ವಿಶ್ವ ಕನ್ನಡಿಗ ನ್ಯೂಸ್ ಮಾಧ್ಯಮ ಕ್ಷೇತ್ರದಲ್ಲಿ ಕಳೆದ 13 ವರ್ಷಗಳಿಂದ ಸಂಪಾದಕ ಮಂಡಳಿ ಹಾಗೂ ತಂಡದವರು ಪತ್ರಿಕಾ ಧರ್ಮದ ಮೌಲ್ಯವನ್ನು ಅನುಸರಿಸಿಕೊಂಡು ನಮ್ಮ ದೇಶದ ಹಾಗೂ ರಾಷ್ಟ್ರದ ಸುದ್ದಿಗಳನ್ನು ಹಾಗೂ ಕ್ರೀಡಾ ಕ್ಷೇತ್ರ ಸಾಂಸ್ಕೃತಿಕ ಕ್ಷೇತ್ರ ವಿದ್ಯಾ ಕ್ಷೇತ್ರ ಹೀಗೆ ಪ್ರತಿಯೊಂದು ವಿಚಾರಗಳಿಗೆ ಮಹತ್ವವನ್ನ ಕಲ್ಪಿಸಿಕೊಟ್ಟು ಆಯಾಯ ಕ್ಷೇತ್ರದಲ್ಲಿ ನಡೆಯುತಕ್ಕಂತಹ ಮಹತ್ವ ಗಳನ್ನು ಬೆಳವಣಿಗೆಗಳನ್ನು ಪ್ರಾಮಾಣಿಕ ಹಾಗೂ ಬದ್ಧತೆಗಳೊಂದಿಗೆ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಗೌರವವನ್ನು ತಂದುಕೊಡುವ ರೀತಿಯಲ್ಲಿ ನಿಷ್ಪಕ್ಷಪಾತವಾದ ವರದಿಗಳನ್ನು ಪ್ರಕಟಿಸುವ ಮೂಲಕ ರಾಷ್ಟ್ರದಾದ್ಯಂತ ಇರುವ ಕನ್ನಡಿಗರಿಗೆ ಸುದ್ದಿಗಳನ್ನು ತಲುಪಿಸುವ ನಿಮ್ಮ ಪ್ರಯತ್ನ ಹಾಗೂ ನಿಮ್ಮ ಶ್ರಮಕ್ಕೆ ನಿಮ್ಮ ತಂಡವನ್ನು ಅಭಿನಂದಿಸುತ್ತೇನೆ.
ಸಾಮಾಜಿಕ ಜಾಲತಾಣದ ಮೂಲಕ ಕಳೆದ 13 ವರ್ಷಗಳಿಂದ ವಿಶ್ವ ಕನ್ನಡಿಗ ನ್ಯೂಸ್ ಕಠಿಣ ಪರಿಶ್ರಮಗಳೊಂದಿಗೆ ತೊಡಗಿಸಿಕೊಂಡಿರುವುದರಿಂದ ಯಶಸ್ವಿ 13 ವರ್ಷಗಳನ್ನು ಪೂರೈಸಿದೆ, ಪ್ರಸ್ತುತ ಅಪಾರ ಅನಿವಾಸಿ ಭಾರತೀಯ ಹಾಗೂ ಭಾರತ ದೇಶದಲ್ಲಿರುವ ಓದುಗರ ಮನಸ್ಸಿನಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ವಿಶ್ವ ಕನ್ನಡಿಗ ನ್ಯೂಸ್ ಕನ್ನಡಿಗರ ಹೆಮ್ಮೆಯ ಮಾಧ್ಯಮವಾಗಿ ಮೂಡಿಬಂದಿರುತ್ತದೆ,
ಮುಂದಿನ ದಿನಗಳಲ್ಲಿ ನಿಷ್ಪಕ್ಷಪಾತವಾದ ವರದಿಗಳನ್ನು ಕನ್ನಡಿಗರಾದ ನಮಗೆಲ್ಲರಿಗೂ ನೀಡುವ ಮೂಲಕ ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯ ಮಾಧ್ಯಮವಾಗಿ ಮೂಡಿ ಬರಲಿ ಎಂದು ಈ 13ನೇ ವರ್ಷದ ಯಶಸ್ವಿಯ ಸಂತೋಷದ ಸಂದರ್ಭದಲ್ಲಿ ಶುಭವನ್ನ ಕೋರುತ್ತೇನೆ.
ಮಹಮ್ಮದ್ ಇಕ್ಬಾಲ್ ಎಲಿಮಲೆ, ರಾಜ್ಯ ಕಾರ್ಯದರ್ಶಿ ಜನತಾದಳ (ಜಾತ್ಯತೀತ) ಅಧ್ಯಕ್ಷರು ಮುಸ್ಲಿಂ ಒಕ್ಕೂಟ ಸುಳ್ಯ ತಾಲೂಕು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.