ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಹೆಂಡತಿ ಕಾಟ ತಾಳಲಾರದೇ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಎಂವಿ ಲೇಔಟ್ನಲ್ಲಿ ನಡೆದಿದೆ. ಮಹೇಶ್ವರ ಸಾವನ್ನಪ್ಪಿದ ಯುವಕ ಎಂದು ತಿಳಿದು ಬಂದಿದೆ.
ಮಹೇಶ್ವರ ಕಳೆದ ಆಗಸ್ಟ್ 21 ರಂದು ಕವನಾ ಎಂಬಾಕೆಯನ್ನು ಮದುವೆಯಾಗಿದ್ದು, ಮದುವೆಯಾದ ಬಳಿಕ ಹೆಂಡತಿ ಪ್ರತಿದಿನ ಕಿರುಕುಳ ಕೊಡುತ್ತಿದ್ದಳು ಎನ್ನಲಾಗಿದೆ. ನಾನು ಐಷಾರಾಮಿ ಜೀವನ ನಡೆಸಬೇಕು. ನನಗೆ ಚಿನ್ನಾಭರಣ ಬೇಕು ಎಂದು ಪ್ರತಿ ನಿತ್ಯ ಕವನಾ ಪೀಡಿಸುತ್ತಿದ್ದು, ಇದಕ್ಕೆ ಮಹೇಶ್ವರ ಸ್ಪಂದಿಸದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ.
ಹೆಂಡತಿ ವರ್ತನೆಯಿಂದ ಬೇಸತ್ತು ಮಾನಸಿಕ ಹಿಂಸೆ ಅನುಭವಿಸಿದ್ದ ಮಹೇಶ್ವರ, ಕಳೆದ ಐದು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.