ಆಳಂದ (www.vknews,in) : ತಾಲೂಕಿನ ಯಳಸಂಗಿ ಗ್ರಾಮದಲ್ಲಿ ತನ್ನ ಗೆಳತಿಯರೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ವೇಳೆ ಕಾಲ ಬೆರಳಿಗೆ ಹಾವು ಕಚ್ಚಿದ ಪರಿಣಾಮ ಪಿಯುಸಿ ಪೂರೈಸಿದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಪೂಜಾ ಯಲ್ಲಾಲಿಂಗ್ ಹೂಗಾರ (18), ಎಂಬ ವಿದ್ಯಾರ್ಥಿನಿ ಹಾವು ಕಡಿದು ಮೃತಪಟ್ಟ ದುರ್ದೈವಿ.
ಪೂಜಾ ಪ್ರಸಕ್ತ ಸಾಲಿನ ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ಉತ್ತೀರ್ಣಳಾಗಿದ್ದು, ಮುಂದೆ ಬಿಎ ಪ್ರವೇಶ ಪಡೆಯಲು ಗೆಳತಿಯೊಂದಿಗೆ ವಿಡಿಯೋ ಕಾಲ್ ಮೂಲಕ ಚರ್ಚಿಸತೊಡಗಿದ್ದ ವೇಳೆ ಮೊದಲು ಹಾವು ಬಲಗಾಲಿನ ಬೆರಳಿಗೆ ಕಚ್ಚಿದೆ. ಕಾಲು ಜಾಡಿಸಿದ್ದಾಗ ಮತ್ತೊಮ್ಮೆ ಇನ್ನೊಂದು ಬೆರಳಿಗೆ ಕಚ್ಚಿದ ಮೇಲೆ ನೋಡಿದ ಬಾಲಕಿ ಹಾವು ಎಂದು ಗೊತ್ತಾಗಿ ಕಿರುಚಾಡಿ ಹೊರಬಂದ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಝಳಕಿ ಬಿ. ಗ್ರಾಮದ ಆರ್ಯುವೇಧ ಔಷಧಿ ಚಿಕಿತ್ಸೆ ನೀಡಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಹಾವಿನ ವಿಷವೇರಿ ಬಾಲಕಿ ಮೃತಪಟ್ಟಿದ್ದಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.