(www.vknews.in) ; ಸುಳ್ಯ ಝೋನ್ ಜಂಇಯ್ಯತುಲ್ ಉಲಮಾ ಇದರ ಮಹಾಸಭೆ ದಿನಾಂಕ 29-08-2023 ಮಂಗಳವಾರ ಜಂಇಯ್ಯತುಲ್ ಉಲಮಾ ಆಸ್ಥಾನವಾದ ಮನ್ಹಜುದ್ದಅ್ವತುಲ್ ಇಸ್ಲಾಮಿಯಾ ಬಿಳಿಯಾರಿನಲ್ಲಿ ನಡೆಯಿತು. ಜಂಇಯ್ಯತುಲ್ ಉಲಮಾ ಝೋನ್ ಅಧ್ಯಕ್ಷರಾದ ಸೈಯದ್ ಕುಂಞಿಕೋಯ ಸಅದಿ ತಂಙಳ್ ರವರು ಅಧ್ಯಕ್ಷತೆಯನ್ನು ವಹಿಸಿದರು. ಕಾರ್ಯಕ್ರಮದ ಉಧ್ಘಾಟನೆ ಹಾಗೂ ಫತ್ಹುಲ್ ಮುಈನ್ ದರ್ಸ್ ಉಧ್ಘಾಟನೆ ಯನ್ನು ಕರ್ನಾಟಕ ಜಂಇಯತುಲ್ ಉಲಮಾ ಮುಶಾವರ ಸದಸ್ಯರಾದ ಬಹುಮಾನ್ಯರಾದ ಅಲೀ ಫೈಝಿ ಬಾಳೆಪುಣಿ ಉಸ್ತಾದರು ನೆರವೇರಿಸಿದರು.
ಮನ್ಹಜುದ್ದಅ್ವತುಲ್ ಇಸ್ಲಾಮಿಯ್ಯ ಸಂಸ್ಥೆಯ ಸಾರಥಿಯಾದ ಉಮರ್ ಸಖಾಫಿ ಕಾಜೂರು ರವರು ಶುಭನುಡಿಯನ್ನಾಡಿದರು. ಕರ್ನಾಟಕ ಮುಶಾವರ ಸದಸ್ಯರಾದ ಡಿ.ಕೆ ಉಮರ್ ಸಖಾಫಿ ಯವರು ತರಬೇತಿ ನಡೆಸಿ ಮಹಾಸಭೆಯ ನೇತೃತ್ವ ವಹಿಸಿದರು. ಜಂಇಯ್ಯತುಲ್ ಉಲಮಾ ಸುಳ್ಯ ಝೋನ್ ಜೊತೆ ಕಾರ್ಯದರ್ಶಿಯಾದ ಹಾಫಿಳ್ ಅಬ್ದುಸ್ಸಲಾಂ ನಿಝಾಮಿ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು.
ನಂತರ ಸಮಿತಿಯಲ್ಲಿ ಇರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಬದಲಾವಣೆ ಮಾಡಿ ಬಲಪಡಿಸಲಾಯಿತು. ಉಲಮಾ ನಾಯಕರ ಸಾಂಧರ್ಭಿಕ ಚರ್ಚೆ ಗಳ ಬಳಿಕ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾಹಿ ಸಅದಿ ವಂದಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.