ಬೆಳಗಾವಿ (ವಿಶ್ವ ಕನ್ನಡಿಗ ನ್ಯೂಸ್) : ಆಟವಾಡುವಾಗ ಹೈಟೆನ್ಶನ್ ವೈರ್ ಸ್ಪರ್ಶಿಸಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಇಲ್ಲಿನ ಮಚ್ಛೆ ಗ್ರಾಮದಲ್ಲಿ ನಡೆದಿದೆ. ಮಧುರಾ ಮೋರೆ (13) ಮೃತ ದುರ್ದೈವಿ. ಮಧುರಾ ಆಟವಾಡುತ್ತಾ ನಿಂತಿದ್ದಾಗ ಮನೆ ಮುಂದಿನ ಹೈಟೆನ್ಷನ್ ವೈಯರ್ ತಾಗಿದ್ದು ಶಾಕ್ ಹೊಡೆದಿದೆ. ಮನೆಯ ಮುಂಭಾಗವೇ ವಿದ್ಯುತ್ ತಂತಿ ಹಾದುಹೋಗಿದ್ದೇ ಈ ದುರಂತಕ್ಕೆ ಕಾರಣ.
ಈ ಸ್ಥಳದಲ್ಲಿ ಹೈಟೆನ್ಶನ್ ವೈರ್ ಹಾದುಹೋಗಿದ್ದರಿಂದ, ಮನೆ ಕಟ್ಟದಂತೆ ಹೆಸ್ಕಾಂ ಅಧಿಕಾರಿಗಳು ಈ ಹಿಂದೆಯೇ ನೋಟಿಸ್ ಜಾರಿ ಮಾಡಿದ್ದರು. ಆದರೂ ನಿರ್ಲಕ್ಷ್ಯ ವಹಿಸಿ ಬಾಲಕಿ ಕುಟುಂಬಸ್ಥರು ಮನೆಯನ್ನು ನಿರ್ಮಿಸಿದ್ದರು. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.