(ವಿಶ್ವ ಕನ್ನಡಿಗ ನ್ಯೂಸ್) : ಯಾವುದೇ ಫಲಾಪೇಕ್ಷೆ ಇಲ್ಲದೇ ಸತ್ಯ ಸುದ್ಧಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾದ ವಿಶ್ವ ಕನ್ನಡಿಗ ನ್ಯೂಸ್ ಅಂತರ್ಜಾಲ ವಾರ್ತಾ ತಾಣಕ್ಕೆ ಇಂದು(ಜೂನ್ 4) ಹದಿಮೂರು ವರ್ಷ ತುಂಬಿದ ಸಂಭ್ರಮ. ಈ ಸಂತೋಷದ ಕ್ಷಣದಲ್ಲಿ ನಮ್ಮ ಓದುಗರು, ಅಭಿಮಾನಿಗಳು ಹಾಗೂ ಗಣ್ಯವ್ಯಕ್ತಿಗಳಿಂದ ವಾರ್ತಾ ತಾಣದ ಕುರಿತು ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇವೆ.
ತಮ್ಮ ಅಭಿಪ್ರಾಯಗಳನ್ನು ವಿಡಿಯೋ ಅಥವಾ ಬರವಣಿಗೆ ಮೂಲಕ ಕಳುಹಿಸಬಹುದು..
ವಿಡಿಯೋ ಮೂಲಕ ಅಭಿಪ್ರಾಯಗಳನ್ನು ಕಳುಹಿಸುವವರು ಎರಡು ನಿಮಿಷಕ್ಕಿಂತ ಹೆಚ್ಚಾಗದಂತೆ ವಿಡಿಯೋ ಮಾಡಿ ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿಕೊಡಬೇಕಾಗಿ ವಿನಂತಿ. ಜೊತೆಗೆ ತಮ್ಮ ಹೆಸರು, ವಿಳಾಸ ಕಳುಹಿಸಲು ಮರೆಯಬೇಡಿ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವಿಶ್ವ ಕನ್ನಡಿಗ ನ್ಯೂಸ್ ಯೂಟ್ಯೂಬ್ ಚಾನಲ್ ಹಾಗೂ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಬರವಣಿಗೆಯ ಮೂಲಕ ಅಭಿಪ್ರಾಯಗಳನ್ನು ಕಳುಹಿಸುವವರು ಸ್ಪುಟವಾಗಿ ಬರೆದು ನಮ್ಮ ವಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿಕೊಡಬೇಕಾಗಿ ವಿನಂತಿ. ಜೊತೆಗೆ ತಮ್ಮ ಹೆಸರು, ವಿಳಾಸ ಹಾಗೂ ಪಾಸ್ ಪೋರ್ಟ್ ಸೈಜ್ ಫೋಟೋ ಕಳುಹಿಸಲು ಮರೆಯಬೇಡಿ. ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವಿಶ್ವ ಕನ್ನಡಿಗ ನ್ಯೂಸ್ ನಲ್ಲಿ ಫೋಟೋ ಸಮೇತ ಪ್ರಕಟಿಸಲಾಗುವುದು.
ನಮ್ಮ ವಾಟ್ಸಾಪ್ ಸಂಖ್ಯೆ; 8197376316
ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿ…
ಸಂಪಾದಕೀಯ ಮಂಡಳಿ, ವಿಶ್ವ ಕನ್ನಡಿಗ ನ್ಯೂಸ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.