ಕಾಞಂಗಾಡ್ (www.vknews.in) ; ಮೂರು ತಿಂಗಳ ಹಿಂದೆ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೊಸದುರ್ಗ ಅಯ್ಯಪ್ಪ ಗ್ಯಾರೇಜ್ ಬಳಿ ಆಟೋ ರಿಕ್ಷಾ ಚಾಲಕ ಪ್ರೇಮಕುಮಾರ್ ಅವರ ಪುತ್ರ ವಿನಯರಾಜ್ (20) ಮೃತರು.
ಕಳೆದ ಫೆಬ್ರವರಿ 20 ರಂದು ಪಾಲಕುಂನ ಭರಣಿ ಮಹಲ್ಸವಂ ಮುಗಿಸಿ ಹಿಂತಿರುಗುವಾಗ ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. ವಿನಯರಾಜ್ ಹಾಗೂ ಆತನ ಸ್ನೇಹಿತ ಕಿರಣ್ ಪ್ರಯಾಣಿಸುತ್ತಿದ್ದ ಬೈಕ್ ಹೊಸದುರ್ಗ ಲಿಟ್ಲ್ ಫ್ಲವರ್ ಸ್ಕೂಲ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಗಂಭೀರವಾಗಿ ಗಾಯಗೊಂಡ ವಿನಯರಾಜ್ ಅವರನ್ನು ಪರಿಯಾರಂನಲ್ಲಿರುವ ಕಣ್ಣೂರು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಾರದ ಹಿಂದೆ ಅವರನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.
ಮಂಗಳವಾರ ಬೆಳಗ್ಗೆ 6.20ಕ್ಕೆ ಸಾವು ಸಂಭವಿಸಿದೆ. ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಯುವಕನ ಪಾರ್ಥಿವ ಶರೀರವನ್ನು ಪುತಿಯಕೋಟ ಬಿಜೆಪಿ ಕಚೇರಿಯ ಕೆಜಿ ಮಾರಾರ್ ಮಂದಿರ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ಬಳಿಕ ಮನೆಗೆ ಕರೆದೊಯ್ದು ಸಂಬಂಧಿಕರಿಗೆ ತೋರಿಸಿ ಹೊಸಕೋಟೆಯ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಸಾವಿನ ಸುದ್ದಿ ತಿಳಿದು ನೂರಾರು ಮಂದಿ ಆಸ್ಪತ್ರೆ ಹಾಗೂ ಮನೆಗೆ ಆಗಮಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.