ಮಂಗಳೂರು (www.vknews.in) ; ರಾಜ್ಯ ಸಚಿವ ಸಂಪುಟವು ರಾಜ್ಯದಲ್ಲಿ 2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ನೀಡಲಾಗಿರುವ 4 ಶೇಖಡ ಮೀಸಲಾತಿಯನ್ನು ರದ್ದುಪಡಿಸಿ ಪಂಚಮ ಶಾಲಿ ಲಿಂಗಾಯತರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಲು ಹುನ್ನಾರ ನಡೆಸಿರುವುದನ್ನು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಕಾರ್ಯದರ್ಶಿ ರಿಯಾಜ್ ಹರೇಕಳ ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯ ಸಂಪುಟದ ಈ ತೀರ್ಮಾನವು ಕಾನೂನುಬಾಹಿರ ಮತ್ತು ಚುನಾವಣಾ ತಂತ್ರವೆಂದು ಆಪಾಸಿದ ಅವರು, ರಾಜ್ಯದಲ್ಲಿ ಕೋಮು ರಾಜಕೀಯ ನಡೆಯುತ್ತದೆ, ಇದನ್ನು ಪ್ರಶ್ನೆ ಮಾಡ್ಲಿಕ್ಕೆ ಯೋಗ್ಯತೆ ಇಲ್ಲದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಮುಖಂಡರು ಎಲ್ಲಿ ಅಡಗಿ ಕೂತಿದ್ದಾರೆ, ಕಾಂಗ್ರೆಸ್ ಮೌನವಾಗಿದೆ, ಟುಬಿ ಮೀಸಲಾತಿ ರದ್ದುಪಡಿಸಿದ್ದಾರೆ ಇನ್ನಾದರೂ ಎದ್ದೇಳಿ, ನಿಮ್ಮ ವೈಯಕ್ತಿಕ ಲಾಭ ಗೋಸ್ಕರ ಬಿಜೆಪಿ ಇದ್ದು ಪ್ರಯೋಜನ ಪಡೆಯುವುದಕ್ಕಿಂತ ಅಲ್ಪಸಂಖ್ಯಾತರ ಧ್ವನಿ ಯಾಗಿ ಟು ಬಿ ಎಂಬ ಮೀಸಲಾತಿ ನಿಮಗೂ ಅನ್ವಯಿಸುತ್ತದೆ ಎಚ್ಚರವಿರಲಿ ಎಂದು ಹೇಳಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.