(www.vknews.in) ದೇರಳಕಟ್ಟೆ ಹಯಾತುಲ್ ಇಸ್ಲಾಂ ಮದರಸ ಇದರ ವತಿಯಿಂದ ಸಮಸ್ತ ಮುಅಲ್ಲಿಂ ಡೇ – 2023 ಕಾರ್ಯಕ್ರಮವು ಮದರಸ ಸಭಾಂಗಣದಲ್ಲಿ ಮದರಸ ಹಾಗೂ ಶರೀಅತ್ ಕಾಲೇಜ್ ಉಸ್ತುವಾರಿ ಡಿ.ಎಂ ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹಯಾತುಲ್ ಇಸ್ಲಾಂ ಮದರಸ ಸದರ್ ಮುಅಲ್ಲಿಮರಾದ ಬಹು ಆಸಿಫ್ ಯಮಾನಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು
ಬದ್ರಿಯಾ ಜುಮಾ ಮಸೀದಿ ಖತೀಬ್ ಉಸ್ತಾದ್ ಬಹು ಇಸ್ಹಾಖ್ ಫೈಝಿ ಮುಅಲ್ಲಿಂ ಡೇ ಸಂದೇಶ ಬಾಷಣಗೈದು ಖಬರ್ ಝಿಯಾರತ್ ಹಾಗೂ ಪ್ರಾರ್ಥನೆಗೆ ನೇತ್ರತ್ವ ನೀಡಿದರು, ಹಯಾತುಲ್ ಇಸ್ಲಾಂ ಮದರಸ ಎಸ್.ಕೆ ಎಸ್.ಬಿ.ವಿ ವತಿಯಿಂದ ಮದರಸ ಅಧ್ಯಾಪಕರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ ಹೆಚ್ ಉಸ್ಮಾನ್, ಮದರಸ ಹಾಗೂ ಶರೀಅತ್ ಕಾಲೇಜ್ ಉಸ್ತುವಾರಿ ಹಾಜಿ ಇಸ್ಮಾಯಿಲ್ ರಹ್ಮತ್ತುಲ್ಲಾ, ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್, ಅಶ್ರಫ್ ಡಿ.ಎ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಕಾರ್ಯದರ್ಶಿ ಮೊಹಮ್ಮದ್ ಮುನ್ಸೀದ್ ಮತ್ತಿತರರು ಉಪಸ್ಥಿತರಿದ್ದರು. ಮದರಸ ಅಧ್ಯಾಪಕರಾದ ಝಾಕಿರ್ ಅಶ್ಯಾಫಿ ಸ್ವಾಗತಿಸಿ , ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.