(www.vknews.in) ; ಇಬ್ಬರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಸಂದರ್ಶನದಲ್ಲಿ ಊಟದ ವ್ಯವಸ್ಥೆಯೂ ಮಾಡಲಾಗಿತ್ತು. ಮೊದಲ ಸುತ್ತು ಕಚೇರಿಗೆ ಸಂಬಂಧಪಟ್ಟ ಒಂದು ಸಣ್ಣ ಲಿಖಿತ ಪರೀಕ್ಷೆಯಾಗಿತ್ತು. ಇಬ್ಬರು ವ್ಯಕ್ತಿಗಳಿಗೆ ಪರೀಕ್ಷೆ ಮುಗಿದ ನಂತರ ಊಟಕ್ಕೆ ಕರೆಯಲಾಯಿತು. ಕಚೇರಿಯ ಮುಖ್ಯಸ್ಥರ ಜೊತೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೂವರು ಊಟ ತಿಂದು ಮುಗಿಸಿದರು. ಇಬ್ಬರು ವ್ಯಕ್ತಿಗಳು ಸಂದರ್ಶನದ ಫಲಿತಾಂಶ ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದರು.
ಫಲಿತಾಂಶ ಬಂತು. ಇಬ್ಬರಲ್ಲಿ ಓರ್ವ ಮಾತ್ರ ಆರಿಸಲ್ಪಟ್ಟ. ಅವನ ಜೊತೆಗಿದ್ದವನಿಗೆ ಕುತೂಹಲ ಮೂಡಿತು. ಮಾನವ ಸಂಪನ್ಮೂಲ ಅಧಿಕಾರಿಗಳಿಗೆ ಕೇಳಿದ – ನಾನು ಕೆಲಸಕ್ಕೆ ಆರಿಸದಿರಲು ಕಾರಣವೇನು ? ಆತನನ್ನು ಯಾವ ಮಾನದಂಡದ ಮೇಲೆ ಕೆಲಸಕ್ಕೆ ತೆಗೆದುಕೊಂಡಿದ್ದೀರಿ ? ಅಧಿಕಾರಿಗಳು ತಮ್ಮ ಮಾತುಗಳನ್ನು ಪ್ರಾರಂಭಿಸಿದರು – ನಮ್ಮ ಕಚೇರಿಯ ಮುಖ್ಯಸ್ಥರು ಬಹಳ ಸೂಕ್ಷ್ಮವಾಗಿ ವ್ಯಕ್ತಿಗಳನ್ನು ಗಮನಿಸಿ ನಂತರ ಒಂದು ನಿರ್ಧಾರಕ್ಕೆ ಬರುತ್ತಾರೆ. ನೀವು ಕಂಪನಿಯ ಒಳಗೆ ಬರುವಾಗ ಭದ್ರತಾ ಸಿಬ್ಬಂದಿ ಜೊತೆ ಯಾವ ರೀತಿ ನಡೆದುಕೊಂಡಿರಿ, ಮಾತನಾಡಿದಿರಿ, ಅಲ್ಲಿಯ ವಾತಾವರಣಕ್ಕೆ ನಿಮ್ಮ ಹಾವಭಾವ, ವರ್ತನೆ, ಸಂಭಾಷಣೆ ಹೇಗಿತ್ತು ಎಂಬುದೆಲ್ಲವನ್ನು ಗಮನಿಸಲಾಗುತ್ತಿತ್ತು. ಅದರ ಆಧಾರದ ಮೇಲೆಯೇ ಒಬ್ಬರನ್ನು ಆರಿಸಿ ನಿಮ್ಮನ್ನು ಕೈಬಿಡಲಾಗಿದೆ.
ಅವರು ಸೆಕ್ಯೂರಿಟಿ ಜೊತೆ ವಿನಯವಾಗಿ ವರ್ತಿಸಿದರು. ಮುಗುಳ್ನಗೆ ಬೀರಿದರು. ಧನ್ಯವಾದಗಳನ್ನು ಹೇಳಿದರು. ನೀವು ಸೆಕ್ಯುರಿಟಿಗೆ ಗಮನಿಸಲೇ ಇಲ್ಲ. ಅಂದರೆ ಎಲ್ಲಾ ಮನುಷ್ಯರು ಸಮಾನರು ಎಂಬ ಭಾವನೆ ನಿಮ್ಮಲ್ಲಿ ವ್ಯಕ್ತವಾಗಲಿಲ್ಲ. ಆತ ಸೆಕ್ಯೂರಿಟಿ ಮಾತ್ರ ತಾನೆ ಎಂಬ ಕಾರಣಕ್ಕೆ ಬಹುಶಃ ನೀವು ಆತನನ್ನು ನಿರ್ಲಕ್ಷಿಸಿರಬಹುದು. ಆತ ಹಿರಿಯ ಅಧಿಕಾರಿಯೇ, ಆತನಿಂದ ನನಗೇನು ಲಾಭ – ಈ ರೀತಿಯ ಭಾವನೆಗಳು ನಿಮ್ಮಲ್ಲಿ ಬಹುಶಃ ಮೂಡಿರಬಹುದು. ಅಥವಾ ಆ ಕಡೆ ಗಮನವೇ ಹೋಗಲಿಲ್ಲವೇನೋ …!
ಊಟ ಮಾಡುವುದನ್ನು ಪ್ರಾರಂಭಿಸುವಾಗ ನೀವು ಉಪ್ಪನ್ನು ಒಂದು ಚಿಟಕಿಯಷ್ಟು ಹಾಕಿಕೊಂಡಿರಿ. ನಂತರ ರುಚಿ ನೋಡಿದಿರಿ. ನಿಮ್ಮ ಜೊತೆಗಿದ್ದವನು ಮೊದಲು ಒಂದು ತುತ್ತು ತಿಂದ, ಅದರ ರುಚಿಯನ್ನು ತಿಳಿದುಕೊಂಡ, ಉಪ್ಪಿನ ಅವಶ್ಯಕತೆ ಇರುವುದನ್ನು ತಿಳಿದುಕೊಂಡ, ನಂತರ ಒಂದು ಪ್ರಮಾಣದಲ್ಲಿ ಉಪ್ಪನ್ನು ಹಾಕಿಕೊಂಡ. ವೈಟರ್ ಜೊತೆ ಸಹ ಆತನ ನಡವಳಿಕೆ ಬಹಳ ಚೆನ್ನಾಗಿತ್ತು. ವೈಟರ್ ಸಹಾಯ ಮಾಡಿದಾಗ ಆತನಿಗೆ ಥ್ಯಾಂಕ್ಸ್ ಹೇಳಿ ಕೃತಘ್ನತೆಗಳನ್ನು ಸಲ್ಲಿಸುತ್ತಿದ್ದ. ಉಪ್ಪಿನ ವಿಷಯ ಬಹಳ ಚಿಕ್ಕದಾಗಿ ಕಾಣಬಹುದು. ಆದರೆ ಅದು ವ್ಯಕ್ತಿಯ ಗುಣ ಮತ್ತು ಸಾಮರ್ಥ್ಯವನ್ನು ಗಮನಕ್ಕೆ ತರುವುದರಲ್ಲಿ ಸಹಾಯ ಮಾಡಿತು. ಮುಖ್ಯಸ್ಥರು ಬಯಸುವುದು ಮೊದಲು ವಿಷಗಳನ್ನು ಪರಿಶೀಲಿಸಬೇಕು. ನಂತರ ನಿರ್ಧಾರ ತೆಗೆದುಕೊಳ್ಳಬೇಕು. ನೀವು ರುಚಿ ತಿಳಿಯುವ ಮುನ್ನ ಉಪ್ಪು ಬೆರೆಸಿಕೊಂಡಿರಿ.
ಆತ ರುಚಿ ತಿಳಿದು ಉಪ್ಪನ್ನು ಬೆರೆಸಿಕೊಂಡ. ಒಂದು ಸಂಸ್ಥೆಯಾಗಲಿ, ಕಚೇರಿಯಾಗಲಿ, ಮನೆಯಾಗಲಿ, ಜೀವನವಾಗಲಿ, ಮೊದಲು ಪರಿಸ್ಥಿಯನ್ನು ಅರ್ಥಮಾಡಿಕೊಳ್ಳಬೇಕು. ನಂತರ ಸರಿಯಾದ ಸಮತೋಲನವಾದ ಉತ್ತರ ಹುಡುಕಿಕೊಳ್ಳಬೇಕು. ಆಕ್ಷನ್ ತೆಗೆದುಕೊಳ್ಳಬೇಕು. ಊಟ ಮಾಡುವಾಗ ನಿಮ್ಮ ಗಮನ ಕೇವಲ ಮುಖ್ಯಸ್ಥರ ಕಡೆ ಇತ್ತು. ಸುತ್ತಮುತ್ತಲ ವ್ಯವಸ್ಥೆಯನ್ನು ನೀವು ಸಂಪೂರ್ಣವಾಗಿ ಪರಿಗಣಿಸಲಿಲ್ಲ. ಒಂದು ರೀತಿ ನಿರ್ಲಕ್ಷಿಸಿದಿರಿ. ಇದೆಲ್ಲ ಗಮನಿಸಿ ನಿಮ್ಮನ್ನು ಕೆಲಸಕ್ಕೆ ಆರಿಸಲಾಗಲಿಲ್ಲ. ಕ್ಷಮಿಸಿ. ವಿದ್ಯೆ ಓದಿ ಕಲಿತುಕೊಳ್ಳಬಹುದು. ಗುಣ ಬೆಳೆಸಿಕೊಳ್ಳಬೇಕಾಗುತ್ತದೆ. ಅದು ಸಕಾರಾತ್ಮಕ ಮನಸ್ಥಿತಿಯಿಂದ ಮಾತ್ರ ಸಾಧ್ಯ.
– ಜಬೀವುಲ್ಲಾ ಖಾನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.