ಮಂಗಳೂರು (www.vknews.in) : ಗೃಹ ಸಚಿವರ ಸೂಚನೆ ಮೇರೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗಿದೆ ಎಂದು ಕಮಿಷನರ್ ಕುಲ್ದೀಪ್ ಜೈನ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನಿಡೀದ ಕಮಿಷನರ್ ಕುಲ್ದೀಪ್ ಜೈನ್, ಎಸಿಪಿ, ಸಿಸಿಬಿ ನೇತೃತ್ವದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡಲಾಗಿದೆ. ವಿಂಗ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದ್ದಾರೆ. ಈ ತಂಡದಿಂದ ನಗರದಲ್ಲಿ ಆಗುವ ಕೋಮು ಪ್ರೇರಣೆ ಮೇಲೆ ನಿಗಾ ಇಡಲಿದ್ದು, ಯಾವುದೇ ರೀತಿಯ ದ್ವೇಷ ಭಾಷಣ ಇತರ ಕೋಮು ಸೂಕ್ಷ್ಮ ವಿಚಾರದ ಬಗ್ಗೆ ಗಮನ ಹರಿಸಲಿದೆ ಎಂದರು.
ಇನ್ನು ಕೋಮು ಸೂಕ್ಷ್ಮ ಕೊಲೆ, ದನ ಕಳವು, ನೈತಿಕ ಪೊಲೀಸ್ ಗಿರಿ ಮೇಲೆ ನಿಗಾ ವಹಿಸಲಾಗಿದ್ದು, ಕೋಮು ಸೂಕ್ಷ್ಮ ವಿಚಾರದ ಆರೋಪಿಗಳ ಮೇಲೆ ನಿಗಾ ಇಡಲಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಕೋಮು ಸೂಕ್ಷ್ಮ ಪ್ರಕರಣದ ಮೇಲೆ ಇಲಾಖೆಯಿಂದ ನಿಗಾ ಇಡಲಾಗುತ್ತದೆ ಎಂದು ಹೇಳಿದ್ದಾರೆ.ಕಳೆದ ಎರಡು ದಿನಗಳಿಂದ ಈ ವಿಂಗ್ ಕಾರ್ಯಾಚರಣೆ ಮಾಡುತ್ತಿದ್ದು, ತಂಡದಲ್ಲಿ ಐದರಿಂದ ಆರು ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಈ ವಿಂಗ್ ಸಿಬ್ಬಂದಿಗಳು ಪ್ರತ್ಯೇಕ ಈ ಪ್ರಕರಣದ ಮೇಲೆಯೇ ನಿಗಾ ಇಡಲಿದ್ದಾರೆ ಎಂದು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.