ಬೆಂಗಳೂರು (www.vknews.in) : ಬೆಂಗಳೂರಿನಲ್ಲಿ ಕೇರಳದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಕಲಮಶ್ಶೇರಿ ಮೂಲದ ಕೆ.ಎಸ್.ನೀತು ಮೃತರು. ಬೆಂಗಳೂರಿನ ಬಸವನಗರದ ಶೋಭಾ ಸೂರ್ಯಕಾಂತಿ ಎದುರಿನ ಎಸ್ಎಲ್ವಿ ರೆಸಿಡೆನ್ಸಿಯ ಸ್ವಂತ ಫ್ಲ್ಯಾಟ್ನಲ್ಲಿ ನೀತು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ಪೊಲೀಸರು ತೀರ್ಮಾನಿಸಿದ್ದಾರೆ.
ಪತಿ ಶ್ರೀಕಾಂತ್ ಆಂಧ್ರಪ್ರದೇಶದ ರಾಥೋಡ್ ಮೂಲದವರು. ಒಂದೂವರೆ ವರ್ಷದ ಪುನರ್ವಿ ಒಬ್ಬಳೇ ಮಗಳು. ನೀತು ಮತ್ತು ಶ್ರೀಕಾಂತ್ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದರು. ಘಟನೆ ಬಗ್ಗೆ ನೀತು ಮನೆಯವರಿಗೆ ತಿಳಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕೇರಳಕ್ಕೆ ಕಳುಹಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.