(www.vknews.in) ಚಾರಿತ್ರಿಕ ಪಯಣದ ರೋಚಕ ವಿಸ್ಮಯಗಳು
ತನ್ನ ಸಾರ್ಥಕ ದಶಕಗಳನ್ನು ಪೂರೈಸಿದ ಜಾಮಿಅ ನೂರಿಯ್ಯಾ ಅರಬಿಕ್ ಕಾಲೇಜು ತನ್ನ ಸುವರ್ಣಮಹೋತ್ಸವನ್ನು ಆಚರಿಸುವ ಸಂದರ್ಭದಲ್ಲಿ ಹೊಸತೊಂದು ಮಹಾ ಯೋಜನೆಯನ್ನು ಸಮುದಾಯಕ್ಕೆ ಸಮರ್ಪಿಸಿತು. ಅದುವೇ “ಜಾಮಿಅಃ ಕೋ-ಆರ್ಡಿನೇಶನ್ ಆಫ್ ಜೂನಿಯರ್ ಕಾಲೇಜಸ್, ಪಾರಂಪರಿಕಾ ದೀನಿ ಕಲಿಕಾ ವ್ಯವಸ್ಥೆಯನ್ನು ಜನತೆಯೊಂದಿಗೆ ಮು೦ದುವರೆಸಿ ಅದರ ಜೊತೆಗೆ ಲೌಕಿಕ ವಿದ್ಯಾಭ್ಯಾಸವನ್ನು ಕಲಿತು ಸಮಕಾಲಿಕ ಜಗತ್ತಿನ ಮುಂದೆ ಧರ್ಮದ ಸಂದೇಶಗಳನ್ನು ಕಲಿಸಿಕೊಡಲು ಅಗತ್ಯವಿರುವ ಎಲ್ಲಾ ತರಬೇತಿಯನ್ನು ನೀಡುವ ಈ ನೂತನ ಪದ್ಧತಿಯ ಅಧೀನದಲ್ಲಿ ಪ್ರಪ್ರಥಮವಾಗಿ ಪಾರಂಭಗೊಂಡ ಸಂಸ್ಥೆ, ಕರ್ನಾಟಕದ ಜಾಮಿಯ ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು, ಶೈಖುಲ್ ಜಾಮಿಅ ಆಲಿ ಕುಟ್ಟಿ ಉಸ್ತಾದರ ವಿಶೇಷ ಆಸಕ್ತಿಯ ಮೇರೆಗ ಸ್ವತಃ ಉಸ್ತಾದರೇ ಹೆಸರಿಟ್ಟು ನೇತೃತ್ವ ನೀಡಿದ ಈ ಸಂಸ್ಥೆಗೆ 2010 ಮಾರ್ಚ್ 7 ರಂದು ಸಯ್ಯದ್ ಹೈದರಲಿ ಶಿಹಾಬ್ ತಂಗಲ್ ಶಿಲಾನ್ಯಾಸಗೈದರು. ಅದೇವರ್ಷ ಜೂನ್ 19ರಂದು ಮರ್ಹೂಮ್ ಶೈಖುನಾ ಚೆರುಶೇರಿ ಉಸ್ತಾದರು ಈ ಜ್ಞಾನ ಕೇಂದ್ರವನ್ನು ಉದ್ಘಾಟಿಸಿದರು.
ಇದು ಕರ್ನಾಟಕದ ಜ್ಞಾನ ದೇಗುಲ, ತೋಡಾರು ಸಯ್ಯಿದ್ ವಲಿ (ಖ.ಸಿ)ರವರು ಮಲಗಿರುವ ಪುನೀತ ಭೂಮಿ, ಶಂಸುಲ್ ಉಲಮಾರ ಮದದಿನಿಂದ ಪುಳಕಿತವಾದ ಪ್ರದೇಶ, ಮಿತ್ತಬೈಲಿನ ಮುತ್ತು ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದರ ಸಲಹೆಗಳಿಂದ ಪವಿತ್ರ ಧರ್ಮ ಪ್ರಚಾರಕ್ಕೆ ಹೆಸರುವಾಸಿಯಾದ ಜ್ಞಾನ ಗೋಪುರ, ಇದು ಬರಕ್ಕತ್ತಾದ ಇಲ್ಮಿನ ಕೇಂದ್ರವಾಗಿದೆ ಎಂದು ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದರು ನುಡಿದ ಧನ್ಯ ಭೂಮಿ, ವಲಿಯುಲ್ಲಾಹಿ ಅತ್ತಿಪಟ್ಟ ಉಸ್ತಾದ(ಖ.ಸಿ)ರು ಪ್ರಾರ್ಥಿಸಿದ ಪುಣ್ಯ ಸ್ವಲಾತ್ ಮಜ್ಲಿಸಿಗೆ ನಾಂದಿ ಹಾಕಿದ ಗೇಹ,ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ತೋಡಾರು ಉಸ್ತಾದರು ಹರಸಿ ಬೆಳೆಸಿದ ಸಂಸ್ಥೆ, ಜ್ಞಾನ ದಾಹಿಗಳಿಗೆ ವಿನಯ ತುಂಬಿಸಿದ ಕರುನಾಡ ಚೈತನ್ಯ ಕೋಲಾರಿ ಉಸ್ತಾದರ ವಿಜ್ಞಾನ ಪಸರಿಸುವಿಕೆಯ ಅರಮನೆ, ಜಿಲ್ಲೆಯಲ್ಲೇ ಪ್ರಥಮ ಭಾರಿಗೆ ಉಚಿತ IAS Coaching center “SMASH” ಪರಿಚಯಿಸಿದ ನಿಸ್ವಾರ್ಥ ಸಂಘಾಟಕ ಇಸ್ಹಾಕ್ ಹಾಜಿಯ ಕರ್ಮಭೂಮಿ, ಹೀಗೆ ಹಲವು ಉಲಮಾ ಉಮರ ನಾಯಕರ ನಿಸ್ವಾರ್ಥ ಸೇವನೆಯಿಂದ ಬೆಳೆದ ಜ್ಞಾನ ಸಾಗರ ತೋಡಾರಿನ ಕರುನಾಡ ಜಾಮಿಯ.
ಸಂಸ್ಥೆಯ ಸಾಧನೆಯು ಬರೆದು ಮುಗಿಸಲಾಗದ ಕಾಯಕ, ಸಂಸ್ಥೆಯಿಂದ ಬಂದ ಹಲವು ದೀನಿ ವಿದ್ವಾಂಸರು ಸಮುದಾಯದಲ್ಲಿ ಸಕ್ರಿಯವಾಗಿ ಸೇವನೆಯಲ್ಲಿದಾರೆ, ಉನ್ನತ ಕಲಿಕೆಗಾಗಿ 30ರಷ್ಟು ವಿಧ್ಯಾರ್ಥಿಗಳು ಜಾಮಿಯ ನೂರಿಯಾದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಇನ್ನೂರರಷ್ಟು ವಿಧ್ಯಾರ್ಥಿಗಳು ಸಂಸ್ಥೆಯಲ್ಲಿ ವಿವಿಧ ಮಜಲುಗಳಾಗಿ ಕಲಿಯುತ್ತಿದ್ದಾರೆ. ಜಾಮಿಅಃದ ಜೂನಿಯರ್ ಕಾಲೇಜುಗಳ ಪೈಕಿ ವಿನೂತನ ರೀತಿಯల్లి ಕಾರ್ಯಾಚರಿಸುತ್ತಿರುವ ಏಕೈಕ ಸಂಸ್ಥೆಯಾಗಿದೆ ಇದು. ವಿಶೇಷವಾಗಿ ಉರ್ದು ಮಾಧ್ಯಮದಲ್ಲಿ ಹನಫೀ ಮಜ್ಹಬಿನ ಕರ್ಮಶಾಸ್ತ್ರ ರೀತಿಯನುಸಾರ ರೂಪಿಸಲಾದ ಸಿಲೆಬಸ್ನಲ್ಲಿ ಕಲಿಸುತ್ತಿರುವ ಸಂಸ್ಥೆಯ ಅಧೀನದಲ್ಲಿ ಕಾರ್ಯ ಚರಿಸುತ್ತಿರುವ ಮಖ್ದೂಮಿಯ ಎಂಬ ಹೆಸರಿನಲ್ಲಿ ಹನಫಿ ಮಕ್ಕಳ ಕಲಿಕೆ. ಸಂಸ್ಥೆಯು ವಿಶೇಷ ಕಾಳಜಿಯಿಂದ ಇವರಿಗೆ ಶಿಕ್ಷಣವನ್ನು ನೀಡುತ್ತಿದೆ , ಉತ್ತರ ಪ್ರದೇಶ, ಬಿಹಾರ, ಉತ್ತರಕಾಂಡ, ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಪ್ರದೇಶಗಳ ವಿಧ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. 2005 ರಲ್ಲಿ ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದರು ಉದ್ಘಾಟನೆಗೈದ ಈ ಕಲಿಕೆಯು ಇಪ್ಪತ್ತು ವಿದ್ಯಾರ್ಥಿಗಳಿ೦ದ ಪ್ರಾರಂಭಗೊಂಡು ಇದೀಗ ನಲ್ವತ್ತರಷ್ಟು ವಿಧ್ಯಾರ್ಥಿಗಳಿಗೆ ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣ ನೀಡುವ ಕ್ರಾಂತಿಯಾಗಿ ಬೆಳೆದಿದೆ. ಇಲ್ಲಿನ ಉರ್ದು ವಿಧ್ಯಾರ್ಥಿಗಳ ಪ್ರತ್ಯೇಕತೆ ಎಂದರೆ ನಮ್ಮ ಪ್ರದೇಶಗಳ ವಿಧ್ಯಾರ್ಥಿಗಳಂತೆ ಯಾವುದೇ ರೀತಿಯ ಪ್ರಾಥಮಿಕ ಹಿನ್ನಲೆಯಿಲ್ಲದವರಾಗಿದ್ದಾರೆ, ಧಾರ್ಮಿಕ ಶಿಕ್ಷಣದ ಮೊದಲ ಅಕ್ಷರವನ್ನು ಇಲ್ಲಿಂದಲೇ ಪ್ರಾರಂಭಿಸುವವರು ಹಲವರು.
ವಿಶೇಷತೆಗಳು:
🔰ಉಮ್ಮುಲ್ ಮದಾರೀಸ್ ಪಟ್ಟಿಕ್ಕಾಡ್ ಜಾಮಿಅ: ನೂರಿಯ್ಯಾ ಅರಬಿಯ್ಯಾ: ಪಟ್ಟಿಕ್ಕಾಡ್ ಇದರ ಪ್ರಮುಖ ಅಂಗಸಂಸ್ಥೆ 🔰 ಧಾರ್ಮಿಕವಾಗಿ 6ವರ್ಷದ ಮಅಬರಿ ಕೋರ್ಸ್ ಮತ್ತು ಪಟ್ಟಿಕ್ಕಾಡ್ ಜಾಮಿಅ ನೂರಿಯದಲ್ಲಿ 2ವರ್ಷದ ಫೈಝಿ ಕೋರ್ಸ್ 🔰ಲೌಖಿಕವಾಗಿ ಕಲಾ ವಾಣಿಜ್ಯ ವಿಭಾಗದಲ್ಲಿ ಪಿ.ಯು.ಸಿ,ಮತ್ತು ಪದವಿ ಶಿಕ್ಷಣ 🔰 ಇಂಗ್ಲೀಷ್, ಆರಬಿಕ್, ಉರ್ದು, ಕನ್ನಡ ಮತ್ತು ಮಳಯಾಳಂ ಭಾಷೆಗಳಿಗೆ ವಿಶೇಷ ತರಬೇತಿ 🔰ನುರಿತ ಮತ್ತು ಅನುಭವಿ ಅಧ್ಯಾಪಕ ವೃಂದ. 🔰ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ವಿಶೇಷ ವೇದಿಕೆ. 🔰ಪ್ರಾಥಮಿಕ ಕಂಪ್ಯೂಟರ್ ಕೋರ್ಸ್ ವಿಶೇಷ ತರಬೇತಿ 🔰 ಕಳೆದ 12ವರ್ಷಗಳಿಂದ ಪಠ್ಯ-ಪತ್ಯೇತರ ಚಟುವಟಿಕೆಯಲ್ಲಿ ಗಮನಾರ್ಹ ಸಾಧನೆ.
🔰ಹಚ್ಚ ಹಸಿರಿನ ಪ್ರಕೃತಿಯ ಸೊಬಗಿನಲ್ಲಿ ಅತಿ ಸುಂದರ ಸಂಸ್ಥೆ. 🔰 ಕಲಿಯಲು ಅತ್ಯುತ್ತಮ ಸ್ಮಾರ್ಟ್ ಕ್ಲಾಸ್ ರೂಮ್. 🔰ಸೌಲಭ್ಯಯುತ ವಿಶಾಲವಾದ “ಶಾಲಿಯಾತಿ ಗ್ರಂಥಾಲಯ”. 🔰ಉಚಿತ ಶಿಕ್ಷಣ, ಊಟ, ಮತ್ತು ವಸತಿ. 🔰ಕಂಪ್ಯೂಟರ್ ಲ್ಯಾಬ್. 🔰 ಲಾಂಗ್ವೇಜ್ ಹಬ್. 🔰 ಎಲ್ಲಾ ಅಧ್ಯಾಪನಗಳಿಗು ಮತ್ತು ರಿಸರ್ಚ್ ಗಳಿಗೆ ಸೌಕರ್ಯ. 🔰ವಿಶಾಲವಾದ ಆಟದ ಮೈದಾನ. 🔰ಕಾಲಿಕ ವಿಷಯಗಳ ಮೇಲೆ ಪರಿಣಿತರಿಂದ ವಿಶೇಷ ತರಗತಿಗಳು.
ಇದೀಗ ತನ್ನ ಸಾರ್ಥಕ ಪಯಣದ 13ನೇ ವರ್ಷಕ್ಕೆ ಹೆಜ್ಜೆಯನ್ನಿಡುತ್ತಿರುವ ಸಂಸ್ಥೆಯು ಸಮರ್ಥ ಫೈಝಿ ಮಅಬರಿ ಪಂಡಿತರನ್ನು ಸಮುದಾಯಕ್ಕೆ ಅರ್ಪಿಸಿದೆ. ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಎಂಬ ಎರಡು ಸಿಲೆಬಸ್ ಗಳ ಮೂಲಕ ಸಮನ್ವಯ ಶಿಕ್ಷಣ ನೀಡುತ್ತಿರುವ ಸಂಸ್ಥೆಯು ಕರ್ನಾಟಕದ ಭವಿಷ್ಯದ ದಅವಾ ಚಟುವಟಿಗೆಗಳ ಭದ್ರ ನೇತೃತ್ವ ನೀಡುವ ಭರವಸೆಯಂತೆ ಬೆಳೆಯುತ್ತಿದೆ. ಹೀಗೆಯೇ ಸಂಸ್ಥೆಯ ಮತ್ತೊಂದು ಸಕ್ರಿಯ ಕಾರ್ಯ PUC ಪಾಸದವರಿಗಾಗಿ ಡಿಗ್ರಿಯ ಜೊತೆಗೆ IAS-IPS ಉಚಿತ ತರಬೇತಿ ಸಂಸ್ಥೆಯ ಅಧೀನದಲ್ಲಿ ಕಾರ್ಯ ಚರಿಸುತ್ತಿರುವ Smash IAS Academy ವತಿಯಿಂದ 💫 PUC ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ನಮ್ಮ ತರಬೇತಿ ಕೇಂದ್ರದ ಸಮೀಪವಿರುವ ಆಯ್ದ ಕಾಲೇಜುಗಳಲ್ಲಿ ಪದವಿ ಜೊತೆಗೆ ಮೂರು ವರ್ಷಗಳ ಸಮಗ್ರ (Integrated) ಅಧ್ಯಯನ ವ್ಯವಸ್ಥೆ ಇದೆ. ಇಲ್ಲಿನ ವಿಶೇಷತೆಗಳು: 📍ವಿದ್ಯಾರ್ಥಿಯು ಆಯ್ಕೆ ಮಾಡಿದ ಡಿಗ್ರಿ(B.A, B.Com, B.Sc, B.Tech etc..) ಯ ಜೊತೆಗೆ IAS, IPS ಪರೀಕ್ಷೆಗೆ ಉಚಿತ ತರಬೇತಿ. 📍ಉದ್ದೇಶಿತ ಗುರಿಗಳು ಹಾಗೂ ಕ್ರಮ ಬದ್ಧವಾದ ದಿನಚರಿಯೊಂದಿಗೆ ವೈಯಕ್ತಿಕ ಮಾರ್ಗದರ್ಶನ. 📍ನಿರಂತರ ಪರೀಕ್ಷೆಗಳು ಹಾಗೂ ಮೌಲ್ಯಮಾಪನ. 📍ಉಚಿತ ಗ್ರಂಥಾಲಯ, ಆಹಾರ ಮತ್ತು ವಸತಿ ಸೌಲಭ್ಯ.
ಹೀಗೆ ಸಮುದಾಯಕ್ಕೂ ಕಾಲಿಕ ವಿಷಯಕ್ಕೂ ಸ್ಪಂದಿಸುವ ಕರುನಾಡ ಜ್ಞಾನ ಗೋಪುರಕ್ಕೆ 13 ವರ್ಷಗಳ ಪಯಣ. ಇದೇ ಬರುವ ಜನವರಿ 28 ಮತ್ತು 29 ರಂದು 13ನೇ ವಾರ್ಷಿಕ ಮತ್ತು 3ನೇ ಸನದು ದಾನ ಮಹಾ ಸಮ್ಮೇಳನ ನಡೆಯಲಿದೆ.
*ತಾವು ಬನ್ನಿರಿ ,ತಮ್ಮವರನ್ನು ಕರೆ ತನ್ನಿರಿ…* 🤍💟💚
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.