ಬಂಟ್ವಾಳ (www.vknews.in) : ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ, ಜಾಗರೂಕತೆಯಿಂದ ಹಕ್ಕನ್ನು ಚಲಾಯಿಸಬೇಕು, ಮತದಾನ ಹತ್ತಿರ ಬರುತ್ತಿದ್ದು ರಾಜಕೀಯ ಪಕ್ಷಗಳು ತನ್ನ ಕಾರ್ಯ ಚಟುವಟಿಕೆಯನ್ನು ನಡೆಸುತ್ತಿದೆ. ಆದರೆ ಈ ರಾಜಕೀಯ ಆಟಕ್ಕೆ ಯುವಜನತೆ ಪರಸ್ಪರ ಸಂಬಂಧಗಳು ಕಳಚಿ ಹೋಗದಂತೆ ನೋಡಿಕೊಳ್ಳಬೇಕು. ಕೇವಲ ರಾಜಕೀಯಕ್ಕಾಗಿ ಯುವಕರು ಸೌಹಾರ್ದತೆ ಹಾಗೂ ಊರಿನ ಜಮಾಅತಿನ ಶಾಂತಿಗೆ ಧಕ್ಕೆಉಂಟಾಗುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ನಡೆದುಕೊಳ್ಳಬಾರದು.
ಇಂದಿನ ಯುವಕರು ಮುಂದೆ ಮಸೀದಿ ಮದರಸ ಹಾಗೂ ಜಮಾಅತಿನ ಇಸ್ಲಾಮಿಕ್ ಕಾರ್ಯ ಚಟುವಟಿಕೆಗಳಿಗೆ ನೇತೃತ್ವ ನೀಡಬೇಕಾದವರು. ಆದುದರಿಂದ ಯುವಕರು ತಮ್ಮ ಜೀವನವನ್ನು ಸಂಪೂರ್ಣವಾಗಿ ಇಲಾಹೀ ಮಾರ್ಗದರ್ಶನದಲ್ಲಿ ಮುನ್ನಡೆಸಬೇಕು. ನಮ್ಮ ಮಹಲ್ಲಿಗೆ ಉತ್ತಮವಾದ ಹೆಸರನ್ನು ಗಳಿಸಿಕೊಟ್ಟ ಪೂರ್ವಿಕ ಗುರುಹಿರಿಯರ ಶ್ರಮಗಳನ್ನು ಅರ್ತೈಸಿಕೊಂಡು ಮಹಲ್ಲಿನ ಹೆಸರನ್ನು ಉಳಿಸಿ ಅಭಿವೃದ್ಧಿಗೆ ಕೊಂಡಯ್ಯಲು ಪಣತೊಡಬೇಕು.
ಯುವಕರು ಕುಟುಂಬವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಂದಿರುವವರಾಗಿದ್ದು ವಿವೇಕ ಹಾಗೂ ಕ್ರಿಯಾಶೀಲತೆ ಇರುವ ಒಳಿತಿನ ಚಿಂತನೆಗಳನ್ನು ಹೆಚ್ಚಿಸಿ. ಯಾವುದೇ ರೀತಿಯ ಮಾಧಕ ವ್ಯಸನಕ್ಕೆ ಬಲಿಯಾಗದಿರಿ.ಇಂದು ಮಾಧಕ ವಸ್ತುಗಳ ಉಪಯೋಗ ಹೆಚ್ಚುತ್ತಿದ್ದು ಇದು ಮುಂಬರುವ ದಿನಗಳಲ್ಲಿ ಸಮುದಾಯಕ್ಕೆ ಅತಿದೊಡ್ಡ ಮಾರಕವಾಗಲಿದೆ. ಆದುದರಿಂದ ಯುವಕರೇ ಇದರ ವಿರುದ್ಧ ಧ್ವನಿಯೆತ್ತಿ ಮುಂಧಿನ ಪೀಳಿಗೆಯನ್ನು ಒಳಿತಿನೆಡೆಗೆ ಕೊಂಡೊಯ್ಯಲು ಯುವಕರು ಮುಂದೆ ಬರಬೇಕು. ಹಾಗೂ ಹಿರಿಯರು ಮತ್ತು ಉಲಮಾ ಶ್ರೇಷ್ಠ ರೊಂದಿಗೆ ಗೌರವದಿಂದ ವರ್ತಿಸಿ. ಅವರ ಉಪದೇಶದಂತೆ ಜೀವನವನ್ನು ಮುಂದೆ ಸಾಗಿಸಲು ತಯಾರಾಗಿ.
ಮಾತ್ರವಲ್ಲ ಮುಂದೆ ಬರುವ ಚುನಾವಣೆಯ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಸಂದೇಶವನ್ನು ರವಾನಿಸುವಾಗ ಜಾಗೃತವಹಿಸಿ. ದುಡುಕಿನ ನಿರ್ಧಾರ, ರಾಜಕೀಯ ಹುಚ್ಚಾಟಕ್ಕೆ ನಿಮ್ಮ ಭವಿಷ್ಯವನ್ನು ಹಾಳು ಮಾಡದಿರಿ. ಸೌಹಾರ್ದತೆಯಲ್ಲಿ, ಹೊಂದಾಣಿಕೆಯಲ್ಲಿ ಇರಬೇಕು ಎಂದು, ಮುಹಿಯ್ಯುದ್ದೀನ್ ಜುಮಾ ಮಸೀದಿ ಮಿತ್ತಬೈಲ್ ಇದರ ಖತೀಬರಾದ ಹಾಜಿ ಎಂ,ವೈ.ಅಶ್ರಫ್ ಫೈಝಿ ಯುವಕರಿಗೆ ಕರೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.