(www.vknews.in) ; ವೈಯಕ್ತಿಕ ನಿಂದನೆಯ ಅಭ್ಯಾಸ ನನಗಿಲ್ಲ. ಆದರೆ ಸಂಸದ ಪ್ರತಾಪ ಸಿಂಹನ ಮಿತಿಮೀರಿದ ನಿಂದನೆ ಕಂಡಾಗ ಇದು ಬರೆಯುವುದು ಅನಿವಾರ್ಯವಾಯಿತು. ಪ್ರತಿಯೊಬ್ಬ ಸಾಬನಿಗೆ ಮನೆಯಲ್ಲಿ ನಾಲ್ವರು ಹೆಂಡ್ತಿಯರಿರುತ್ತಾರೆ, ಇವರೆಲ್ಲರಿಗೂ ಕಾಂಗ್ರೆಸ್ ಸರಕಾರ ಮಾಸಿಕ ಹಣ ಕೊಡುತ್ತದೆ ಎಂಬುದು ಈ ನಾಲಾಯಕ್ಕು ಹಲ್ಕಟ್ ಮನುಷ್ಯನ ಆರೋಪ. ಇದು ವಾಸ್ತವನಾ? ಎಲ್ಲಾ ಮುಸ್ಲಿಮರು ಬಹುಪತ್ನೀಕರಾ? ಜಾಸ್ತಿ ಬಹುಪತ್ನಿತ್ವ ಹೊಂದಿದ್ದು ಹಿಂದೂ ಗಂಡಸರು ಎಂಬುದು ಅಂಕಿ ಅಂಶಗಳಿಂದ ಸಾಬೀತಾಗಿದೆ.
ನೀವು ಪ್ರತಿಯೊಬ್ಬರೂ ನಿಮ್ಮ ಊರಿನ ಮುಸ್ಲಿಮರನ್ನು ಲೆಕ್ಕ ಹಾಕಿ. ಅವರ ಪೈಕಿ ಎಷ್ಟು ಜನ ಬಹುಪತ್ನೀಕರಿದ್ದಾರೆ ಎಂಬುದನ್ನು ಗಮನಿಸಿರಿ. ಎಲ್ಲೋ ಕೆಲವು ಕಡೆ ಹೆಚ್ಚೆಂದರೆ ಎರಡು ಮದುವೆಯಾದ ಅಪರೂಪದ ಗಂಡಸರನ್ನು ಕಾಣಬಹುದಷ್ಟೆ. ನಾಲ್ಕು ಮದುವೆಯಾದವರನ್ನು ಕಾಣಲು ಬಹಳ ಕಷ್ಟ. ಅದಕ್ಕಿಂತ ಹೆಚ್ಚಾಗಿ ಎರಡು, ಮೂರು ಪತ್ನಿಯರನ್ನು ಕಟ್ಟಿಕೊಂಡವರು ಹಾಗೂ ಅಧಿಕೃತವಾಗಿ ಒಬ್ಬಳನ್ನು ಪತ್ನಿಯಾಗಿ ಇರಿಸಿಕೊಂಡು ಹಲವು ಮಹಿಳೆಯರನ್ನು ಉಪಪತ್ನಿಯರಾಗಿ ಇಟ್ಟುಕೊಂಡಿರುವ ಹಿಂದೂ ಪುರುಷರನ್ನು ಕಾಣಬಹುದು.
ಸಾಬರ ಹೆಂಡ್ತಿಯರ ವಿಷಯಕ್ಕೆ ಈತ ಕೈ ಹಾಕಿದ್ದರಿಂದ ಇವನ ಹಣೆಬಾರ ತಿಳಿಸಲು ಇವನ ವೈಯಕ್ತಿಕ ವಿಷಯವನ್ನು ಹೇಳಬೇಕಾಗಿ ಬಂದುದರಲ್ಲಿ ನನಗೆ ಬೇಸರವಿದೆ. ಇವನು ಸ್ವಂತ ಪತ್ನಿಯನ್ನು ತಂಗಿ ಎಂದು ಸುಳ್ಳು ದಾಖಲೆ ನಿರ್ಮಿಸಿ ಸರಕಾರದಿಂದ ಸೈಟು ಕೊಡಿಸಿದ್ದಾನೆ. ಹಾಗಾದರೆ ಅದರ ನಂತರ ಇವನು ಮಲಗುತ್ತಿರುವುದು ತಂಗಿಯ ಜೊತೆಗಾ ಎಂದು ಕೇಳಬೇಕಾಗಿ ಬಂದುದರಲ್ಲಿ ನನಗೆ ಖೇದವಿದೆ.
ಮುಸ್ಲಿಮರನ್ನು ತೆಗಳಿ ತೆಗಳಿ ಮಿತಿಮೀರಿ ವರ್ತಿಸಿದ ಈ ಹಲ್ಕಟ್ ಬಾಯಿಬಡುಕರ ದೆಸೆಯಿಂದ ಕರ್ನಾಟಕದ ಪ್ರಜ್ಞಾವಂತ ಹಿಂದೂಗಳಿಗೆ ಬಿಜೆಪಿ ಅಸಹ್ಯವಾಯಿತು. ಕಳೆದ ಚುನಾವಣೆಯಲ್ಲಿ ಅವರು ಬಿಜೆಪಿಗೆ ಹೀನಾಯ ಸೋಲುಣಿಸಿದರು. ಆದರೂ ಈ ಪ್ರತಾಪ ಸಿಂಹನಿಗೆ ಬುದ್ಧಿ ಬಂದಿಲ್ಲ. ಮುಸ್ಲಿಮ್ ಸಮುದಾಯವನ್ನು ನಿಂದಿಸುವುದೇ ಬಿಜೆಪಿಯಲ್ಲಿ ತನ್ನ ಸ್ಥಾನಭದ್ರತೆಗೆ ಮಾರ್ಗ ಎಂಬ ಭ್ರಮೆಯಿಂದ ಈ ಅವಿವೇಕಿ ಇನ್ನೂ ಹೊರಬಂದಿಲ್ಲ. ಮುಂದಿನ ಲೋಕ ಸಭಾ ಚುನಾವಣೆಯಲ್ಲಿ ಇದರ ಫಲ ಅನುಭವಿಸಲಿದ್ದಾನೆ.
ಡಿ.ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.