(www.vknews.in) ; ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ಜಿಲ್ಲೆಯ ವತಿಯಿಂದ ವಿಧಾನಸಭೆ ಚುನವಣೆಯ ಜಾಗೃತಿಗಾಗಿ ಕಾರ್ಕಳದ ವಿವಿಧ ಪ್ರಮುಖ ರಸ್ತೆಗಳಲ್ಲಿ 100% ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಹಿ ಸಂಗ್ರಹ ಅಭಿಯಾನ ಮತ್ತು ನಗರದ ವಿವಿಧ ಕಾಲೇಜುಗಳಲಿ ಮತದಾನದ ಜಾಗೃತಿ ಮತ್ತು ಸಹಿ ಸಂಗ್ರಹ ಅಭಿಯಾನ ಮತ್ತು ಕರಪತ್ರವನ್ನು ಹಂಚಲಾಯಿತು. ವಿದ್ಯಾರ್ಥಿಗಳಿಂದ ನಮ್ಮ ಹಕ್ಕು, ನಮ್ಮ ಮತ. ನಮ್ಮ ಮತ, ನಮ್ಮ ಭವಿಷ್ಯ. ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಹತ್ತು ಹಲವಾರು ಘೋಷಣೆಗಳನ್ನು ಕೂಗುತ್ತ ಸಮಾಜಕ್ಕೆ ಮತದಾನ ಚಲಾಯಿಸುವಂತೆ ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಹಿರಿಯ ಕಾರ್ಯಕರ್ತರದ ಶಶಾಂಕ್ ಶ್ರೀವತಾಯ, ಶೀತಲ್ ಕುಮಾರ್ ಜೈನ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ವಿಭಾಗ ಸೇವಾ ಪ್ರಮುಖ ಆಶಿಶ್ ಶೆಟ್ಟಿ ಬೋಳ, ಜಿಲ್ಲಾ ಸಂಚಲಕ್ ಯುಕೇಶ್, ಶಿವರುದ್ರ ಪಾಟೀಲ್, ಶ್ರೇಯಸ್ ಮತ್ತಿತರು ಉಪಸ್ಥಿತರಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.