ಆನೇಕಲ್ (ವಿಶ್ವ ಕನ್ನಡಿಗ ನ್ಯೂಸ್) : ವಿದ್ಯಾರ್ಥಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೇರುಘಟ್ಟ ಸಮೀಪದ ಎಎಮ್ ಸಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಹಾಸ್ಟೆಲ್ ಶೌಚಾಲಯದಲ್ಲಿ ನಡೆದಿದೆ. 19 ವರ್ಷದ ನಿತಿನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.
ಕೇರಳ ಮೂಲದ ನಿತಿನ್, ಇದೇ ತಿಂಗಳು ಡಿಸೆಂಬರ್ 1 ಕ್ಕೆ ಸಿಇಎಸ್ ಪ್ರಥಮ ವರ್ಷಕ್ಕೆ ಅಡ್ಮಿಶನ್ ಆಗಿದ್ದ. ತಂದೆ ತಾಯಿ ದೂರ ಇದ್ದಾರೆ ಅಂತ ಬೇಸರಿಸಿಕೊಂಡಿದ್ದ ನಿತಿನ್, ಪದೇ ಪದೇ ತಂದೆ ತಾಯಿಗೆ ಕಾಲ್ ಮಾಡುತ್ತಿದ್ದನಂತೆ. ನಿತಿನ್ ಕುಟುಂಬದವರು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಪದಿನಿ ಜರಿಯಾ ವಿಲೇಜ್ ಮೂಲದವರು. ತಂದೆ ತಾಯಿ ದುಬೈನಲ್ಲಿ ವಾಸವಿದ್ದರು. ಸ್ಟೂಡೆಂಟ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.