ವಿಶ್ವ ಕನ್ನಡಿಗ ನ್ಯೂಸ್ ಕಳೆದ ಹದಿಮೂರು ವರ್ಷಗಳಿಂದ ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದ ತನಕ ಸಂಪರ್ಕ ಸೇತುವಾಗಿ ಕಾರ್ಯಾಚರಿಸುವ ಸಕ್ರಿಯ ಮಾಧ್ಯಮ ವಾಗಿ ಜನಮನ ಗೆದ್ದಿದೆ. ಅಬ್ದುಲ್ ಹಮೀದ್ ಕಾವು ಅವರ ಸಾರಥ್ಯದ ವಿಕೆ ನ್ಯೂಸ್ ಬಳಗ ವರ್ತಮಾನ ಸನ್ನಿವೇಶಗಳನ್ನು ಮನಮುಟ್ಟುವ ಶೈಲಿಯಲ್ಲಿ ಕ್ರೋಢೀಕರಿಸಿ ವಸ್ತುನಿಷ್ಠ,ಪ್ರಾಮಾಣಿಕ, ಸಚಿತ್ರ ವರದಿ ಮಾಡುವ ಮೂಲಕ ಓದುಗರಿಗೆ ಹೊಸತನದ ರಸದೌತಣ ನೀಡಿದೆ ಎನ್ನುವುದು ಅತಿಶಯೋಕ್ತಿಯಲ್ಲ!
ದೃಶ್ಯ, ಶ್ರಾವ್ಯ ಮಾಧ್ಯಮಗಳು ಜಾಗತಿಕ ಮಟ್ಟದಲ್ಲಿ ಕ್ರಾಂತಿಕಾರಿಯಾಗಿ ಮುನ್ನಡೆಯುತ್ತಿರುವಾಗ ಅವುಗಳೊಂದಿಗೆ ಸ್ಪರ್ಧಾತ್ಮಕ ರೀತಿಯಲ್ಲಿ ಮಾಧ್ಯಮ ರಂಗದ ಎಲ್ಲಾ ನಿಯಮಗಳನ್ನು ಪಾಲಿಸಿ ಅತ್ಯಂತ ನಿಖರವಾಗಿ ವರದಿಗಳನ್ನು ಮಾಡಿ ಮಾಹಿತಿ ತಂತ್ರಜ್ಞಾನ ಯುಗವನ್ನು ವಿಸ್ಮಯ ಗೊಳಿಸುತ್ತಾ ವಿಶ್ವ ಕನ್ನಡಿಗ ನ್ಯೂಸ್ ಜೈತ್ರಯಾತ್ರೆ ನಡೆಸುತ್ತಿದೆ !!!
ವಿ.ಕೆ.ನ್ಯೂಸ್ ಸಂಪಾದಕ ಮಂಡಳಿ ಹಲವಾರು ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಿ ಯುವ ಬರಹಗಾರರು, ಕವಿಗಳಿಗೆ ಪ್ರೋತ್ಸಾಹ ನೀಡಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಷ್ಕಳಂಕ, ನಿಷ್ಕಪಟ ಸೇವೆಗಳ ಮೂಲಕ ಮಾಧ್ಯಮ ರಂಗದಲ್ಲಿ ಹೊಸ ಕ್ರಾಂತಿಯೊಂದಕ್ಕೆ ಮುನ್ನುಡಿ ಬರೆದಿದೆ.
ವಿ.ಕೆ ನ್ಯೂಸ್ ಸಾಗಿ ಬಂದ ಹಾದಿ ಅದ್ಭುತ! ಸಾಧನೆಗಳು ವಿಸ್ಮಯಕಾರಿ! ಮುಂದಿನ ಹೆಜ್ಜೆಗಳು ಇನ್ನಷ್ಟು ಪ್ರಭಾವಶಾಲಿಯಾಗಿರಲಿ. ಮಾಧ್ಯಮ ಕ್ಷೇತ್ರದಲ್ಲಿ ಹೊಂಬೆಳಕು ಹರಡುವ ನಕ್ಷತ್ರವಾಗಿ ವಿಶ್ವ ಕನ್ನಡಿಗ ನ್ಯೂಸ್ ನಳನಳಿಸುತ್ತಿರಲಿ.
✍️ ಕೆ.ಎ.ಅಬ್ದುಲ್ ಅಝೀಝ್ ಪುಣಚ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.