ಗಾಂಧಿನಗರ (ವಿಶ್ವ ಕನ್ನಡಿಗ ನ್ಯೂಸ್) : ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಗುಜರಾತ್ ದೇಶದ ಶಿಕ್ಷಣ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಾರಿಯ 10ನೇ ತರಗತಿ ಪರೀಕ್ಷೆ ಫಲಿತಾಂಶ ಹೊರಬಿದ್ದಾಗ ರಾಜ್ಯದ 157 ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಗೆಲುವು ಸಾಧಿಸಿರಲಿಲ್ಲ. 1,084 ಶಾಲೆಗಳಲ್ಲಿ ಶೇ.30ಕ್ಕಿಂತ ಕಡಿಮೆ ಪಾಸಾಗಿದೆ. ರಾಜ್ಯದಲ್ಲಿ ಒಟ್ಟಾರೆ ಯಶಸ್ಸಿನ ಪ್ರಮಾಣ ಶೇ.64.62 ರಷ್ಟಿದೆ. 272 ಶಾಲೆಗಳು ಮಾತ್ರ ಶೇ 100ರಷ್ಟು ಉತ್ತೀರ್ಣವಾಗಿವೆ.
ರಾಜ್ಯದ 3743 ಶಾಲೆಗಳಲ್ಲಿ ಉತ್ತೀರ್ಣರ ಪ್ರಮಾಣವು ಶೇಕಡಾ 50 ಕ್ಕಿಂತ ಕಡಿಮೆಯಿದೆ. ಗುಜರಾತ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಗುರುವಾರ SSE 10 ನೇ ಫಲಿತಾಂಶ 2023 ಅನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ 121 ಶಾಲೆಗಳಲ್ಲಿ 10ನೇ ತರಗತಿಯಲ್ಲಿ ಯಾರೂ ಪಾಸಾಗಿರಲಿಲ್ಲ. ಈ ವರ್ಷ 157ಕ್ಕೆ ಏರಿಕೆಯಾಗಿದೆ.
ಗಣಿತದಲ್ಲಿಯೇ 1.96 ಲಕ್ಷ ಮಂದಿ ಸೋತಿದ್ದಾರೆ. ಈ ವರ್ಷ 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 14 ರಿಂದ ಮಾರ್ಚ್ 28 ರವರೆಗೆ ಪರೀಕ್ಷೆಗಳು ನಡೆಡಿದ್ದವು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.