ಅನಿವಾಸಿ ಕನ್ನಡಿಗರ ಹೊಂಬೆಳಕಾಗಿ ಹೊರಹೊಮ್ಮಿದ ವಿಶ್ವ ಕನ್ನಡಿಗ ವಾರ್ತಾ ಮಾದ್ಯಮಕ್ಕೆ ಹದಿಮೂರರ ಹರೆಯ..
ಕಣ್ಣಲ್ಲಿ ಕಂಡರೂ ಪರಾಂಪರಿಸಿ ನೋಡಿ ಎಂಬ ಗಾದೆ ಮಾತಿಗೆ ಸರಿಯಾದ ನಿದರ್ಶನವೆಂಬಂತೆ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ ಸತ್ಯ ವಾರ್ತೆಗಳನ್ನು ಮಾತ್ರ ಬಿತ್ತರಿಸುವ ವಿಶ್ವ ಕನ್ನಡಿಗ ನ್ಯೂಸ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದಿನ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಅನಗತ್ಯ ವಾರ್ತೆಗಗಳಿಗೆ ತದ್ವಿರುದ್ಧವಾಗಿ ಪ್ರಕಟಗೊಳ್ಳುವ ಈ ವಿಶ್ವಕನ್ನಡಿಗ ವಾರ್ತಾ ಮಾಧ್ಯಮ ಎಲ್ಲ ಅರ್ಥದಲ್ಲೂ ಪ್ರಶಂಶನೀಯ. ಧಾರ್ಮಿಕ, ಸಾಮಾಜಿಕ, ರಾಜಕೀಯ, ವಾರ್ತೆಗಳನ್ನು ಪ್ರಕಟಿಸುವುದರ ಜೊತೆಗೆ ಅತ್ಯಗತ್ಯವಾದ ವಾರ್ತೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ನಿಜವಾಗಿಯೂ ಅನಿವಾಸಿ ಕನ್ನಡಿಗರ ಹೊಂಬೆಳಕಾಗಿ ಈ ವಾರ್ತಾ ಮಾದ್ಯಮ ಹೊರಹೊಮ್ಮಿದೆ ಎಂಬುದರಲ್ಲಿ ಎರಡು ಮಾತಿಲ್ಲ, ಇದು ಕನ್ನಡಿಗರಾದ ನಮಗೆಲ್ಲರಿಗೂ ಅಭಿಮಾನ ಹಾಗು ಹೆಮ್ಮೆಯ ವಿಷಯ.
ಒಂದು ಪತ್ರಿಕೆ ಮಾಧ್ಯಮವನ್ನು ಮುನ್ನಡೆಸುವುದು ಅಷ್ಟೊಂದು ಸುಲಭವಲ್ಲ, ಏನಾದರೂ ಅಪ್ಪಿತಪ್ಪಿ ತಪ್ಪು ತಿಳಿವಳಿಕೆಗಳು ರವಾನೆಯಾದರೆ ಪರಿಣಾಮ ಏನಾಗಬಹುದೆಂದು ನಮಗೆಲ್ಲರಿಗೂ ತಿಳಿದಂತಹ ವಿಷಯವೇ. ಆದರೂ ಅವೆಲ್ಲವನ್ನು ಆಲೋಚಿಸಿ ಮುಂದೆ ಸಾಗಿ ಯಾವುದೇ ರೀತಿಯ ವಿರೋಧಗಳಿಲ್ಲದೆ ಇದೀಗ ಹದಿಮೂರರ ಹರೆಯಕ್ಕೆ ಕಾಲಿಟ್ಟಿರುವುದು ಸಂತಸ ತಂದಿದೆ, ಸತ್ಯ ಸಂದ ವಾರ್ತೆಗಳೇ ಈ ಮಾಧ್ಯಮದ ಯಶಸ್ಸಿನ ಗುಟ್ಟು.
ಅದೆಷ್ಟೋ ಮಾಧ್ಯಮಗಳು ಇಲ್ಲ ಸಲ್ಲದ ಸುಳ್ಳು ವಾರ್ತೆಗಳನ್ನು ಬಿತ್ತರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿ ಮತ್ತೆ ತಪ್ಪಾಯಿತು ಕ್ಸಮಿಸಿ ಎಂದು ಮಿಂಚಿ ಹೋದ ನಂತರ ಗೋಗರೆಯುವುದು ನಾವು ಕಾಣುತ್ತಿರುವ ಈ ಕಾಲದಲ್ಲಿ ವಿಕೆ ನ್ಯೂಸ್ ಉತ್ತಮ, ಹಾಗು ಸರಿಯಾದ ಮಾಹಿತಿ ಸಂಗ್ರಹಿಸಿ ವಾರ್ತೆಯನ್ನು ಪ್ರಕಟಿಸಿ ಜನರಿಗೆ ತಲುಪಿಸಿವಲ್ಲಿ ಸಫಲವಾಗಿದೆ.
ಹದಿಮೂರು ವರ್ಷ ಯಾವುದೇ ಅಡೆ ತಡೆಗಳಿಲ್ಲದೆ ಮುಂದುವರಿದ ವಾರ್ತಾ ಮಾಧ್ಯಮಕ್ಕೂ ಇದರ ಹಿಂದೆ ಪರಿಶ್ರಮಿಸುತ್ತಿರುವ ಸಂಪಾದಕ ಮಂಡಳಿಗೂ, ಈ ವಾರ್ತೆಯನ್ನು ಮುನ್ನಡೆಸಲು ಸಹಕರಿಸಿದ ಎಲ್ಲಾ ಅನಿವಾಸಿ ಕನ್ನಡಿಗರಿಗೂ ನನ್ನದೊಂದು ಬಿಗ್ ಸಲ್ಯೂಟ್ ನೊಂದಿಗೆ ಶುಭ ಹಾರೈಕೆ..
ಹಲವರು ಹಲವು ತರ, ನಾವು ಇನ್ನೊಂದು ತರ, ಇದುವೇ ವಿಶ್ವ ಕನ್ನಡಿಗ ನ್ಯೂಸ್.. ಈ ವಾರ್ತಾ ಮಾಧ್ಯಮ ಇನ್ನಷ್ಟು ಬೆಳಗಲಿ, ಲೋಕದ ಮೂಲೆ ಮೂಲೆಗಳಿಗೂ ವಿಕೆ ನ್ಯೂಸ್ ನ ಕಂಪು ಹರಡಲಿ..
– ಅಶ್ರಫ್ ಪರ್ಲಡ್ಕ GCC GAMERS, MUSCAT OMAN
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.