(www.vknews.in) ; ದಾವಣಗೆರೆ ದಕ್ಷಿಣ ವಲಯ ಕಾಂಗ್ರೆಸ್ ನ ಜನಪ್ರಿಯ ಶಾಸಕರು ಅಭಿವೃದ್ದಿಯ ಹರಿಕಾರರು ಹಿರಿಯ ಮುತ್ಸದ್ದಿಗಳು ಸೋಲಿಲ್ಲದ ಸರದಾರರಾದ ಶಾಮನೂರು ಶಿವಶಂಕರಪ್ಪ ನವರ 93ನೇ ಹುಟ್ಟುಹಬ್ಬದ ಪ್ರಯಕ್ತ ಇಂದು ನಗರದ ಜೆ. ಇಮಾಂ ನಗರದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 93 ಸಾಧಕರಿಗೆ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿ ಜಯಬೇರಿ ಬಾರಿಸಿದೆ, ಕರ್ನಾಟಕದಲ್ಲಿ ಚುನಾವಣೆ ಗು ಮುಂಚೇ ನುಡಿದ ಹಾಗೆ ಇಂದು ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೆರವೇರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಅದರಲ್ಲಿ ಮಹಿಳೆಯರಿಗೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಅದರ ಪರಿಣಾಮವಾಗಿ ಆಟೋ ಚಾಲಕರ ಸಿಟಿ ಬಸ್ಸುಗಳಲ್ಲಿ ಜನರ ಪ್ರಯಾಣ ಕ್ಷೀಣಿಸಿದೆ ಎಂದು ಪತ್ರಿಕೆ ಮಾಧ್ಯಮಗಳಲ್ಲಿ ಬರುತ್ತಿದೆ.
ಅದೆಲ್ಲ ಅವರವರ ಹಣೆಬರಹ, ಸರ್ಕಾರ ಏನು ಭರವಸೆ ಕೊಟ್ಟಿದೆ ಆ ಭರವಸೆಗಳನ್ನು ಈಡೇರಿಸಿದೇ, ಬಿಜೆಪಿ ಸರ್ಕಾರ ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ 40% ಬ್ರಷ್ಟಾಚಾರದ ಹಣವನ್ನು ವಾಪಸ್ ಪಡೆಯುವ ಮೂಲಕ ಸಾರ್ವಜನಿಕ ವಲಯದಲ್ಲಿ ಬಳಸಲಾಗುವುದು, ದಾವಣಗೆರೆ ನಗರದಲ್ಲಿ ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆಗೆಡೆ ನಗರದ ಸ್ಥಳಾಂತರ ಮಾಡಿ ಅವರಿಗೆ ಸರ್ಕಾರದಿಂದ ಜಮೀನು ಮಂಜೂರು ಮಾಡಿಸಿ ಮನೆಗಳನ್ನು ವಿತರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಯೂಬ್ ಪೈಲ್ವಾನ್ ದಿನೇಶ್ ಕೆ ಶೆಟ್ಟಿ ದಾದಪೀರ್ ಕೊಡಪಾನ್ ಎಸ್.ಎಲ್. ಆನಂದಪ್ಪ ನಿಲಾಗಿರಿಯಪ್ಪ ಹಾಗೂ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.