(www.vknews.in) ; ಗ್ಯಾಂಗ್ ಲೀಡರ್ ಸಂಜೀವ್ ಜೀವಾ ಅವರನ್ನು ಉತ್ತರ ಪ್ರದೇಶದ ಲಕ್ನೋ ನ್ಯಾಯಾಲಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಕೀಲರ ವೇಷದಲ್ಲಿದ್ದ ದಾಳಿಕೋರ ಪರಾರಿಯಾಗಿದ್ದಾನೆ. ಓರ್ವ ಪೊಲೀಸ್ ಹಾಗೂ ಮಹಿಳೆ ಗಾಯಗೊಂಡಿದ್ದಾರೆ. ಅವರನ್ನು ಲಕ್ನೋ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಮುಖಂಡನ ಹತ್ಯೆ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಸಂಜೀವ್ ಜೀವಾ ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಸಹಾಯಕ.
ಕೊಲೆಯ ನಂತರ, ನ್ಯಾಯಾಲಯಗಳಲ್ಲಿ ಭದ್ರತೆಯ ಕೊರತೆಯನ್ನು ತಿಳಿಸಿ ವಕೀಲರು ಪ್ರತಿಭಟಿಸಿದರು. ಕುಖ್ಯಾತ ಗ್ಯಾಂಗ್ ನಾಯಕ ಅತೀಕ್ ಅಹ್ಮದ್ ಮತ್ತು ಆತನ ಸಹೋದರನನ್ನು ಪೊಲೀಸ್ ಕಸ್ಟಡಿಯಲ್ಲಿ ಗುಂಡಿಕ್ಕಿ ಕೊಂದ ಎರಡು ತಿಂಗಳ ನಂತರ ಮತ್ತೊಂದು ಹತ್ಯೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.