ಅನಿವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ, ಕನ್ನಡಿಗರ ವಾರ್ತೆಗಳನ್ನು ವಿಚಾರಗಳನ್ನು ತಲುಪಿಸಿ ಮಾಧ್ಯಮ ಲೋಕಕ್ಕೆ ಮಾದರಿಯಾಗಿರುವ ವಿಶ್ವ ಕನ್ನಡಿಗ ನ್ಯೂಸ್ ಕಾರ್ಯಚಟುವಟಿಕೆ ಅಧ್ಬುತವಾಗಿದೆ. ಯಾವುದೆ ಸ್ವಾರ್ಥತೆ ಇಲ್ಲದೆ ಸಮಾಜದ, ದಮನಿತರ ಧ್ವನಿಯಾಗಿ ಸಮಾಜದ ಶಿಕ್ಷಣ ಕ್ರಾಂತಿಗಾಗಿ ಸುಧ್ಧಿಗಳನ್ನು ತಲುಪಿಸುವ ಈ ಮಾಧ್ಯಮದ ಕಾರ್ಯ ವೈಖರಿಯೂ ಅಭಿನಂದನೀಯ.
ಕಳೆದ ಹದಿಮೂರು ವರ್ಷಗಳನ್ನು ಕಳೆದು ಹದಿನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ವಿಶ್ವಕನ್ನಡಿಗ ನ್ಯೂಸ್ ಮುಂದೆ ಬೆಳೆದು ಹೆಮ್ಮರವಾಗಿ ಕರ್ನಾಟಕದ ಪ್ರಭಲ ಮಾಧ್ಯಮವಾಗಿ ಹೊರ ಹೊಮ್ಮಲಿ ಎಂದು ಆಶಿಸುತ್ತೇನೆ. ಮಾತ್ರವಲ್ಲ ಕೋಮು ವಿಷ ಬೀಜ ಬಿತ್ತುವ, ಚಿಲ್ಲರೆ ಕಾಸಿಗಾಗಿ ಮಾರಿಕೊಂಡಿರುವ ಮಾಧ್ಯಮಗಳಿಗೆ ಮಾದರಿಯಾಗಿ ಸೌಹಾರ್ದತೆ ಬೆಳೆಸುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸುಧ್ಧಿ ಮಾಧ್ಯಮವಾಗಿ ಮುಂದೆ ಸಾಗಲಿ ಎಂದು ಹಾರೈಸುತ್ತೇನೆ..
ನಝೀರ್ ಅಝ್ಹರಿ ಬೊಳ್ಮಿನಾರ್ ಖತೀಬರು ಟೌನ್ ಜುಮಾ ಮಸೀದಿ, ಈಶ್ವರ ಮಂಗಳ (ಅಧ್ಯಕ್ಷರು ಕರ್ನಾಟಕ ರಾಜ್ಯ ಅಝ್ಹರೀಸ್ ಒಕ್ಕೂಟ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.