ತೆಕ್ಕಾರು(ವಿಶ್ವಕನ್ನಡಿಗ ನ್ಯೂಸ್): ತನ್ಮೀಯ ಆನ್ಲೈನ್ ಲೇಡೀಸ್ ಇಸ್ಲಾಮಿಕ್ ಕೋರ್ಸ್ ವತಿಯಿಂದ ಭಾರತ ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ಮಹಿಳೆಯರಿಗೆ “ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ” ಎಂಬ ವಿಷಯದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಸ್ಪರ್ದಾರ್ಧಿಗಳಿಗೆ ಯಾವುದೇ ವಯೋಮಿತಿ ಇರುವುದಿಲ್ಲ. ಸ್ಪರ್ಧಿಸುವವರ ಹೆಸರು ಮತ್ತು ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುಕ್ತ ಅವಕಾಶ ಕೈ ಬರಹದ ಮೂಲಕ ಪ್ರಬಂಧಕ್ಕೆ ಅವಕಾಶವಿದ್ದು ಬರಹವು A4 ಶೀಟ್ ಹಾಳೆಯಲ್ಲಿ ಬರೆಯತಕ್ಕದ್ದು ಒಂದು ಪುಟಕ್ಕೆ ಸೀಮಿತವಾಗಿರಬೇಕು. ಟಯ್ಪ್ ಮಾಡಿದ ಬರಹವನ್ನು ಸ್ವೀಕರಿಸುವುದಿಲ್ಲಾ ಪ್ರಬಂಧ ಬರೆದ ಪ್ರತಿಯನ್ನು ದಿನಾಂಕ 20/08/2023 ರ ಮುಂಚಿತವಾಗಿ 7902930532 ವಾಟ್ಸಾಪ್ ಮೂಲಕ ಕಳುಹಿಸಿ ಕೊಡಬೇಕು.
ಪ್ರಬಂಧ ಫಲಿತಾಂಶವನ್ನು ಅಗಸ್ಟ್ 20 ರಂದು ಎಲ್ಲರ ಸಮ್ಮುಖದಲ್ಲಿ ಪ್ರಕಟಿಸಲಾಗುವುದು.
ಆಯ್ಕೆಯಾದ 10 ಜನರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ತನ್ಮೀಯ ಆನ್ಲೈನ್ ಲೇಡೀಸ್ ಇಸ್ಲಾಮಿಕ್ ಕೋರ್ಸ್ ಡೈರೆಕ್ಟರ್ ಆದಂ ದಾರಿಮಿ ಅಲ್ ಫಾಲಿಲ್ ಸಈದಿ ತೆಕ್ಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Whatsapp: 7902930532
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.