(www.vknews.in) ; ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು – ಕುಪ್ಪೆಟ್ಟಿ ರಸ್ತೆಯುದ್ದಕ್ಕೂ ಗಿಡ ಮರ ಕೊಂಬೆಗಳಿಂದ ಕೂಡಿದ್ದು, ಸಾರ್ವಜನಿಕರು,ವಿದ್ಯಾರ್ಥಿಗಳು ನಡೆದಾಡಲು ತುಂಬಾ ತ್ರಾಸದಾಯಕವಾಗಿತ್ತು. ವಾಹನ ಸವಾರರಿಗೂ ಕಷ್ಟವಾಗುತ್ತಿತ್ತು. ಸ್ಥಳೀಯ ಪಂಚಾಯಿತಿ ಜನ ಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸದಿದ್ದಾಗ ನೆಕ್ಕಿಲು ಮಸೀದಿ ಆಡಳಿತ ಸಮಿತಿ ನೇತೃತ್ವದಲ್ಲಿ, ಸ್ಥಳೀಯ ಸಂಘಟನೆಗಳಾದ KMJ, SYS, SSF,AYF, ಇಸಾಬ’ ದ ಕಾರ್ಯಕರ್ತರು ಹಲವು ತಾಸುಗಳ ಕಾಲ ಶ್ರಮದಾನ ಮಾಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡಲಾಯಿತು.
KP ರಮ್ಲಾನ್ ಹಾಜಿ, ಕಾಸಿಂ ಬಳ್ಳಿ, NM ಶರೀಫ್ ಸಖಾಫಿ, ಬಶೀರ್ ಮುಸ್ಲಿಯಾರ್, ಅಬೂಬಕರ್, ಹಮೀದ್, ನಝೀರ್, ಅಶ್ರಫ್, ಅಸ್ಕರ್, ಶಿಹಾಬ್, ಅಝೀಝ್, ನೌಶಾದ್, ಇರ್ಫಾನ್, ಅಬ್ಬಾಸ್, ಶರೀಫ್, ಬಶೀರ್ ಮೊದಲಾದವರು ನೇತೃತ್ವ ವಹಿಸಿದ್ದರು. ಹಲವು ಕಾರ್ಯಕರ್ತರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.