(www.vknews.in) ; ಸುಳ್ಯ ತಾಲೂಕಿನ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಪೋಷಕರ ಪ್ರತಿನಿಧಿ ಗಳಾದ ಎಸ್ಡಿಎಂಸಿ ಗಳ ಹೊಂದಾಣಿಕೆ ಕೊರತೆ ಯಿಂದ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಸ್ವಂತ ಜನ ವಸತಿ ಶಾಲೆಯಲ್ಲಿ ದಾಖಲಾತಿ ಆಗಿದ್ದ 25 ಮಕ್ಕಳು 4 ಕಿಲೋ ಮೀಟರ್ ದೂರದಲ್ಲಿ ದಾಖಲಾತಿ ಆಗಿರುವ ಪ್ರಸಂಗ ನಡೆದಿದೆ.
ಮಿತ್ತಡ್ಕ ಶಾಲೆಯಲ್ಲಿ ಆಯ್ಕೆ ಆಗಿದ್ದ ಎಸ್ಡಿಎಂಸಿ ಹಲವು ದಾನಿಗಳ ಸಹಕಾರದಿಂದ ಶಾಲೆಯನ್ನು ಅಭಿವೃದ್ದಿ ಪಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತಿರುವಾಗ ಮುಖ್ಯೋಪಾಧ್ಯಾಯಿನಿ ಯಾವುದೇ ರೀತಿಯ ಸಹಕಾರವನ್ನು ಕೊಡದ ಬಗ್ಗೆ ಹಲವು ರೀತಿಯ ಮನವಿಯನ್ನು ಸ್ಥಳೀಯ ಶಿಕ್ಷಣಾಧಿಕಾರಿಗಳಿಗೆ ಕೊಟ್ಟು ಕೂಡ ಯಾವುದೇ ರೀತಿಯ ಸ್ಪಂದನೆ ದೊರಕಿರಲಿಲ್ಲ, ಹಿಂದಿನ ಶಿಕ್ಷಣಾಧಿಕಾರಿಗಳು ಎಸ್ಡಿಎಂಸಿ ಸಭೆ ಕರೆದು ನಿಯಮ ಪ್ರಕಾರವಾಗಿ ಶಾಲೆಯ ಕಾರ್ಯಗಳನ್ನು ಕೈ ಗೊಳ್ಳಲು ಆದೇಶವನ್ನು ನೀಡಿ ಕೂಡ ಅದಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಸ್ಪಂದಿಸದೆ ,ಉದ್ಧಟತನವನ್ನು ತೋರುತ್ತಿರುವ ಬಗ್ಗೆ ಕೂಡ ದೂರುಗಳು ದಾಖಲಾಗಿತ್ತು. ಅದಲ್ಲದೆ ಶಾಲಾ ಎಸ್ಡಿಎಂಸಿ ಯು ಶಿಕ್ಷಕಿಯನ್ನು ವರ್ಗಾವಣೆ ಮಾಡುವ ಬಗ್ಗೆ ಪತ್ರಿಕಾ ಗೋಷ್ಠಿಯನ್ನು ಕರೆದು ಮನವಿ ಸಲ್ಲಿಸಿತ್ತು.
ಇಷ್ಟೆಲ್ಲಾ ಮನವಿಗಳು ಸ್ಥಳೀಯ ಶಿಕ್ಷಣಾಧಿಕಾರಿಗಳಿಗೆ ಕೊಟ್ಟು ಕೂಡ ಅವರು ಇದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ಗಳನ್ನು ಕೊಡದೆ ಇದ್ದು, ಎಸ್ಡಿಎಂಸಿ ಯು ಪತ್ರಿಕಾ ಗೋಷ್ಠಿಯನ್ನು ಕರೆದದ್ದನ್ನು ನೆಪವಾಗಿ ಇಟ್ಟುಕೊಂಡು ಶಿಕ್ಷಕರ ಸಂಘದ ಪದಾಧಿಕಾರಿಗಳು ,ಶಾಲೆಯ ಹಿರಿಯ ವಿಧ್ಯಾರ್ಥಿ ಗಳನ್ನ ಕರೆದು ಕೊಂಡು ಶಾಲೆಗೆ ಧಾವಿಸಿ ಬಂದು ಎಸ್ಡಿಎಂಸಿ ಅಧ್ಯಕ್ಷರನ್ನು ಬದಲಾಯಿಸುವ ಬಗ್ಗೆ ,ಹಾಗೂ ಎಸ್ಡಿಎಂಸಿ ಯನ್ನು ಬರ್ಖಾಸ್ತು ಗೊಳಿಸುವ ಬಗ್ಗೆ ದರ್ಪದಿಂದ ಹೇಳಿ ಅಧಿಕಾರ ದುರುಪಯೋಗ ಮಾಡಿದ್ದಾರೆ. ಎಸ್ಡಿಎಂಸಿ ಕಾನೂನಾತ್ಮಕ ವಾಗಿ ಇರುವಂತಹ ಸಮಿತಿಯಾಗಿದ್ದು, ಈ ಸಮಿತಿಯನ್ನು ಬರ್ಖಾಸ್ತು , ಗೊಳಿಸುವ ಅಥವಾ ಅಧ್ಯಕ್ಷರನ್ನು ಬದಲಾಯಿಸುವ ಯಾವುದೇ ರೀತಿಯ ಅಧಿಕಾರ ಶಿಕ್ಷಣಾಧಿಕಾರಿಗಳಿಗೆ ಇರುವುದಿಲ್ಲ.
ಅದಲ್ಲದೆ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಎಸ್ಡಿಎಂಸಿ ಗಳಿಗೆ ಏನಾದರೂ ತೊಂದರೆ ಗಳು ಬಂದರೆ ಅದನ್ನು ಪೋಷಕರು ಮತ್ತು ಅವರ ಪ್ರತಿನಿಧಿಗಳನ್ನು ಸೇರಿಸಿ ಚರ್ಚಿಸಿ ಅದಕ್ಕೆ ಬೇಕಾದ ಪರಿಹಾರಗಳನ್ನು ಕಂಡು ಕೊಳ್ಳಬೇಕೇ ವಿನಃ , ಯಾವುದೇ ಸಂಭಂದ ಇಲ್ಲದ ಸಂಘ ದ ಪದಾಧಿಕಾರಿಗಳನ್ನು ಕರೆದು ಇಂತಹ ವಿವೇಚನಾ ರಹಿತ ತೀರ್ಮಾನಗಳು ಹಾಗೂ ನಡೆಗಳಿಂದ ಬೇಸತ್ತ ಪೋಷಕರು ಇಂದು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರ್ಪಡೆ ಮಾಡಿದ್ದು, ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳಿಗೆ ತಮ್ಮ ಜನವಸತಿ ಪ್ರದೇಶದಲ್ಲಿ ಸಿಗಬೇಕಾದ ಶಿಕ್ಷಣವು ಸಿಗದೇ ಇರಲು ಸ್ಥಳೀಯ ಶಿಕ್ಷಣಾಧಿಕಾರಿಗಳು ಕಾರಣರಾಗಿದ್ದಾರೆ. ಆದರಿಂದ ಶಿಕ್ಷಣಾಧಿಕಾರಿಗಳ ಕಾರಣದಿಂದಾಗಿ ಮಕ್ಕಳಿಗೆ ತೊಂದರೆ ಆಗಿದ್ದು ಇದನ್ನು ಎಸ್ಡಿಎಂಸಿ ಸಮನ್ವಯ ವೇದಿಕೆಯು ಖಂಡಿಸುತ್ತದೆ. ಇದರ ಬಗ್ಗೆ ಕೂಡಲೇ ಇಲಾಖಾ ತನಿಖೆ ನಡೆಸಿ ಮಕ್ಕಳಿಗೆ ನ್ಯಾಯ ಒದಗಿಸಲು ಆಗ್ರಹಿಸುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.