ತಾನೂರ್ (ವಿಶ್ವ ಕನ್ನಡಿಗ ನ್ಯೂಸ್) : ತಾನೂರ್ ದೋಣಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸಬರುದ್ದೀನ್ ಕೇರಳ ಪೊಲೀಸರಿಗೆ ಹೆಮ್ಮೆಯಾಗಿದ್ದರು. ಅವರು ತಾನೂರ್ ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಮಲಪ್ಪುರಂ ಎಸ್ಪಿ ಅವರ ವಿಶೇಷ ದಳದ ಸದಸ್ಯರಾಗಿದ್ದರು.
ಕಳ್ಳತನ ಪ್ರಕರಣಗಳು ಸೇರಿದಂತೆ ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಸಬರುದ್ದೀನ್ ಸಾವಿನಿಂದ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಇನ್ನೂ ಚೇತರಿಸಿಕೊಂಡಿಲ್ಲ. ಸಬರುದ್ದೀನ್ ಮಾದಕವಸ್ತು ಕಳ್ಳಸಾಗಣೆ ಮತ್ತು ಕಳ್ಳತನ ಪ್ರಕರಣಗಳ ತನಿಖೆಯ ಭಾಗವಾಗಿದ್ದರು. ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸುವವರೆಗೆ ಕೂದಲು ಕತ್ತರಿಸುವುದಿಲ್ಲ ಎಂದು ಘೋಷಿಸಿದ ಸಬರುದ್ದೀನ್, ಬಳಿಕ ಆರೋಪಿಗಳನ್ನು ಬಂಧಿಸಿ ತಲೆಕೂದಲು ಕತ್ತರಿಸಿದ್ದರು.
ಅದೇ ರೀತಿ ತಾನೂರು ಬೀಚ್ ರಸ್ತೆಯ ಮಿಲ್ಮಾ ಬೂತ್ನಲ್ಲಿ ಸ್ಕೂಟರ್ ಕದ್ದ ಕಳ್ಳನಿಗಾಗಿ ಪೊಲೀಸ್ ಅಧಿಕಾರಿಗಳು ದಿನಗಟ್ಟಲೆ ಹುಡುಕಾಟ ನಡೆಸಿದ್ದರು. ತಾನೂರ್ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕಳ್ಳರು ಸ್ಕೂಟರ್ ಕದ್ದೊಯ್ದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿತ್ತು. ಮಾಸ್ಕ್ ಧರಿಸಿದ್ದರಿಂದ ಆರೋಪಿಯ ಮುಖವೂ ಸ್ಪಷ್ಟವಾಗಿರಲಿಲ್ಲ.
ಈ ಪ್ರಕರಣವನ್ನು ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಸಬರುದ್ದೀನ್ ಮತ್ತು ಸಲೇಶ್ ಎಂಟನೇ ದಿನ 15 ವರ್ಷದ ಆರೋಪಿಯನ್ನು ಬಂಧಿಸಿದ್ದರು. ಈ ರೀತಿಯ ಹಲವು ಹಲವು ಪ್ರಕರಣಗಳನ್ನು ಭೇಧಿಸುವಲ್ಲಿ ಸಬರುದ್ದೀನ್ ದಕ್ಷ ಅಧಿಕಾರಿಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.