(www.vknews.in) ; ಭಾರತದಾದ್ಯಂತ ಪ್ರಸಿದ್ಧಿ ಪಡೆದಿರುವ ಹಿರಿಯ ಸಿತಾರ್ ವಿದ್ವಾಸರು ಪಂಡಿತ್ ವಿದುರ್ ಮಹಾಜನ್ ಅವರನ್ನು ಕತಾರಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿ ಸದಸ್ಯರು ಅಧ್ಯಕ್ಷರಾದ ಶ್ರೀ. ಏ.ಪಿ. ಮಣಿಕಂಟನ್ ಹಾಗು ಐ.ಸಿ.ಸಿ ಉಪಾಧ್ಯಕ್ಷರಾಗಿರುವ ಕರ್ನಾಟಕ ಮೂಲದ ಶ್ರೀ ಸುಭ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಮೇ ೩ ನೇ ತಾರೀಖಿನಿಂದ ಚಾಲನೆಯಲ್ಲಿರುವ ಬುಧವಾರದ ಸಂಭ್ರಮಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಸಭೆಯಲ್ಲಿ ಶ್ರೀಯುತರನ್ನು ಆದರಿಸಿ ಸನ್ಮಾನಿಸಲಾಯಿತು. ಐ.ಸಿ.ಸಿ ಯ ಅಶೋಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ಯು.ತಿ.ಎಸ್. ಅಧ್ಯಕ್ಷರಾದ ಶ್ರೀ ಮಣಿ ಭಾರತಿ ಹಾಗು ಟಿ.ಎಸ್.ಜೆ.ವಿ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಮುಸ್ತಫ ಅವರನ್ನು ತಮ್ಮ ಸಮಾಜಪರ ಸೇವೆ ಹಾಗು ಐ.ಸಿ.ಸಿ ಕೇಂದ್ರಕ್ಕೆ ಇವರುಗಳು ನೀಡಿರುವ ಸಹಾಯವನ್ನು ಗುರುತಿಸಿ ಸನ್ಮಾನಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.