(www.vknews.in) ; ಎಸ್.ಕೆ.ಎಸ್.ಎಸ್.ಎಫ್ ಹಾಗೂ ವಿಖಾಯ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 73ನೇ ಸಾರ್ವಜನಿಕ ರಕ್ತದಾನ ಶಿಬಿರವು ದೇರಳಕಟ್ಟೆ ಎಸ್.ಕೆ.ಎಸ್.ಎಫ್ ಕಚೇರಿಯಲ್ಲಿ ನಡೆಯಿತು, ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾ ವೆಸ್ಟ್ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು,
ವಲಯ ಸಮಿತಿ ಅಧ್ಯಕ್ಷರಾದ ಫಾರೂಕ್ ದಾರಿಮಿ ಗ್ರಾಮಚಾವಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಉದ್ಘಾಟಿಸಿದರು, ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಕೆ ಅಬೂಬಕ್ಕರ್, ಬೆಲ್ಮ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿ.ಎಂ ಅಬ್ದುಲ್ ಸತ್ತಾರ್, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಹೆಚ್.ಆರ್, ದ.ಕ ವೆಸ್ಟ್ ಜಿಲ್ಲಾ ವಿಖಾಯ ರಕ್ತ ದಾನಿ ಬಳಗ ಉಸ್ತುವಾರಿ ನಝೀರ್ ವಲಚ್ಚಿಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು,
ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ದ.ಕ ಜಿಲ್ಲಾ ಸಮಿತಿ ವೆಸ್ಟ್ ಉಪಾಧ್ಯಕ್ಷರಾದ ಅಬೂಬಕ್ಕರ್ ರಿಯಾಝ್ ರಹ್ಮಾನಿ, ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಆರ್ ಅಹ್ಮದ್ ಶೇಟ್, ಎಸ್.ವೈ.ಎಸ್ ನೇತಾರರಾದ ಹಾಜಿ ಅಬ್ದುರ್ರಹ್ಮಾನ್ ಪನೀರ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹನೀಫ್ ಜೆ, ಎಸ್.ವೈ.ಎಸ್ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್, ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ವಾದಿತ್ವಬ ಪ್ರಧಾನ ಕಾರ್ಯದರ್ಶಿ ಅಹ್ಮದ್ ಸಿರಾಜ್ ತಾಜ್, ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ಕೋಶಾಧಿಕಾರಿ ಅಶ್ರಫ್ ಮಾರಾಠಿ ಮೂಲೆ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ಬದ್ಯಾರ್, ಪತ್ರಕರ್ತರಾದ ಬಶೀರ್ ಕಲ್ಕಟ್ಟ, ಎಸ್.ಕೆ.ಎಸ್.ಎಸ್.ಎಫ್ ವಿಖಾಯ ದ.ಕ ಜಿಲ್ಲಾ ಸಮಿತಿ ವೆಸ್ಟ್ ಉಸ್ತುವಾರಿ ಮುಸ್ತಫಾ ಕಟ್ಟದಪಡ್ಪು, ಕೋರ್ಡಿನೇಟರ್ ಹಂಝ ಕುರಿಯಪ್ಪಾಡಿ, ವಿಖಾಯ ದ.ಕ ಜಿಲ್ಲಾ ವೆಸ್ಟ್ ಚೆಯರ್ಮ್ಯಾನ್ ಸಮೀರ್ ಹೆಚ್.ಕಲ್, ವಲಯ ಸಮಿತಿ ವಿಖಾಯ ಚೆಯರ್ಮ್ಯಾನ್ ಶಫೀಕ್ ಹೆಚ್.ಕಲ್ ದೇರಳಕಟ್ಟೆ ವಲಯ ಸಮಿತಿ ಬ್ಲಡ್ ಉಸ್ತುವಾರಿ ಇರ್ಫಾನ್ ಮಲಾರ್ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ ವಿಖಾಯ ವಲಯ ಸಮಿತಿ ಕನ್ವೀನರ್ ಹನೀಫ್ ಮಲಾರ್ ಧನ್ಯವಾದ ಸಮರ್ಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.