ಆನೇಕಲ್ (www. vknews.in) : ಪಟ್ಟಣಕ್ಕೆ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಎಲ್ಎಲ್ಬಿ ಮತ್ತು ಎಲ್ಎಲ್ಎಂ ತರಗತಿಗಳ ಪ್ರಾರೋಂಭೋತ್ಸವ ಮತ್ತು ಸಂವಾದ ಕಾರ್ಯಕ್ರಮವನ್ನು ಉಪ ಲೋಕಾಯುಕ್ತ ಜಸ್ಟೀಸ್ ಕೆ.ಎನ್.ಪಣೀಂದ್ರ ಉದ್ಘಾಟಿಸಿದರು.
ಉಪ ಲೋಕಾಯುಕ್ತ ಜ.ಕೆ.ಎನ್.ಪಣೀಂದ್ರ ಮಾತನಾಡಿ ಕಾನೂನು ಪದವಿಯು ಸಮಾಜ ಬದಲಾವಣೆಯ ನಿಟ್ಟಿನಲ್ಲಿ ಅತ್ಯಂತ ಪ್ರಮುಖವಾದ ಪದವಿಯಾಗಿದೆ. ಕಾನೂನು ವಿದ್ಯಾರ್ಥಿಗಳು ಸಮಾಜಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೌಲ್ಯ ಮತ್ತು ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು ನ್ಯಾಯ ಮತ್ತು ಸತ್ಯದ ಪರ ನಿಲ್ಲಬೇಕು ಎಂದರು. ವೃತ್ತಿಜೀವನದಲ್ಲಿ ವಕೀಲ ವೃತ್ತಿ ಅತ್ಯಂತ ಶ್ರೇಷ್ಠವಾದ ವೃತ್ತಿಯಾಗಿದೆ. ಹಾಗಾಗಿ ಕಾನೂನು ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪ್ರತಿಯೊಬ್ಬರು ಉತ್ತಮ ಆರೋಗ್ಯವನ್ನು ಬಯಸುತ್ತಾರೆ ಅದೇ ರೀತಿ ಪ್ರತಿಯೊಬ್ಬರೂ ಉತ್ತಮ ಸಮಾಜ ನಿರ್ಮಾಣವನ್ನು ಬಯಸುವುದು ಅವರ ಜವಾಬ್ದಾರಿಯಾಗಿದೆ. ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲುವಂತಹ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ವಕೀಲರಾಗುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ವಕೀಲರಾಗುವ ನಿಟ್ಟಿನಲ್ಲಿ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕು ಎಂದರು.
ಕಾನೂನು ಸರಿಯಾದ ರೀತಿಯಲ್ಲಿ ಪಾಲನೆ ಮಾಡದೆ ಹೋದರೆ ಮತ್ತು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಸಮಾಜದ ಬದಲಾವಣೆ ಅಸಾಧ್ಯ. ಸಮಾಜದಲ್ಲಿ ಸತ್ಪ್ರಜೆಗಳನ್ನು ರೂಪಿಸಲು ಶಾಲಾ ಕಾಲೇಜುಗಳು ಶ್ರಮಿಸಬೇಕು. ಪದವಿಯ ಹಂತದಲ್ಲಿಯೇ ವಿದ್ಯಾರ್ಥಿಗಳು ಸಮಾಜದ ಸಮಸ್ಯೆಗಳನ್ನು ಅರಿತು ಹಕ್ಕು ಮತ್ತು ಜವಾಬ್ದಾರಿಗಳನ್ನು ಅರಿಯಬೇಕು. ಯಶಸ್ಸು ಎಂಬುದು ಕಠಿಣಶ್ರಮ ಮತ್ತು ಸತತ ಅಧ್ಯಯನದಿಂದ ದೊರೆಯುತ್ತದೆ ಹಾಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ನಡೆಸಬೇಕು. ಕಾನೂನು ವಿಷಯ ಸಮುದ್ರದಂತೆ ಹಾಗಾಗಿ ನಿರಂತರ ಅಭ್ಯಾಸದಿಂದ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ ಎಂದರು.
ಅಲಯನ್ಸ್ ವಿಶ್ವವಿದ್ಯಾಲಯದ ಕುಲಪತಿ ಅಭಯ್ ಚಬ್ಬಿ ಮಾತನಾಡಿ ಅಲಯನ್ಸ್ ವಿಶ್ವವಿದ್ಯಾಲಯದ ಕಾನೂನು ವಿಭಾಗವು ಕ್ರಿಯಾಶೀಲ ಮತ್ತು ವಿದ್ಯಾರ್ಥಿನಿ ಸ್ನೇಹಿಯಾಗಿ ರೂಪಿಸಲಾಗಿದೆ. ಪದವಿಯ ಹಂತದಲ್ಲಿ ಅಣುಕು ನ್ಯಾಯಾಲಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಚಟುವಟಿಕೆಗಳ ಜೊತೆಗೆ ಸಮಾಜವನ್ನು ಅರಿಯಬಹುದಾಗಿದೆ. ವಕೀಲ ವೃತ್ತಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ನಮ್ಮ ಬದ್ಧತೆಯಾಗಿದೆ ಎಂದರು.
ವಿಶ್ವವಿದ್ಯಾಲಯದ ರೆಜಿಸ್ಟರ್ ಜನರಲ್ ಸುರೇಖಾ ಶೆಟ್ಟಿ, ರಿಜಿಸ್ಟರ್ ನಿವೇದಿತಾ ಮಿಶ್ರಾ, ಕಾನೂನು ವಿಭಾಗದ ಡೀನ್ ಡಾ.ಕಿರಣ್ ಡೆನ್ನಿಸ್ ಗಾರ್ಡನ್, ಡಾ. ಶ್ಯಾಮ್ ಕಿಶೋರ್, ಮುಕುಲ್ ಸಕ್ಸೆನಾ, ವೆಂಕಟೇಶ್ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.