ಬಂಟ್ವಾಳ (www.vknews.in) ; ತಾಲೂಕಿನ ಬಿ.ಮೂಡ ಕಸ್ಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ರಮೇಶ್ ಸಾಲಿಯಾನ್ ಅವರ ಮಗಳು ನೇಹಾ (22) ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ಬಳಿಕ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರಿನ ಸೇಪ್ಟಿ ಇನಸ್ಟುಮೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿಗೆ ಮನೆಯವರು ಮದುವೆ ಮಾಡುವ ಉದ್ದೇಶದಿಂದ ಸಂಬoಧ ನೋಡಲು ಮುಂದಾದಾಗ ಮದುವೆ ಸದ್ಯ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದ್ದಲ್ಲದೆ, ನಾನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿದೆ ಎಂದು ಯುವತಿ ಹೇಳಿದ್ದರು.
ಮೇ.27 ರಂದು ನೇಹ ಕೆಲಸಕ್ಕೆಂದು ಹೋದವಳು ಸಂಜೆ 4 ಗಂಟೆಗೆ ಚಿಕ್ಕಮ್ಮನ ಮೊಬೈಲ್ ಪೋನ್ ಗೆ ಮೆಸೇಜ್ ಮಾಡಿ ನಾನು ಬೆಂಗಳೂರಿಗೆ ಹೋಗುವುದಾಗಿ ಹೇಳಿ ಮೊಬೈಲ್ ಸ್ವಿಚ್ ಆಪ್ ಮಾಡಿದ್ದಾರೆ. ಮೇ. 29 ರಂದು ಮತ್ತು ಜೂನ್ 6 ರಂದು ಒಟ್ಟು ಎರಡು ಪತ್ರ ಮನೆಯವರಿಗೆ ಬಂದಿದ್ದು ಪತ್ರದಲ್ಲಿ ನಾನು ಬೆಂಗಳೂರಿನಲ್ಲಿ ಇರುವುದಾಗಿ ಹಾಗೂ ನನನ್ನು ಹುಡುಕಬೇಡಿ ಎಂದು ಬರೆದಿದ್ದಾರೆ. ಬಳಿಕ ಮನೆಯವರ ಜೊತೆ ಯಾವುದೇ ಸಂಪರ್ಕ ಮಾಡಿಲ್ಲ. ಇವರನ್ನು ಹುಡುಕಿಕೊಡುವಂತೆ ಯುವತಿಯ ತಮ್ಮ ಅವಿನಾಶ್ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.