(www.vknews.in) ; ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಗಂಗೊಳ್ಳಿ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ ಜಿಲ್ಲಾಸ್ಪತ್ರೆ ಅಜ್ಜರಕಾಡು, ಉಡುಪಿ ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮ ಗಂಗೊಳ್ಳಿಯ ಇಸ್ಲಾಹುಲ್ ಮುಸ್ಲಿಮೀನ್ ಮದರಸಾ, ಜಾಮಿಯಾ ಮೊಹಲ್ಲಾದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ರಜಬ್ ಗಂಗೊಳ್ಳಿ ವಹಿಸಿದ್ದರು, ಮುಖ್ಯ ಅತಿಥಿಯಾಗಿ SDPI ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಶಾಹಿದ್ ಅಲಿ, ಡಾ. ಮಧುಸೂದನ್, SDPI ಬೈಂದೂರ್ ಅಸೆಂಬ್ಲಿ ಉಪಾಧ್ಯಕ್ಷ ನಾಖುದ ಅಬೂಬಕ್ಕರ್, ಗಂಗೊಳ್ಳಿ ಜಮತುಲ್ ಮುಸ್ಲಿಂ ಅಧ್ಯಕ್ಷರಾಗಿರುವ ಪಿಎಂ ಹಸ್ಸೈನರ್, ಎಸ್ ಡಿ ಟಿ ಯು ಕುಂದಾಪುರ ತಾಲೂಕ ಅಧ್ಯಕ್ಷರಾಗಿರುವ ನಾಸಿರ್ ಗಂಗೊಳ್ಳಿ, ಎಸ್ ಡಿ ಪಿ ಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿರುವ ತಬ್ರೇಸ್ ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಸುಮಾರು 60 ರಷ್ಟು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.. ಈ ಸಂದರ್ಭ ದಲ್ಲಿ ನಿವೃತ್ತಿ ಹೊಂಡಿತ್ತಿರುವ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಅವರ ನಿಷ್ಠಾವಂತ ಸೇವೆಯನ್ನು ಗುರುತಿಸಿ ಪಕ್ಷದ ವತಿಇಂದ ಅವರನ್ನು ಸನ್ಮಾನಿಸಿಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.