(www.vknews.in) ; ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲಿಮೀನ್ ಮಿತ್ತಬೈಲ್ ರೇಂಜ್ ಇದರ ವಾರ್ಷಿಕ ಜನರಲ್ ಬೋಡಿ ಮಹಾ ಸಭೆಯು ಇತೀಚೆಗೆ ಪರ್ಲಿಯ ಕಿದ್ಮಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ SKIMV ಬೋರ್ಡು ಮುಫತ್ತಿಸ್ ಉಮರ್ ದಾರಿಮಿ ಸಾಲ್ಮರ ರವರ ಅಧ್ಯಕ್ಷತೆಯಲ್ಲಿ ಜರಗಿತು. ರೇಂಜ್ ಉಪಾಧ್ಯಕ್ಷರಾದ ಇಬ್ರಾಹಿಂ ದಾರಿಮಿ ರವರ ದುವಾದೊಂದಿಗೆ ಆರಭವಾದ ಸಭೆಯನ್ನು ರೇಂಜ್ ಅಧ್ಯಕ್ಷರಾದ ಟಿ. ಎಂ. ಹನೀಫ್ ಮುಸ್ಲಿಯಾರ್ ಉದ್ಘಾಟನೆ ಮಾಡಿದರು.
ಪ್ರಧಾನ ಕಾರ್ಯದರ್ಶಿ ಮುಸ್ತಫಾ ಪೈಝಿ ಮಂಡಿಸಿದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಅಂಗಿಕರಿಸಲಾಯ್ತು ತದನಂತರ ಮಿತ್ತಬೈಲ್ ರೇಂಜ್ ಮೆನೆಜ್ಮೆಂಟ್ ಅಧ್ಯಕ್ಷರಾದ ಯೂಸುಫ್ ಬದ್ರಿಯಾ, ಪ್ರಧಾನ ಕಾರ್ಯದರ್ಶಿ N. ಇಕ್ಬಾಲ್ ನಂದರಬೆಟ್ಟು ಹಾಗೂ ನಮ್ಮ ರೇಂಜಿನಿಂದ SKJMCC ಮುದರ್ರಿಬ್ ಆಗಿ ಆಯ್ಕೆಯಾದ ಅಬ್ದುಸ್ಸಮದ್ ಅನ್ಸಾರಿ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರ ಭಾಷಣದ ನಂತರ 2023-24 ನೇ ವರ್ಷದ ಮಿತ್ತಬೈಲ್ ರೇಂಜ್ ಪದಾಧಿಕಾರಿಗಳನ್ನು ಆರಿಸಲಾಯಿತು.
ಅದ್ಯಕ್ಷರಾಗಿ ಅಲ್ ಹಾಜಿ ಮುಹಮ್ಮದ್ ಹನೀಫ್ ಮುಸ್ಲಿಯಾರ್ ಅಕ್ಕರಂಗಡಿ 3ನೇ ಭಾರಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಪ ಪೈಝಿ ನೆಹರು ನಗರ, ಪರೀಕ್ಷಾ ಬೋರ್ಡು ಚೇರ್ಮೆನ್ ಆಗಿ ಅಲ್ ಹಾಜಿ ಅಬ್ದುಲ್ ಮಜೀದ್ ಮದನಿ ಶಾಂತಿಯಂಗಡಿ ಮದ್ರಸ , ಉಪ ಚೇರ್ಮೆನ್ ಆಗಿ ಫತಾವುಲ್ಲ ದಾರಿಮಿ ತಾಳಿಪಡಪ್ಪು ಹಾಗೂ ಶರೀಫ್ ದಾರಿಮಿ ಪಲ್ಲಮಜಲ್ , ಕೋಶಾಧಿಕಾರಿಯಾಗಿ ಯೂಸುಫ್ ಬದ್ರಿಯಾ, ಉಪಾಧ್ಯಕ್ಷರಾಗಿ ಇಬ್ರಾಹಿಂ ದಾರಿಮಿ ಮಿತ್ತಬೈಲ್ ಮತ್ತು ಅಹ್ಮದ್ ಕಬೀರ್ ಫೈಝಿ ರೌಲತುಲ್ ಉಲೂಂ, ಕಾರ್ಯದರ್ಶಿಗಳಾಗಿ ಅನ್ವರ್ ಅಝ್ಹರಿ ನಂದರಬೆಟ್ಟು ಮತ್ತು ಅಬ್ದುಸ್ಸಮದ್ ಅನ್ಸಾರಿ ಪರ್ಲಿಯ, I T ಕೊಡಿನೇಟರ್ ಆಗಿ ರಫೀಕ್ ಅಸ್ಲಮಿ ನೆಹರು ನಗರ, SKSBV ಚೇರ್ಮೆನ್ ಆಗಿ ರಶೀದ್ ಯಮಾನಿ ಕೊಳ್ತಮಜಲ್ , ಕನ್ವಿನರ್ ಆಗಿ ಶಂಸುದ್ದೀನ್ ಅಜ್ಹರಿ ಮಫ್ತಲಾಲ್ , ಕುರುನ್ನುಗಳ್ ಮಾಸಿಕದ ಉಸ್ತುವಾರಿ ಆಗಿ ಪಕ್ರುದ್ದೀನ್ ದಾರಿಮಿ ಮಿತ್ತಬೈಲ್ ಹಾಗೂ ಶಾಹುಲ್ ಹಮೀದ್ ಬದ್ರೀ ಗೂಡಿನಬಲಿ ಆಯ್ಕೆಯಾದರು. ಆರಂಭದಲ್ಲಿ ಸ್ವಾಗತ ಮಾಡಿದ ಪ್ರಧಾನ ಕಾರ್ಯದರ್ಶಿ ಮುಸ್ತಪ ಪೈಝಿ ಕೊನೆಯಲ್ಲಿ ವಂದಿಸಿದರು. SKJMCC ಮುದರ್ರಿಬ್ ಅನ್ಸಾರ್ ಅನ್ಸಾರಿ, ಮಿತ್ತಬೈಲ್ ರೇಂಜ್ ಮೆನೆಜ್ಮೆಂಟ್ ಪ್ರಧಾನ ಕಾರ್ಯದರ್ಶಿ N. ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು , ಪರ್ಲಿಯ ಕಿದ್ಮತುಲ್ ಇಸ್ಲಾಂ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಬೈದುಲ್ಲಾ, ಉಪಾಧ್ಯಕ್ಷರಾದ ಪಾರುಕ್ ಪರ್ಲಿಯ ಹಾಗೂ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.