(www.vknews.in) ಸಾತ್ವಿಕರ ಸಾಲಿಗೆ ಸೇರಿದ ಮರ್ಹೂಂ ಸಜೀಪ ಉಸ್ತಾದ್ ರವರ ಸ್ಮರಣಾರ್ಥ ವಾಗಿ ಸಜೀಪ ಕೇಂದ್ರ ಜುಮ್ಮಾ ಮಸೀದಿಯ ಅಧೀನದಲ್ಲಿ ಕಳೆದ ಅರೇಳು ವರ್ಷಗಳ ಹಿಂದೆ ಸ್ಥಾಪಿಸಲಾದ ಮಹಿಳಾ ಶರೀಅತ್ ಕಾಲೇಜ್, ಏಳನೆಯ ವಾರ್ಷಿಕ ಹಾಗೂ ದ್ವಿತೀಯ ಸನದು ದಾನ ಸಮ್ಮೇಳನವನ್ನು ಮೊನ್ನೆ ಬಹಳ ಅದ್ದೂರಿಯಾಗಿ ಆಚರಿಸಿತು. ನಿಜ ಹೇಳಬೇಕೆಂದರೆ ನಮ್ಮ ಯಾವುದೇ ಅರಬಿಕ್ ಕಾಲೇಜ್ ಗಳ ಸನದು ದಾನ ಸಮ್ಮೇಳನಕ್ಕಿಂತ ಯಾವುದೇ ಕಡಿಮೆ ಇಲ್ಲದ ರೀತಿಯಲ್ಲಿ ಅಚ್ಚುಕಟ್ಟಾಗಿ, ಮಾದರಿಯಾಗಿ ಅಷ್ಟೇ ವಿಜೃಂಭಣೆಯಿಂದ ಆಚರಿಸಿ ಸರ್ವರ ಗಮನಸೆಳೆಯುವಂತಿತ್ತು ಈ ವುಮೆನ್ಸ್ ಶರೀಅತ್ ಕಾಲೇಜ್ ಕಾರ್ಯಕ್ರಮ. ನಿಜಕ್ಕೂ ಅತ್ಯಂತ ಯಶಸ್ವಿಯಾಗಿ ನಡೆದ ಮಾದರಿ ಅದ ಕಾರ್ಯಕ್ರಮವಾಗಿತ್ತು ಅದು. ಉಲಮಾ – ಉಮರಾ ನಾಯಕರು ತುಂಬಿದ್ದ ವೇದಿಕೆಯಲ್ಲಿ ‘ಸಮಸ್ತ’ ದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಆ ಶೈಖುನಾ ಆಲಿ ಕುಟ್ಟಿ ಉಸ್ತಾದ್ ರವರಿಂದ 42 ವಿದ್ಯಾರ್ಥಿನಿಯರ ಪರವಾಗಿ ಅವರ ಪೋಷಕರು ಪದವಿ ಸರ್ಟಿಫಿಕೇಟ್ ಪಡೆದು ಕೊಂಡು ದನ್ಯರಾದರು. ಮಾಶಾ ಅಲ್ಲಾಹ್… ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಉನ್ನತ ಧಾರ್ಮಿಕ ಶಿಕ್ಷಣ ನೀಡುವ ನೆಲೆಯಲ್ಲಿ ಸಂಸ್ಥಾಪಿತಗೊಂಡ ಈ ಕಾಲೇಜ್ ವಿದ್ಯಾರ್ಥಿಗಳಿಗೆ ಮೂವರು ಉತ್ತಮ ಪಂಡಿತರು ಮತ್ತು ಶಿಕ್ಷಕಿಯರ ನೇತೃತ್ವದಲ್ಲಿ ಮೌಲ್ಯಯುತ, ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಅದೇ ರೀತಿ ಕಾಲಿಕವಾಗಿ ಅಗತ್ಯವಾಗಿರುವ ಧಾರ್ಮಿಕ ಶಿಕ್ಷಣ ದ ಜೊತೆಗೆ ಲೌಕಿಕವಾಗಿ ಪಿ.ಯು.ಶಿಕ್ಷಣವನ್ನೂ ಶಿಸ್ತು ಬದ್ಧವಾಗಿ ಉಪನ್ಯಾಸಕಿಯರ ನೇತೃತ್ವದಲ್ಲಿ ನೀಡುತ್ತಿರುವುದು ಗಮನಾರ್ಹ. ವಿದ್ಯಾರ್ಥಿನಿಯರು ದ್ವಿಶಿಕ್ಷಣದಲ್ಲೂ ಉತ್ತಮ ಫಲಿತಾಂಶ ತಂದು ಕೊಟ್ಟಿದ್ದಾರೆ ಎಂದು ಸಂಬಂಧ ಪಟ್ಟವರು ಹೆಮ್ಮೆಯಿಂದ ಹೇಳುತ್ತಾರೆ. ಮಿತ್ರರಾದ ಪ್ರತಿಭಾವಂತ ಯುವ ವಾಗ್ಮಿ, ಅಬ್ದುರ್ರಶೀದ್ ಫಾಝಿಲ್ ಹನೀಫಿ, ಸ್ಥಳೀಯ ಖತೀಬರೂ ಫೈಝೀಸ್ ನಾಯಕರೂ ಆದ ಅಬೂಸ್ವಾಲೀಹ್ ಫೈಝಿ,ಪ್ರಬುದ್ಧ ವಿದ್ವಾಂಸ ,ಅಷ್ಟೇ ಸರಳ ವ್ಯಕ್ತಿತ್ವದ ಶೈಖ್ ಇರ್ಫಾನಿ ಕಲ್ಲಡ್ಜ ಮೊದಲಾದ ವಿದ್ವಾಂಸರ ಸಮರ್ಥ ಸಾರಥ್ಯ, ಸದಾ ಸಂಸ್ಥೆಯ ಅಭಿವೃದ್ಧಿ ಗೆ ಶ್ರಮಿಸುವ ಅಡಳಿತ ಸಮಿತಿ ಹಾಗೂ ಊರ ಹಿರಿ ಕಿರಿಯರ ಪ್ರೋತ್ಸಾಹ, ಸಹಕಾರ ಎಲ್ಲವೂ ಈ ಕಾಲೇಜ್ ನ ಯಶಸ್ವಿ ಗೆ ಹಾಗೂ ಶಿಸ್ತಿನಿಂದ ಅಚ್ಚುಕಟ್ಟಾಗಿ ಅಷ್ಟೇ ಅದ್ದೂರಿಯಾಗಿ ಈ ಕಾರ್ಯಕ್ರಮ ಸಂಘಟಿಸಲು ಕಾರಣವಾಯಿತು ಎಂಬುದು ಸತ್ಯ. ಅದೇ ತೆರನಾಗಿ ಸಂಸ್ಥೆಯ ಯಶಸ್ವಿಯ ರೂವಾರಿಗಳಾದ ಮೂವರು ಉಸ್ತಾದರಿಗೆ ತುಂಬಿದ ವೇದಿಕೆಯಲ್ಲಿ ಸನ್ಮಾನವು ಗಮನ ಸೆಳೆಯಿತು. ಒಳಾಂಗಣದಲ್ಲಿ ಸನದು ದಾರಿಗಳಿಗೆ ಶಿಸ್ತು ಬದ್ದ ಹಾಗೂ ಅಷ್ಟೇ ಸುಂದರ ಅಸನ ವ್ಯವಸ್ಥೆ ….ಹೀಗೆ ಎಲ್ಲವೂ ಅಚ್ಚುಕಟ್ಟಾಗಿತ್ತು. ಇನ್ನು ಗಮನಾರ್ಹ ವಿಚಾರವೆಂದರೆ ಇಲ್ಲಿನ ವಿದ್ಯಾರ್ಥಿನಿಯರು ಜಿಲ್ಲೆಯ ಹಲವಾರು ಮೊಹಲ್ಲಾಗಳಲ್ಲಿ ಮಹಿಳಾ ತರಗತಿ ನಡೆಸಿಕೊಟ್ಟಿರುವುದು ಅದೇರೀತಿ ಇಲ್ಲಿನ ವಿದ್ಯಾರ್ಥಿನಿಯರು. ಹಲವು ವಿದ್ಯಾಸಂಸ್ಥೆ ಗಳಲ್ಲಿ ಶಿಕ್ಷಕಿಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅದೇ ಕಾರಣಕ್ಕೆ ಇರಬಹುದು ಇಲ್ಲಿ ಮೋಟಿವೇಷನ್ ತರಗತಿ ನಡೆಸಿ ಕೊಟ್ಟ ಬಹು.ಸಾಲಿಂ ಫೈಝಿ ಸಹಿತ ಹಲವು ಪ್ರಸಿದ್ಧ ಮೋಟಿವೇಟರ್ ಗಳು ಇಲ್ಲಿನ ಕಾಲೇಜ್ ಮತ್ತು ವಿದ್ಯಾರ್ಥಿನಿಯರನ್ನು ಪ್ರಶಂಸಿರುವುದು. ಅಲ್ಲಾಹು ಈ ಸಂಸ್ಥೆ ಯನ್ನು ಇನ್ನಷ್ಟು ಉನ್ನತಿಗೇರಿಸಲಿ ಮತ್ತು ಇದಕ್ಕೆ ಸಹಾಯ ಸಹಕಾರ ನೀಡಿದ ಸರ್ವರಿಗೂ ಅಲ್ಲಾಹು ಒಳಿತನ್ನು ಇಹ ಪರಗಳಲ್ಲಿ ದಯಪಾಲಿಸಲಿ. ಆಮೀನ್ ಯಾ ರಬ್ಬಲ್ ಅಲಮೀನ್.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.