ಕ್ಷಣಕ್ಷಣವೂ ಬಿತ್ತರಿಸುವ ತಾಜಾ ತಾಜಾ ಸುದ್ದಿಗಳು, ಜತೆಗಷ್ಟು ವಿಶೇಷ ವಾರ್ತೆಗಳು, ಉಪಯುಕ್ತ ಆರೋಗ್ಯ ಮಾಹಿತಿ, ವರ್ಷಕ್ಕೊಮ್ಮೆ ಚೆಂದವಾಗಿ ನಡೆಸಿಕೊಡುವ ಆನ್ಲೈನ್ ಸ್ಪರ್ಧೆ, ಪರೀಕ್ಷಾ ಫಲಿತಾಂಶ ಪ್ರಕಟಣೆಯೊಂದಿಗೆ ವಿದ್ಯಾರ್ಥಿಗಳಿಗೆ ಶುಭಹಾರೈಕೆಗಳು, ಅಲ್ಲಲ್ಲಿ ನಡೆದ, ನಡೆಯುತ್ತಿರುವ ಅಥವಾ ನಡೆಯಲಿರುವ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಗಳಲ್ಲದೇ, ವಿಶೇಷವಾಗಿ ಉದಯೋನ್ಮುಖ ಬರಹಗಾರರಿಗೆ ನೀಡುತ್ತಿರುವ ತುಂಬು ಪ್ರೋತ್ಸಾಹ, ಸಾಹಿತಿಗಳ ಪ್ರಬುದ್ಧ ಬರಹಗಳ ಹಂಚಿಕೆ.
ಒಂದೋ… ಎರಡೋ…? ಹಲವಾರು ವಿಷಯಗಳ ಗೊಂಚಲನ್ನು ಕ್ಲಿಪ್ತ ಸಮಯಕ್ಕೆ ಹೊತ್ತು ತರುವ ‘ವಿ.ಕೆ ನ್ಯೂಸ್’ ಈಗ ಜನರ ನಿತ್ಯದ ಅತ್ಯಗತ್ಯ ಅಭ್ಯಾಸಗಳಲ್ಲೊಂದಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.
ದೇಶ ವಿದೇಶಗಳೆಲ್ಲೆಡೆಯೂ ಏಕಕಾಲದಲ್ಲಿ ಹಂಚಿಕೆಯಾಗುವ ಮೂಲಕ ಜನಮನ ಗೆದ್ದಿರುವ, ಕೊಂಡಾಟದಲ್ಲಿ ‘ವಿ.ಕೆ ನ್ಯೂಸ್’ ಎಂದು ಕರೆಯಲ್ಪಡುವ ‘ವಿಶ್ವ ಕನ್ನಡಿಗರ ನ್ಯೂಸ್’ ಇದೀಗ ಸುಂದರ ಹದಿಹರೆಯಕ್ಕೆ ಕಾಲಿಟ್ಟಿದ್ದು, ಆದಿಯಿಂದಲೂ ಇದರ ಓದುಗರಾಗಿರುವ ನಮ್ಮಲ್ಲಿ ಬಹಳ ಸಂತಸ ತಂದಿದೆ. ವಿ.ಕೆ ನ್ಯೂಸ್ ಬಳಗಕ್ಕಿದೋ ತುಂಬು ಹೃದಯದ ಅಭಿನಂದನೆಗಳು.
ಬನ್ನಿ ಓದುಗರೇ, ನಮ್ಮ ಸುತ್ತಮುತ್ತಲ ಜನರಿಗೆ ಹಂಚುವ ಮೂಲಕ ಪ್ರಪಂಚದ ಮೂಲೆಮೂಲೆಗೂ ವಿಕೆ ನ್ಯೂಸ್ ತಲುಪುವಂತಾಗಲು ನಾವೂ ಸಹಕರಿಸೋಣ. ನಮ್ಮೆಲ್ಲರ ನೆಚ್ಚಿನ ‘ವಿ.ಕೆ ನ್ಯೂಸ್’ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಯಸುತ್ತಾ ಶುಭಹಾರೈಸುವೆನು.
ಹಫ್ಸಾ ಬಾನು ಬೆಂಗಳೂರು (ಕನ್ನಡ ಮತ್ತು ಬ್ಯಾರಿ ಕವಯತ್ರಿ, ಲೇಖಕಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.