(www.vknews.in) ; ಮೂಲೆ ಇಬ್ರಾಂಚಾ.., ಈ ನಾಮ ಅರಿಯದವರು ಈ ಊರಿನಲ್ಲಿ ಮತ್ತು ಆಸುಪಾಸಿನಲ್ಲಿ ಇರಲಾರೆ,ಅಂದರೆ ಸಾಮಾಜಿಕವಾಗಿ ಕೆಲವೊಂದು ಪ್ರತ್ಯೇಕ ಕಾರ್ಯಗಳಲ್ಲಿ ಅವರ ಹಸ್ತವೂ ಊರಿನಲ್ಲಿ ಅತ್ಯಗತ್ಯವಾಗಿದೆ.ಗೋಳಿತ್ತಡಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡುವುತ್ತಿರುವಾಗ ಶುಕ್ರವಾರದಂದು ಮದ್ಯಾಹ್ನ ಮಸ್ಜಿದ್ ಗೆ ಹೋದಾಗ ಹನ್ನೆರಡು ಘಂಟೆಗೆ ಮೊಳಗುವ ಒಂದು ಶಬ್ಧವಿದೆ,ಅದು ಮಸೀದಿಯ ಎಡ ಬದಿಯ ಮೊದಲ ಸಾಲಿನಿಂದ ಮೊಳಗುವ “ಸ್ವಲ್ಲೂ ಸುನ್ನತುಲ್ ಜುಮಾ”…! ಎಂಬ ಈಶಬ್ಧವು ಮೊಳಗಿದಾಗ ಎಲ್ಲರೂ ಜುಮಾ ನಮಾಜಿನ ಸುನ್ನತ್ ನಮಾಜು ಮಾಡಲು ಆರಂಭಿಸುವುದು ರೂಢಿ,ಈ ಪರಂಪರೆಯೂ ಅವರು ವೃದ್ಧಾಪ್ಯ ಸಹಜ ಅನಾನುಕೂಲತೆಯ ಬಳಿಕ ನಾ ಕೇಳಲಿಲ್ಲಾ.
ಅದೇ ರೀತಿ ಪ್ರತೀ ವರ್ಷ ಬರುವ ಈದುಲ್ ಫಿತ್ರ್ ಹಾಗೂ ಇನ್ನಿತರ ಯಾವುದೇ ಚಿಕ್ಕ ಚಿಕ್ಕ ಕಾರ್ಯಕ್ರಮಗಳಿಗಾಗಿ ಸಾಲು ಸಾಲಾಗಿ ಅವರ ಮನೆಯ ಮುಂದೆ ನಮ್ಮ ಆಸುಪಾಸಿನಲ್ಲಿರುವವರು ಕೋಳಿ ಕೊಯ್ಯುವುದಕ್ಕೆ (ಝಬಹ್ )ಅಜ್ಜನ ಬಳಿ ಬರುವುದನ್ನು ಕಾಣುವುತ್ತಿರುವುದು ಸಾಮಾನ್ಯವಾಗಿತ್ತು, ನೆರೆಹೊರೆಯ ಮನೆಯವರಿಗೆ ಮೊಲ,ಉಡುಬುಮುಂತಾದ ಕಾಡು ಪ್ರಾಣಿಗಳು ಸಿಕ್ಕ್ಕರೆ ಮೊತ್ತ ಮೊದಲಾಗಿ ಅವರು ಕರೆಯುವಂತದ್ದು ಅಜ್ಜರನ್ನು ಆಗಿತ್ತು,ಹೊಟ್ಟೆ ನೋವು,ಉಬ್ಬಿದ ಹೊಟ್ಟೆ, ಹಾವಿಗೆ ನೆರಳು ತಾಗಿದ ಕಾರಣಕ್ಕೆ ಪ್ರಾಥಮಿಕ ಚಿಕಿತ್ಸೆಯಂತೆ ಅಕ್ಕಿ ,ಉಪ್ಪು,ನೀರು ಮಂತ್ರಕ್ಕೆ,ದ್ರಷ್ಟಿ ತಾಗಿದಕ್ಕೆ ಚರಟ್ಟಿ ದ್ರಷ್ಟಿ ಚಿಕಿತ್ಸೆ ಮುಂತಾದವುಗಳಿಗಾಗಿ ಊರವರು ಇವರ ಬಳಿ ಬಂದು ಪರಂಪರಾಗತ ಚಿಕಿತ್ಸೆ ಪಡೆಯುತ್ತಿದ್ದದ್ದು ಸಾಮಾನ್ಯ ,ಅದೇ ರೀತಿ ನನ್ನ ಅತೀ ಚಿಕ್ಕ ಬಾಲ್ಯಯದಲ್ಲಿ ಕೈ ಹಿಡಿದು ಪರಿಸರ ಪ್ರದೇಶದ ಮುಹಮ್ಮದಲಿ,ಸಾದಿಕ್ ಮುಂತಾದವರ ಮನೆಗೆ ಬೇಟಿಕೊಟ್ಟದ್ದು ನೆನಪಿಗೆ ಬರುತ್ತಿದೆ,ಯಾಕೆಂದರೆ ಆ ಕಾಲದಲ್ಲಿ ಮನೆಯಲ್ಲಿಯೇ ಮುಂಜಿ(ಸುನ್ನತ್)ಕರ್ಮ ಮಾಡುವುದು ಸಂಪ್ರದಾಯ,ಇದು ಮಾಡಿ ಮಲಗಿದ್ದವರ ಮನೆಗಳಿಗೆ ಆಗಾಗ ಬೇಟಿಕೊಟ್ಟು ಅವರ ಕ್ಷೇಮವನ್ನು ವಿಚಾರಿಸಿ ಮುಂಜಿಯ ಬಳಿಕ ಇಪ್ಪತ್ತು ಇಪ್ಪತೈದು ದಿನಗಳ ವರೆಗೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಉಪ್ಪಪ್ಪಾ ಮಾಡುವುದನ್ನು ನಾನು ಗಮನಿಸಿದ್ದು ಈಗಿನ ಕಾಲದಲ್ಲಿ ಆಧುನೀಕರಣದಿಂದ ಇದು ಅನ್ಯವಾಗಿದೆ.
ಈ ರೀತಿಯಲ್ಲಿ ತನ್ನದಾದ ಸೇವೆಗಳನ್ನು ಊರಿನಲ್ಲಿ ಮಾಡಿ ಎಲ್ಲರಿಗೂ ಬೇಕಾದವರಾಗಿದ್ದರು ಮೂಲೆ ಇಬ್ರಾಹಿಂ ಹಾಜಿ. ಅಜ್ಜರು ಮೊಮ್ಮಕ್ಕಳಿಗೆ ಅವರ ಬಾಲ್ಯ ಜೀವನದಲ್ಲಿ ಹೆಚ್ಚಾಗಿ ಆಕರ್ಷಿಸುವುದು ಸರ್ವೇ ಸಾಮಾನ್ಯ,ಅವರು ಮನೆಗಳಿಗೆ ಒಂದು ಯಜಮಾನವಾಗಿದ್ದೂ ಒಂದು ಪ್ರಾಕೃತಿಕ ಸೌಂದರ್ಯವೂ ಹೌದು,ಅದರಂತೆ ನಮ್ಮ ಅಜ್ಜರೂ ಸಾಧಾರಣ ವಾರದಕೆಲವೊಂದು ದಿನಗಳಲ್ಲಿ ಬೆಳಿಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ತಮ್ಮ ಅಡಿಕೆ ತೋಟಕ್ಕೆ ನೀರು ಹಾಕುವುದು ಅವರ ಕೆಲಸ, ಈ ಸಂದರ್ಭವನ್ನು ಉಪಯೋಗಿಸಿ ಮಕ್ಕಳಾಟಕ್ಕೆ ನಾವೇನೂ ಕಮ್ಮಿಯೂ ಇಲ್ಲಾ,ಅವರ ಜೊತೆಯಲ್ಲಿಯೇ ತೋಟಕ್ಕೆ ತೆರಳಿ ಅವರು ತೋಟದ ಬಳಿ ಇರುವ ಕೊಳದಿಂದ ಪಂಪು ಸೆಟ್ ಮೂಲಕ ತೋಟಕ್ಕೆ ನೀರು ಹಾಕುವಾಗ ನಾವು ಆ ತೋಟ ಗಿಡದ ಬುಡಕ್ಕೆ ಸೇರಿಕೊಂಡು ಆ ಕಡೆ ಈ ಕಡೆ ಓಡುವುದು ಹಾಗೂ ಆ ಬುಡಕ್ಕೆ ಹಾಕುವ ನೀರು ನೇರವಾಗಿ ನಮ್ಮ ದೇಹಕ್ಕೆ ಸ್ಪರ್ಶಿಸುವಂತೆ ಮಾಡುತ್ತಾ ನೀರಿನಾಟ ಆಡುವುದು ಒಂದುರೀತಿಯ ಆನಂದದ ಆಟವು ನೆನಪಿಗೆ ಬರುತ್ತಿದೆ.
ಆದರೆ ಇದನ್ನೆಲ್ಲಾ ನೋಡಿ ಎಷ್ಟು ತೊಂದರೆ ಆದರೂ ನಮ್ಮನ್ನು ತಪ್ಪಿಸಿ ನೀರು ಹಾಕುವುದೋ,ಹಾಕದಿರುವುದೋ ಅಜ್ಜರಿಂದ ಕಾಣಲಿಲ್ಲಾ,ಕೆಲವೊಮ್ಮೆ ಕೊಳದಲ್ಲಿ ನೀರು ಬಹಳ ಕಡಿಮೆ ಇರುವಾಗ ಇಂಧನದ ಖರ್ಚು ಹೆಚ್ಚಾಗುವುದು ಮೊದಲಾದ ಅನಾನುಕೂಲತೆಯಲ್ಲೂ ಇದನ್ನೇ ಮುಂದುವರಿಸಿದರೂ ಉಪ್ಪಪಾರಿಂದ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದು ನಾವು ನೋಡಲಿಲ್ಲಾ,ಮತ್ತೆ ಉಪ್ಪಪ್ಪಾ ತೋಟದಿಂದ ಮನೆ ತಲುಪುವ ಮುಂಚೆ ನಾವು ತಲುಪಿರುತ್ತದೆ,ಮತ್ತೆ ಹಿಂದಿನಿಂದ ಬರುವ ಅಜ್ಜರ ಕೈಯಲ್ಲಿ ತೋಟದಲ್ಲಿರುವ ನೇರಳೆ ಹಣ್ಣು,ಮಾವಿನ ಹಣ್ಣು,ಸೀತಪ್ಪಳ ಹಣ್ಣು ಹಾಗೂ ಇದು ಬಾವಲಿತಿಂದಿದ್ದರೆ ಸರಿಯಾಗಿ ಕಟ್ ಮಾಡಿ ನಮಿಗಾಗಿ ತಂದು ಕೊಡುತ್ತಿದ್ದ ಆ.. ನಿನ್ನೆ… ಸುಂದರ ನಿನ್ನೆಗಳೂ ಎಂದೂ ಮಾಯದೆ ಈಗಲೂ ಉಳಿದಿದೆ.
ನನ್ನ ಬಾಲ್ಯ ಕಾಲದ ಪ್ರತಿಯೊಂದು ಘಟ್ಟಗಳಲ್ಲೂ ಒಬ್ಬರು ದಿಕ್ಸೂಚಿಯಾಗಿ ಮುನ್ನಡೆಸಿದವರಿದ್ದರೆ ಅದು ನನ್ನ ಅಜ್ಜ,ಅವರು ಗಾಳಿಮುಖ ಪೇಟೆ ಅಂಗಡಿಗಳಿಗೆ ಹಾಗೂ ಕರ್ನೂರು ಸಹಕಾರಿ ಅಂಗಡಿ ಸಹಿತ ಯಾವುದೇ ಕಡೆಗಳಿಗೆ ಹೋಗುವಾಗ ಮುಪ್ಪುಕೋಲಿನಂತೆ ನನ್ನ ಕೈ ಹಿಡಿದು ನನಿಗೆ ಪ್ರಾಥಮಿಕವಾಗಿ ಅರಿವನ್ನು ಮೂಡಿಸುತ್ತಾ ಊರು,ಆಸುಪಾಸು,ಕುಟುಂಬ ಎಲ್ಲವನ್ನೂ ತೋರಿಸುತ್ತಿದ್ದರು, ನೆನಪಿನಲ್ಲಿರುವಂತೆ ಉರುಳಿಗುಡ್ಡೆ ಊರು ತಲುಪಲು ಅವತ್ತು ಬಹಳ ಕಷ್ಟ (ಕಾಲ್ನಡೆಯಲ್ಲೇ ),ಬಹುಷ: ಆ ಪ್ರದೇಶದಲ್ಲಿರುವ ನೆಂಟರ ಮನೆಗೂ ಸಹಿತ ನಾನು ಹೋಗಿದ್ದರೆ ಅಜ್ಜನ ಜೊತೆ ಮಾತ್ರ ಅಲ್ಲದೇ ಇಂದಿಗೂ ಆ ಕಡೆ ಸಂಚರಿಸಲಿಲ್ಲಾ,ಅವರು ಬೆಳಿಗ್ಗೆ ಮೀನು ಹಿಡಿಯಲು ಪಯಶ್ವಿನಿ ಹೊಳೆಗೆ ಹಾಕಿದ ಮೀನು ಬಲೆ ತೆಗೆಯಲು ಹೋಗುವಾಗಲೂ,ಅವರಲ್ಲಿ ಪರವಾನಿಗೆ ಇರುವ ಬಂದೂಕು ಮೂಲಕ ಆಗಾಗ ಮಂಗಗಳ ಗುಂಪನ್ನು ಓಡಿಸುವಾಗಲೂ ಒಬ್ಬಂಟಿರಾಗಿ ಹೋಗದೇ ನನ್ನ ಕೈ ಹಿಡಿದು ಜೊತೆಯಲ್ಲಿ ಸೇರಿಸಿ ಹೇಳಿಕೊಡುತ್ತಿದ್ದರು.
ಮೆಟ್ರಿಕ್ ವಿದ್ಯಾಭ್ಯಾಸದ ಬಳಿಕ ಉನ್ನತ ವಿಧ್ಯಾಭಾಸಕಾಗಿ ಬೆಳ್ಳಾರೆಗೆ ಕರೆದು ಕೊಂಡು ಹೋದದ್ದೂ,ಅಲ್ಲಿಗೆ ಹೋಗುವಾಗ ಬಳಸಿದವಾಹನವೂ (NP ಲಾರಿ )ಎಲ್ಲವೂ ಚಿರಸ್ಮರೆಣೆಯಾಗಿ ಉಳಿದಿದೆ,ತಮಗೆ ಅರಿವಿಲ್ಲದ ಕ್ಷೇತ್ರಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಚಿಕ್ಕಪ್ಪ ಶಂಸು ಅವರನ್ನು ನೇಮಿಸಿದ್ದೂ ಅವರು ಮಂಗಳೂರಿನಲ್ಲಿ KPT ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ದಕ್ಕಿಸಿದ್ದೂ,ತುಂಬೆ ಕಾಲೇಜುಗೆ ಕೈ ಹಾಕಿದ್ದೆಲ್ಲವೂ ಅಜ್ಜರ ದಿಕ್ಸೂಚಿಯ ಉದಾಹರಣಗಳು ಮಾತ್ರ,ಎಷ್ಟರಮಟ್ಟಿಗೆ ಅವರು ಆಸರೆ ಅಂದರೆ ಆಗಾಗ ಶಾಲಾ ಕಾಲೇಜುಗಳಲ್ಲಿ ಸಹಿ ಹಾಕುದಕ್ಕೆ ಅವರೇ ಬರಬೇಕಾದರೂ ಕೆಲವೊಮ್ಮೆ ಅವರಿಗೆ ಅನಾನುಕೂಲತೆಯಿರುವ ಸಂದರ್ಭದಲ್ಲಿ ನಾನೇ ಅವರ ಸಹಿ ಹಾಕುವುದಕ್ಕೆ ಕಲಿತು ಹಾಕುತ್ತುದ್ದೆ,ಅದರಲ್ಲಿ ಅವರು ಅರಬಿಯಲ್ಲಿ ಸಹಿ ಹಾಕುವಾಗ ಅರಬಿಯಲ್ಲಿ ಹೆಸರು ಜೊತೆ ರುಜಿ ಎಂದು ಸೇರಿಸಿ ಇಬ್ರಾಹಿಂ ರುಜಿ ಎಂದು ಹಾಕುತ್ತಿದ್ದರು.
ಇದನ್ನೊಮ್ಮೆ ಆ ಬಾಲ್ಯ ಪ್ರಾಯದಲ್ಲಿ ಏನೆಂದು ತಿಳಿಯಲು ಮಾಮ (ಅಜ್ಜಿ )ಯಲ್ಲಿ ಕೇಳಿದೆ ಅದೇಕೆ ಅಜ್ಜ ರುಜಿ ಎಂದು ಹಾಕುತ್ತಾರೆ ?ಆಗ ಅವರು ಹೇಳಿ ಕೊಟ್ಟದ್ದು ಅದು ರುಜಿ ಅಂದರೆ ಸಹಿ ಎಂದು,ಈ ರೀತಿಯಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅವರ ಪಾತ್ರವೂ ಪ್ರಮುಖವಾಗಿದೆ,ಅಲ್ಲದೇ ನೀನು ವ್ರತ್ವಿಯಲ್ಲಿ ಒಬ್ಬ ಅಧ್ಯಾಪಕನಾಗಿರುವಂತೆ ಸೂಚಿಸಿ ಸರಕಾರಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದು ಅವರ ಅನಾರೋಗ್ಯ ಅನಾನುಕೂಲತೆಯ ಸಂದರ್ಭದಲ್ಲಾಗಿದ್ದು ,ಆದ್ದರಿಂದಲೇನೋ ಸರಕಾರಿ ಕೆಲಸಕ್ಕಾಗಿ ಕೈ ಹಾಕಿದ್ದರೂ ಅಷ್ಟೊಂದು ತಾಳ್ಮೆ ವಹಿಸಲು ನಮ್ಮ ಆರ್ಥಿಕ ಸ್ಥಿತಿಗತಿ ಒಪ್ಪದಿದ್ದರಿಂದ ಒಂದೆರಡು ವರ್ಷಗಳು ಪಕ್ಕದ ಜಿಲ್ಲೆಯ ಒಂದೆರಡು ಶಾಲೆಗಳಲ್ಲಿ ಪ್ರಾಧ್ಯಾಪಕನಾಗಿ ಸೇವೆಸಲ್ಲಿಸಿದ್ದರೂ, ಅದನ್ನೇ ಮುಂದುವರಿಸಲು ಕುಟುಂಬದ ಆರ್ಥಿಕ ಕ್ಷೇತ್ರವೂ ಅನುಕೂಲವಾಗದಿದ್ದರಿಂದ ಬೇರೆ ದಾರಿ ಹಿಡಿದು ವಿದೇಶಕ್ಕೆ ಕಾಲಿರಿಸಿದೆ,ಹೀಗೆ ನನ್ನ ಜೀವನದ ಪ್ರಾಥಮಿಕ ಕಾಲದಲ್ಲಿ ಉಪ್ಪಾಪರವರ ಸಲಹೆ ಸೂಚನೆಗಳ ಮೂಲಕವಿರುವ ದಿಕ್ಸೂಚಿ ಬಹಳ ಮೂಲ್ಯಯುತವಾಗಿದ್ದವು.
ಇದೆಕ್ಕೆಲ್ಲಾ ದಕ್ಷಿಣೆಯಾಗಿ ನೀಡಲು ನನ್ನಿಂದ ಏನೂ ಸಾಧ್ಯವಾಗಲಿಲ್ಲಾ,ಆದರೆ ಒಂದು ನೆಮ್ಮದಿ ಮಾತ್ರ ಮನಸ್ಸಿನಲ್ಲಿದೆ,ಅಂದರೆ ಮುಪ್ಪಿನ ಸಹಜ ಅನಾರೋಗ್ಯ ಅನಾನುಕೂಲ ಸಮಯದಲ್ಲಿ ನಾನು ಕಾರಣಾಂತರಗಳಿಂದ ಮನೆಯಲ್ಲಿಯೇ ಇದ್ದರಿಂದಲೂ ಅಳಿಲ ಸೇವೆ ಮಾಡಲು ಅವಕಾಶ ದೊರೆಯಿತು,ಪ್ರತೀ ದಿನ ಅವರು ಪ್ರಾಥಮಿಕ ಅವಶ್ಯಕತೆಗಳಿಗೂ ಹಾಗೂ ಇನ್ನಿತರ ಅವಶ್ಯಕತೆಗಳಿಗಾಗಿ ಮನೆ ಬಾಗಿಲು ದಾಟಿ ಹೊರ ಬರಲು ನೆನಸಿದಾಗ ಜೋರಾಗಿರುವ …ಕರೆ ಕೇಳಿದ ತಕ್ಷಣ ಗದ್ದೆ ದಾಟಿ ಓಡಿ ಹೋಗಿ ಕೈ ಹಿಡಿದು ಸೇವೆ ಮಾಡುವಾಗ ಅವತ್ತು ನನ್ನ ಕೈ ಹಿಡಿದು ಜಗತ್ತು ತೋರಿಸಿದ ಸವಿನೆನಪುಗಳು ಚಿರಸ್ಮರಣೀಯವಾಗಿದೆ .
ಅಲ್ಲಾಹು ಕಬೂಲ್ ಮಾಡಲಿ ಅಷ್ಟೇ …!, ವರ್ಷಗಳ ಹಿಂದೆ ಒಂದು ರಮದಾನ್ ತಿಂಗಳು ಇಫ್ತಾರ್ ಮುಗಿದ ಬಳಿಕ ಮಗರಿಬ್ ನ ಸಮಯ ಕಳೆದು ಅಜ್ಜರ ಮನೆಯಿಂದ ಯಾರೋ ಜೋರಾಗಿ ಕರೆದ ಒಂದು ಶಬ್ಧ ಕೇಳಿಸುತ್ತದೆ,ಕೇಳಿದ ತಕ್ಷಣ ಓಡಿ ಹೋದಾಗ ಉಪ್ಪಪಾರ ಬಳಿ ಮಾಮ (ಅಜ್ಜಿ )ಕುಳಿತು ಶಹಾದತ್ ಹೇಳಿ ಕೊಡುತ್ತಿದ್ದು … ಅಜ್ಜರು ಎಂದೆಂದಿಗೂ ಬಾರದ ಇಹ ಲೋಕ ತ್ಯೆಜಿಸಿ ಯಾತ್ರೆಯಾದರು… ಇನ್ನಾಲಿಲ್ಲಾ ,ಜೊತೆಯಲ್ಲಿ ಅಜ್ಜಿಯ ಒಂದು ವಿಷಯವನ್ನು ಹೇಳದೇ ಇದು ಪೂರ್ತಿಯಾಗಲಾರದೆಂದು ಹೇಳಿ ಬರೆಯುತ್ತೇನೆ,ಅಜ್ಜಿ ಖದೀಜಾರವರು ಸಾಮಾನ್ಯವಾಗಿ ಕುರ್-ಆನ್ ಓದಲು ಅಜ್ಜರ ಕೊಠಡಿಯ ಬದಿಯಲ್ಲಿಯೇ ಕುಳಿತು ಕೊಳ್ಳುತ್ತಾರೆ,ಅಲ್ಲಿ ಕುಳಿತು ಓದುವಾಗ ತಪ್ಪಿದರೆ ಕೊಠಡಿಯಿಂದ ಅಜ್ಜರು ತಿದ್ದಿ ಓದಿ ಕೊಡುತ್ತಿರುವುದನ್ನು ಸಾಮನ್ಯವಾಗಿ ಗಮನಿಸಿದ್ದೇನೆ ಆದರೆ ಅವರು ಹಾಫಿಜ್ಹ್ ಏನೂ ಅಲ್ಲಾ,ಆದರೂ ಅವರ ಅನುಭವದ ನೆನಪಿನಲ್ಲಿ ತಿದ್ದಿ ಕೊಡುತ್ತಾರೆ ಅಷ್ಟೇ .. ಮಾಮವೂ ಕೂಡಾ ಕೆಲವು ವರ್ಷಗಳ ಹಿಂದೆ ಒಂದು ದುಲ್ ಹಿಜ್ಜ ತಿಂಗಳು ನಮ್ಮನ್ನಗಲಿದರು … ಇನ್ನಾಲಿಲ್ಲಾ … ಅಲ್ಲಾಹು ಸರ್ವ ಪಾಪಗಳ ಮನ್ನಿಸಿ ಪರಲೋಕ ವಿಜಯಗೊಳಿಸಲೀ.
ಒಂದಂತೂ ಸತ್ಯ … ಅವರು ಈ ಊರಿನಲ್ಲಿ ಇಸ್ಲಾಂ ದೀನಿಗಾಗಿ ಸೇವೆ ಮಾಡಲು ನೂರಾರು ಧಾರ್ಮಿಕ ,ಲೌಖಿಕ ಕ್ಷೇತ್ರಗಳಿಗೆ ಮೊಮ್ಮಕ್ಕಳನ್ನೂ ಉಡುಗೊರೆಯಾಗಿ ಕೊಟ್ಟು ಬಿಟ್ಟು ಹೋಗಿದ್ದಾರೆ,ಇವರೆಲ್ಲಾ ಒಳಿತುಗಳ ಫಲ ಅವರ ಖಬರ್ ಜೀವನವನ್ನು ಬೆಳಗೊಳಿಸಲಿದೆ,ಜೊತೆಯಲ್ಲಿ ನಮ್ಮನ್ನಗಲಿದ ಅವರ ಅಣ್ಣ ತಮ್ಮಂದಿರು ಮಕ್ಕಳು ಮೊಮ್ಮಕ್ಕಳು ಎಲ್ಲರನ್ನೂ ಅವರಖಬರ್ ಜೀವನ ಬೆಳಗುವಂತಾಗಲೀ ಎಂದು ಪ್ರಾರ್ಥಿಸುತ್ತಾ ,ಇದನ್ನು ಓದಿದ ಅಜ್ಜರ ಕುಟುಂಬ ಮಿತ್ರಾದಿಗಳೂ,ಸ್ನೇಹಿತರೂ, ಮೊಹಲ್ಲಾ ಮಿತ್ರಾದಿಗಳೂ,ಊರವರೂ ಎಲ್ಲಾರೂ ಸಾಧ್ಯವಿದ್ದರೆ ಒಂದು ಯಾಸೀನ್ ಸೂರಾ ಓದಿಯೋ,ಅಥವಾ ಫಾತಿಹಾಆದರೂ ಓದಿ ದುಆ ಮಾಡಬೇಕಾಗಿ ಕೇಳಿಕೊಳ್ಳುತ್ತೇವೆ.
— ಅಬ್ದುಲ್ ನಾಸಿರ್ ಗಾಳಿಮುಖ (ಮೊಮ್ಮಗ )
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.