(www.vknews.in) ; ಅಲ್ ಹರಮೈನ್ ಜುಬೈಲ್ ಸೂರಿಂಜೆ ಸಮಿತಿಯ ವಾರ್ಷಿಕ ಸಭೆಯು 19 ಮೇ 2023 ರಂದು ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಹಮೀದ್ ಬೊಳ್ಳಾರ್ ರವರ ಅಧ್ಯಕ್ಷತೆಯೊಂದಿಗೆ ಹೋಟೆಲ್ cookxon ಜುಬೈಲ್ನಲ್ಲಿ ಜರಗಿತು.
ಎಸ್ಎ ಜಲೀಲ್ ಅವರ ದುವಾದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ದಾವೂದ್ ಪಂಜಾ ಅವರು ಕಿರಾತ್ ಪಠಿಸಿದರು. ಸ್ವಾಗತ ಭಾಷಣವನ್ನು ಇಝುದ್ದೀನ್ ಎಸ್.ಎ ಮಾಡಿದರು. ಸಭೆಯಲ್ಲಿ ಗೌರವಾನ್ವಿತ ಅತಿಥಿ ಶ್ರೀ ಜಲೀಲ್ ಎಸ್ಎ (ಅಧ್ಯಕ್ಷರು ಜಮಾತ್ ಕಮಿಟಿ ಸೂರಿಂಜೆ) ಮತ್ತು ಶ್ರೀ ಅಯ್ಯೂಬ್ ಸೂರಿಂಜೆ (ಮೆಂಬರ್ ಜಮಾತ್ ಕಮಿಟಿ ಸೂರಿಂಜೆ) ಅವರನ್ನು ಸನ್ಮಾನಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಶ್ರೀ ಅಬ್ದುಲ್ಲಾ ನಿಶಾನ್ ಮಿಲನ್ ಅವರು ಸಭೆಯನ್ನು ಉದ್ಘಾಟಿಸಿದರು. ವರದಿಯನ್ನು ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಬಿಎ ಮತ್ತು ಹಣಕಾಸು ವರದಿಯನ್ನು ಕ್ಯಾಷಿಯರ್ ಶ್ರೀ ಉಬೈದುಲ್ಲಾ ಎಸ್ಎ ಸೂರಿಂಜೆ ಮಂಡಿಸಿದರು.
2023-2024 ನೇ ಸಾಲಿನ ಸಮಿತಿಯನ್ನು ಶ್ರೀ ಹಮೀದ್ ಬೊಲ್ಲಾರ್ ಮತ್ತು ಶ್ರೀ ಸುಲೈಮಾನ್ ಮಿಲನ್ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ. ಕೊನೆಯಲ್ಲಿ 3 ಸ್ವಲಾತ್ಗಳೊಂದಿಗೆ ಶ್ರೀ ನಿಯಾಜ್ ಮಿಲನ್ ಧನ್ಯವಾದವನ್ನು ಪ್ರಸ್ತಾಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.