(www.vknews.in) ಎಸ್.ಕೆ.ಎಸ್.ಎಸ್.ಎಫ್ ಹಳೆಯಂಗಡಿ ಯೂನಿಟ್ ಇದರ ಆಶ್ರಯದಲ್ಲಿ ಆದ್ಯಾತ್ಮಿಕ ಮಾಸಿಕ ಮಜ್ಲಿಸುನ್ನೂರ್ ಸಂಗಮ ಹಾಗೂ ನಮ್ಮನ್ನಗಲಿದ ಮರ್ಹೂಮ್ ನೌಶಾದ್ ಹಾಜಿ ಸುರಲ್ಪಾಡಿ,ಮುಶರ್ರಫ್ ಉಳಾಯಿಬೆಟ್ಟು ಹಾಗೂ ಇತ್ತಿಚೆಗೆ ಹತ್ಯೆಗೀಡಾದ ಮರ್ಹೂಮ್ ಜಲೀಲ್ ಕಾಟಿಪಳ್ಳ ಹಾಗೂ ಅಗಲಿದ ಇತರ ಸಹೋದರ,ಸಹೋದರಿಯರಿಗಾಗಿ ತಹ್ಲೀಲ್ ಸಮರ್ಪಣೆ ಹಾಗೂ ಅನುಸ್ಮರಣಾ ಕಾರ್ಯಕ್ರಮ ಶುಕ್ರವಾರ ಇಶಾ ನಮಾಝಿನ ಬಳಿಕ ಶಂಸುಲ್ ಉಲಮಾ ಮೆಮೋರಿಯಲ್ ಪೌಂಡೇಶನ್ ಸಭಾಂಗಣ ಬೊಳ್ಳೂರಿನಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಶೈಖುನಾ ಬೊಳ್ಳೂರು ಉಸ್ತಾದರು ದುಆಕ್ಕೆ ನೇತೃತ್ವ ನೀಡಿದರು
ಇಮ್ರಾನ್ ಮಖ್ದೂಮಿ ಇಂದಿರಾನಗರ ನಮ್ಮನ್ನಗಲಿದ ಮರ್ಹೂಮ್ ನೌಶಾದ್ ಹಾಜಿಯವರ ಜೀವನ ಶೈಲಿ, ಅವರ ವ್ಯಕ್ತಿತ್ವ ಮತ್ತು ಸೇವಾ ಮನೋಭಾವದ ತ್ಯಾಗಮಯ ಬದುಕಿನ ಪಯಣದ ಕುರಿತು ವಿವರಿಸಿ ಮುಖ್ಯ ಪ್ರಭಾಷಣ ನಡೆಸಿ ಇತರ ಮರಣ ಹೊಂದಿದವರ ಮಗ್ಪಿರತ್ ಗಾಗಿ ವಿಶೇಷ ದುಆ ಗೈಯ್ಯಲಾಯಿತು.
ಈ ಸಂದರ್ಭ ಬೊಳ್ಳೂರು ಮಸೀದಿಯ ಸದರ್ ಮುಹಲ್ಲಿಂ ನಾಸಿರ್ ಮುಸ್ಲಿಯಾರ್,ಸೈಪುದ್ದಿನ್ ಅಝ್ಹರಿ ಬೊಳ್ಳೂರು ,ಅನ್ಸಾರ್ ಅಝ್ಹರಿ ಬೊಳ್ಳೂರು,ರಶೀದ್ ಮುಸ್ಲಿಯಾರ್, ರಿಯಾಝ್ ಪೈಝಿ ಬೊಳ್ಳೂರು,ಎಸ್.ಯು.ಎಮ್.ಎಫ್ ಬೊಳ್ಳೂರು ಸಮೀತಿ ಅದ್ಯಕ್ಷ ಬಿ.ಇ ಮಹಮ್ಮದ್,ಉಪಾದ್ಯಕ್ಷ ಬಶೀರ್ ಪರಂಗಿಬೊಟ್ಟು,ಬೊಳ್ಳೂರು ಮಸೀದಿ ಜೊತೆ ಕಾರ್ಯದರ್ಶಿ ಬಿ.ಎಮ್ ಸುಲೈಮಾನ್,ಝೈನುದ್ದಿನ್ ರೈಲ್ವೆ ಗೇಟ್ ಸೇರಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.