್ದರು. ಎಂ.ಎಸ್.ಎಫ್. ದ.ಕ ಜಿಲ್ಲಾ ಕಾರ್ಯದರ್ಶಿ ಬಿ.ಕೆ ಆದಿಲ್ ಜೋಕಟ್ಟೆ ರವರು ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.