ಕುಂದಾಪುರ (www.vknews.in) : ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನೀ ಮದ್ರಸಗಳ ಅದ್ಯಾಪಕರ ಸಂಘಟನೆಯಾಗಿರುವ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ಇದರ ನಾವುಂದ ರೇಂಜ್ ಸಮಿತಿಯ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಇತ್ತೀಚೆಗೆ ನಾವುಂದ ಬುಸ್ತಾನುಲ್ ಉಲೂಂ ಮದ್ರಸದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಷರಾದ ಪೆರಿಯಡ್ಕ ಇಸ್ಮಾಯಿಲ್ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನಡೆದ ಸದ್ರಿ ಮಹಾಸಭೆಯನ್ನು ಸ್ಥಳೀಯ ಮುದರ್ರಿಸರಾದ ಅಬ್ದುಲ್ಲತೀಫ್ ಅಲ್ – ಫಾಳಿಲಿ ಬಾಯಾರು ಉದ್ಘಾಟಿಸಿ, ಶುಭಹಾರೈಸಿದರು. ಗಂಗೊಳ್ಳಿ ಬದ್ರಿಯಾ ಮೊಹಲ್ಲಾ ಮದ್ರಸ ಅದ್ಯಾಪಕರಾಗಿರುವ ಮುಜ್ತಬಾ ಅಲ್-ಫಾಳಿಲಿ ಪವಿತ್ರ ಖುರ್ಆನ್ ಪಾರಾಯಣ ಗೈದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆ ಹಾಗೂ ಅಂಗೀಕಾರದ ಬಳಿಕ ನಡೆದ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯಲ್ಲಿ 2023-24ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಸ್ಹೂದ್ ಅಹ್ಸನಿ, ಹೆಮ್ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಕೊಂಬಾಳಿ ಕೆ.ಎಂ.ಎಚ್. ಝುಹುರಿ, ಕೋಯನಗರ, ಕೋಶಾಧಿಕಾರಿಯಾಗಿ ಎಸ್.ಎಂ. ಹನೀಫ್ ಸಅದಿ, ನಾವುಂದ, ಉಪಾಧ್ಯಕ್ಷರುಗಳಾಗಿ ಶಾಫಿ ಸಖಾಫಿ ಆಕಳಬೈಲು, ಅಬ್ದುಲ್ ಹಮೀದ್ ಮದನಿ ಮಾವಿನಕಟ್ಟೆ, ಅಬ್ದುರ್ರಶೀದ್ ಮದನಿ ಚಾತನಕೆರೆ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಶೆರೀಫ್ ಸಅದಿ ಸುಲ್ತಾನ್ ಮೊಹಲ್ಲಾ, ಅಬೂಬಕರ್ ಸಿದ್ದೀಖ್ ಸಖಾಫಿ ಚಾತನಕೆರೆ, ಶಂಸುದ್ದೀನ್ ಅಹ್ಸನಿ ಸರ್ಪನಕಟ್ಟೆ, ವರ್ಕಿಂಗ್ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್ ಮುಸ್ಲಿಯಾರ್ ಗಾಂಧಿಕಟ್ಟೆ ಹಾಗೂ ರೇಂಜ್ ವ್ಯಾಪ್ತಿಯ ಎಲ್ಲಾ ಮದ್ರಸಗಳ ಮುಖ್ಯೋಪಾಧ್ಯಾಯರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆಮಾಡಲಾಯಿತು. ಜಿಲ್ಲಾ ಕೌನ್ಸಿಲರ್ಸ್ ಗಳಾಗಿ ಮಸ್ಹೂದ್ ಅಹ್ಸನಿ ಹೆಮ್ಮಾಡಿ, ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಹನೀಫ್ ಸಅದಿ ನಾವುಂದ ಎಂಬುವರನ್ನು ಆಯ್ಕೆ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ನಾವುಂದ ಮದ್ರಸ ಮೇಲ್ನೋಟ ಸಮಿತಿ ನಾಯಕರಾದ ಮುಹಮ್ಮದ್, ಮೊಯ್ದೀನ್, ರೇಂಜ್ ಸಮಿತಿಯ ಹಿರಿಯರಾದ ಹಾಜಿ ಅಯ್ಯೂಬ್ ಮುಸ್ಲಿಯಾರ್ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು. ರೇಂಜ್ ಪ್ರ.ಕಾರ್ಯದರ್ಶಿ ಕೊಂಬಾಳಿ ಝುಹುರಿ ಸ್ವಾಗತಿಸಿ, ಹನೀಫ್ ಸಅದಿ ನಾವುಂದ ಧನ್ಯವಾದ ನಿರ್ವಹಿಸಿದರು.
ವರದಿ: ಕೊಂಬಾಳಿ ಝುಹುರಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.