ಈಶ್ವರಮಂಗಳ: ಬದ್ರಿಯಾ ಜುಮಾ ಮಸೀದಿ ಪಾಲ್ಯತ್ತಡ್ಕ ಈಶ್ವರ ಮಂಗಳ ಟೌನ್ ಮತ್ತು ತರ್ಬಿಯತುಲ್ ಅನಾಂ ಮದರಸ ಪಾಲ್ಯತ್ತಡ್ಕ ಈಶ್ವರ ಮಂಗಳ ಟೌನ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯು ಜಮಾಅತ್ ಅಧ್ಯಕ್ಷರಾದ ಹಿರಾ ಖಾದರ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು.ಸ್ಥಳೀಯ ಖತೀಬರಾದ ನಝೀರ್ ಅಝ್ಹರಿ ಧ್ವಜಾರೋಹನ ನಡೆಸಿ ಮಾತಾಡಿದರು.ಸರಕಾರಗಳ ತಾರತಮ್ಯ ನೀತಿಯನ್ನು ಖಂಡಿಸುತ್ತಾ ದೇಶದ ಜನರು ಶಾಂತಿ ಸೌಹಾರ್ದತೆ ಸಾಮರಸ್ಯದೊಂದಿಗೆ ಬಾಳಿದರೆ ಮಾತ್ರ ಸ್ವತಂತ್ರದ ಅರ್ಥ ಪೂರ್ಣವಾಗುವುದು ಇದಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಈ ಸಂಧರ್ಭದಲ್ಲಿ ನುಡಿದರು. ಕಾರ್ಯಕ್ರಮದಲ್ಲಿ ಮದರಸ ಪ್ರಧಾನ ಅಧ್ಯಾಪಕರಾದ ಕೆ ಎಚ್ ರಝಾಕ್ ಮುಸ್ಲಿಯಾರ್ ಅಜ್ಜಾವರ ಸ್ವಾಗತಿಸಿದರು.ಅಮ್ರತೋತ್ಸವ ಪ್ರಯುಕ್ತ SKSBV ಹಮ್ಮಿಕೊಂಡ ಸ್ಪರ್ದೆಯಲ್ಲಿ ವಿಜಯಿಗಳಾದರಿಗೆ ಬಹುಮಾನ ವಿತರಣೆ ನಡೆಯಿತು.·ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಅಧ್ಯಾಪಕರಾದ ಹಾಶಿಂ ಅನ್ಸಾರಿ ಧನ್ಯವಾದಗೈದರು.ಕಾರ್ಯಕ್ರಮದಲ್ಲಿ ಮದರಸ ಅಧ್ಯಾಪಕರಾದ ಇಬ್ರಾಹಿಂ ದಾರಿಮಿ,ಹಸೈನಾರ್ ನಿಝಾಮಿ,ಖಾದರ್ ಮುಸ್ಲಿಯಾರ್ ಜಮಾಅತ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ,ಕಾರ್ಯದರ್ಶಿ ಇಬ್ರಾಹಿಂ ಕೆ ಎಚ್,ಸದಸ್ಯರಾದ ಪಿ ಎ ಅಬ್ದುಲ್ಲಾ ಹಾಜಿ,ಹಸೈನಾರ್ ಫೈಝಿ,ಇಬ್ರಾಹಿಂ ಬಿ ಸಿ, ಶಂಸುಧ್ಧೀನ್ ಪದಡ್ಕ,ಶಂಸುಧ್ಧೀನ್ ಇಂದುಮೂಲೆ,ಶಂಸುಲ್ ಉಲಮಾ ಯೂತ್ ವಿಂಗ್ ನಾಯಕರಾದ ನಾಸಿರ್ ಕೊಲ್ಲಮೊಗರು,ಮದರಸ ವಿಧ್ಯಾರ್ಥಿಗಳು,ಊರವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.