ದುಬೈ (www.vknews.in) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ದಾರುನ್ನೂರ್ ಯು ಎ ಇ ಕಲ್ಚರಲ್ ಸಮಿತಿ ವತಿಯಿಂದ ಏಪ್ರಿಲ್ ತಿಂಗಳ 8 ನೇ ತಾರೀಕಿನಂದು ಶಾರ್ಜಾ ಮುವೈಲಿಯದಲ್ಲಿರುವ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆಸಲ್ಪಡುವ ಇಫ್ತಾರ್ ವಿದ್ ಖಾಝೀಯಾರ್ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದಾರುನ್ನೂರ್ ಕೇಂದ್ರ ಸಮಿತಿ ಅದ್ಯಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ ಹರಿ , ದಾರುನ್ನೂರ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಅಬ್ದುಲ್ ಸಮದ್ ಹಾಜಿ ಮಂಗಳೂರು , ದಾರುನ್ನೂರ್ ಕೇಂದ್ರ ಸಮಿತಿ ಕೋಶಾಧಿಕಾರಿ ಜನಾಬ್ ಉಸ್ಮಾನ್ ಹಾಜಿ ತೋಡಾರ್ ಏರ್ ಇಂಡಿಯಾ , ದಾರುನ್ನೂರ್ ಮುದರ್ರಿಸ್ ಹುಸೈನ್ ರಹ್ಮಾನಿ ಮೊದಲಾದವರು ದಮ್ಮಾಮ್ ನಿಂದ ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಬಂದಿಳಿದರು. ದಾರುನ್ನೂರ್ ಪ್ರಚಾರಾರ್ಥ ಕಳೆದ 15 ದಿನಗಳಿಂದ ಸೌದಿ ಅರೆಬಿಯಾದ ವಿವಿಧ ಭಾಗಗಳಿಗೆ ಸಂದರ್ಶಿಸಿ ಅವರು ಯು ಎ ಇ ಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಹೂಗುಚ್ಚ ನೀಡಿ ಸ್ವೀಕರಿಸಲಾಯಿತು.
ಈ ಸಂದರ್ಭ ದಾರುನ್ನೂರ್ ಯು ಎ ಇ ಅದ್ಯಕ್ಷರಾದ ಜನಾಬ್ ಮಹಮ್ಮದ್ ಮಾಡಾವು, ಮುಖ್ಯ ಸಲಹೆಗಾರ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಗೌರವಾದ್ಯಕ್ಷ ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ , ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ಕೋಶಾಧಿಕಾರಿ ಜನಾಬ್ ಮಹಮ್ಮದ್ ಸಿರಾಜ್ ಬಿ ಸಿ ರೋಡ್, ದುಬೈ ಸ್ಟೇಟ್ ಅದ್ಯಕ್ಷ ಮತ್ತು ಇಫ್ತಾರ್ ಚೇರ್ಮೇನ್ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ,ಕಾರ್ಯದರ್ಶಿ ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಉಪಾದ್ಯಕ್ಷ ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್, ದುಬೈ ಸ್ಟೇಟ್ ಪ್ರಧಾನ ಕಾರ್ಯದರ್ಶಿ ಜನಾಬ್ ಮಹಮ್ಮದ್ ಶಬೀರ್ ಫರಂಗಿಪೇಟೆ, ಸಂಘಟನೆ ಕಾರ್ಯದರ್ಶಿ ಜನಾಬ್ ನವಾಝ್ ಬಿ ಸಿ ರೋಡ್, ದಾರುನ್ನೂರ್ ಪ್ರಮುಖರಾದ ಜನಾಬ್ ಜಾಬಿರ್ ಬಪ್ಪಳಿಗೆ , ಜನಾಬ್ ಅಝೀಝ್ ಸೊಂಪಾಡಿ, ಉಸ್ತಾದ್ ಅಬ್ದುಲ್ಲಾ ನಈಮಿ ಈಶ್ವರ ಮಂಗಲ, ಜನಾಬ್ ಮುನೀರ್ ಕಾಂಞಂಗಾಡ್, ಜನಾಬ್ ಇಸ್ಮಾಯಿಲ್ ಮುಂಧೀರ್, ಜನಾಬ್ ಅಕ್ಬರ್ ಹಂಡೆಲ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ರೆಸ್ಟೋರೆಂಟ್ ಒಂದರಲ್ಲಿ ದಾರುನ್ನೂರ್ ಕೇಂದ್ರ ಸಮಿತಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭ ಖಾಝಿ ತ್ವಾಕ ಉಸ್ತಾದರು ಶಾರ್ಜಾ ಮುವೈಲಿಯದಲ್ಲಿರುವ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ದಿನಾಂಕ 08/04/2023 ನೇ ಶನಿವಾರದಂದು ಆಸರ್ ನಮಾಝ್ ಬಳಿಕ ನಡೆಯುವ ಮಜ್ಲಿಸುನ್ನೂರ್ ಆದ್ಯಾತ್ಮಿಕ ಶಿಬಿರ , ಉಸ್ತಾದ್ ರಕೀಬ್ ಹುದವಿಯವರ ಪ್ರಭಾಷಣ ಬಳಿಕ ಬೃಹತ್ ಇಫ್ತಾರ್ ಕೂಟ, ಉಲಮಾ ಉಮಾರಾ ಸಂಘಮಕ್ಕೆ ಕುಟುಂಬ ಸಮೇತ ಎಲ್ಲರೂ ಪಾಲ್ಗೊಳ್ಳಬೇಕೆಂದು ಆಮಂತ್ರಣವನ್ನು ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.