ಕಣ್ಣೂರು (www.vknews.in) : ಕಣ್ಣೂರು ವಿಮಾನ ನಿಲ್ದಾಣದಲ್ಲಿ 1.10 ಕೋಟಿ ಮೌಲ್ಯದ ಚಿನ್ನಾಭರಣದೊಂದಿಗೆ ಇಬ್ಬರನ್ನು ಬಂಧಿಸಲಾಗಿದೆ. ಕಾಸರಗೋಡು ನಿವಾಸಿ ಮುಹಮ್ಮದ್ ಅಲ್ತಾಫ್ ಮತ್ತು ಪಯ್ಯನ್ನೂರು ನಿವಾಸಿ ಮುಹಮ್ಮದ್ ಬಶೀರ್ ಅವರಿಂದ 1797 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಬ್ಬರು ಬುಧವಾರ ಬೆಳಗ್ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿದ್ದರು. ಡಿಆರ್ಐ ಮತ್ತು ಕಸ್ಟಮ್ಸ್ ನಡೆಸಿದ ತಪಾಸಣೆಯಲ್ಲಿ ಇಬ್ಬರಿಂದಲೂ ಚಿನ್ನ ಪತ್ತೆಯಾಗಿದೆ. ತಾವು ಧರಿಸಿದ್ದ ಸಾಕ್ಸ್ನೊಳಗೆ ಬಚ್ಚಿಟ್ಟು ಪೇಸ್ಟ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ಅನುಮಾನಗೊಂಡು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಮಹಮ್ಮದ್ ಅಲ್ತಾಫ್ ನಿಂದ 71 ಲಕ್ಷ ಮೌಲ್ಯದ 1157 ಗ್ರಾಂ ಚಿನ್ನಾಭರಣ ಹಾಗೂ ಮಹಮ್ಮದ್ ಬಶೀರ್ ನಿಂದ 39 ಲಕ್ಷ ಮೌಲ್ಯದ 640 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.