ಕಾನ್ಪುರ (www.vknews.in) ; ಆಟವಾಡುತ್ತಿದ್ದಾಗ ತನ್ನ ಬಳಿ ಬಂದ ಹಾವನ್ನು 3 ವರ್ಷದ ಬಾಲಕನೊಬ್ಬ ಕಚ್ಚಿದ್ದಾನೆ. ಫರೂಕಾಬಾದ್ ಜಿಲ್ಲೆಯ ಮೊಹಮ್ಮದಾಬಾದ್ ಪ್ರದೇಶದ ಮದ್ನಾಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ದಿನೇಶ್ ಕುಮಾರ್ ಅವರ ಮೂರು ವರ್ಷದ ಮಗ ಆಯುಷ್ ಅಂಗಳದಲ್ಲಿ ಆಟವಾಡುತ್ತಿದ್ದಾಗ ಸಮೀಪ ಬಂದ ಹಾವನ್ನು ಜಗಿದಿದ್ದಾನೆ. ಪೊದೆಯಿಂದ ಸಮೀಪಕ್ಕೆ ಬಂದ ಹಾವನ್ನು ಹಿಡಿದು ಜಗಿಯುತ್ತಿದ್ದ ಬಾಲಕ ಅಳುತ್ತಾನೆ. ಈ ದೃಶ್ಯ ಕಂಡು ಬೆಚ್ಚಿಬಿದ್ದ ಅಜ್ಜಿ ಬಾಲಕನ ಬಾಯಲ್ಲಿದ್ದ ಹಾವನ್ನು ಹೊರತೆಗೆದಿದ್ದಾರೆ.
ನಂತರ ಗಾಬರಿಗೊಂಡ ಪೋಷಕರು ಸತ್ತ ಹಾವನ್ನು ಪಾಲಿಬ್ಯಾಗ್ನಲ್ಲಿ ಹಾಕಿ ಮಗುವಿನೊಂದಿಗೆ ಆಸ್ಪತ್ರೆಗೆ ಧಾವಿಸಿದ್ದಾರೆ. 24 ಗಂಟೆಗಳ ಕಾಲ ನಿಗಾದಲ್ಲಿ ದಾಖಲಾಗಿರುವ ಮಗು ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಮಹಮ್ಮದ್ ಸಲೀಂ ಅನ್ಸಾರಿ ಮಾತನಾಡಿ, ಮಗುವಿಗೆ ತಪಾಸಣೆ ವೇಳೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ, ಅಗತ್ಯ ಔಷಧಗಳನ್ನು ನೀಡಲಾಗಿದ್ದು, ಆರೋಗ್ಯವಾಗಿದೆ ಎಂದು ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.