ಸುದ್ದಿ ಸಮಾಚಾರಗಳನ್ನು ಜನರ ಬಳಿಗೆ ತಲುಪಿಸುತ್ತಾ ಸಂವಿಧಾನದ ನಾಲ್ಕನೆಯ ಅಂಗ ಎಂದು ಪರಿಗಣಿಸಲ್ಪಡುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಜಗದೆಲ್ಲೆಡೆಗೆ ಕನ್ನಡದ ಕಂಪನ್ನು ಹರಡುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ತನ್ನ ನಿಸ್ವಾರ್ಥ ಸೇವಾ ಹಾದಿಯಲ್ಲಿ ಹದಿಮೂರು ಸಂವತ್ಸರಗಳನ್ನು ಪೂರೈಸಿದೆ.
ವಿಕೆ ನ್ಯೂಸ್ ಮಾಡಿದ ಅದ್ಭುತ ಸೇವೆಯ ಬಗ್ಗೆ ನನಗೆ ಅಭಿಮಾನವಿದೆ. ಭಾವೈಕ್ಯತೆ, ವಿಶ್ವ ಭ್ರಾತೃತ್ವ ಸಂದೇಶವನ್ನು ಸಾರುತ್ತಾ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಿಸಲು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರಂತರ ಶ್ರಮಿಸುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕ ಬಳಗ ಮಹತ್ತರ ಸಾಮಾಜಿಕ ಜವಾಬ್ದಾರಿಯೊಂದನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದೆ ಎನ್ನಲು ನನಗೆ ಅಭಿಮಾನವೆನಿಸುತ್ತಿದೆ.
ಕೆಲವು ಸಾಮಾಜಿಕ ಮಾಧ್ಯಮಗಳು ಜನರ ಮಧ್ಯೆ ದ್ವೇಷ ಹರಡುವ ಕೆಲಸಗಳನ್ನು ಮಾಡುವಾಗ ಎಲ್ಲಾ ವರ್ಗದ ಜನರನ್ನು ಒಂದೇ ದೃಷ್ಟಿಯಿಂದ ಕಂಡು ನಾಡಿನ ಸಾಮರಸ್ಯ ವಾತಾವರಣ ಸದಾ ಹಸಿರಾಗಿರುವಂತೆ ನೋಡಿಕೊಳ್ಳುತ್ತಿರುವ ವಿಶ್ವ ಕನ್ನಡಿಗ ನ್ಯೂಸ್ ನ ಮುಂದಿನ ಹೆಜ್ಜೆಗಳು ಇನ್ನಷ್ಟು ಪ್ರಬಲವಾಗಿರಲಿ ಎಂದು ಮನದುಂಬಿ ಹಾರೈಸುತ್ತಿದ್ದೇನೆ.
✍️ ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ ಜಿಲ್ಲಾಧ್ಯಕ್ಷರು, ಮಂಗಳ ಕಲಾ ಸಾಹಿತ್ಯ ವೇದಿಕೆ ದ.ಕ.ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.