ರೆಂಜ (www.vknews.in) ; ಕರ್ನಾಟಕ ಮುಸ್ಲಿಂ ಜಮಾ ಅತ್ (ಕೆ.ಎಂ.ಜೆ ) ರೆಂಜ ಸರ್ಕಲ್ ವತಿಯಿಂದ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಘೋಷಣೆಯೊಂದಿಗೆ ಪ್ರಜಾ ಭಾರತ ಕಾರ್ಯಕ್ರಮ ಎ ಎಂ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಇವರ ಅಧ್ಯಕ್ಷತೆಯಲ್ಲಿ ಇತೀಚೆಗೆ ನಡೆಯಿತು.
ನಮ್ಮ ಹಿರಿಯರು ಅಂದರೆ ನಮ್ಮ ಬಾಲ್ಯ ಕಾಲದಲ್ಲಿ ಪರಸ್ಪರ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಜಾತಿ, ಧರ್ಮ ಬೇಧ ಭಾವವಿಲ್ಲದೆ ಎಷ್ಟು ಅನ್ಯೋನ್ಯತೆಯಿಂದ ನಾವಿದ್ದೇವೋ ಆ ಒಂದು ರೀತಿಗೆ ನಮ್ಮ ಮುಂದಿನ ತಲೆಮಾರಿನ ಪೀಳಿಗೆಯನ್ನು ತರಲು ನಾವು ಮುಂದಾಗಬೇಕೆಂದು ತಮ್ಮ ಭಾಷಣದಲ್ಲಿ ಅವರು ಹೇಳಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಜುಳಗಿರಿ ವೆಂಕಟ್ರಮಣ ಭಟ್ ತಮ್ಮ ಭಾಷಣದಲ್ಲಿ ‘ದೇವರೊಬ್ಬನೇ, ಹಲವು ನಾಮಗಳು ಮಾತ್ರ, ನನ್ನನ್ನು ನನ್ನ ಮಕ್ಕಳು ಅಪ್ಪನೆಂದೂ, ತಮ್ಮಂದಿರು ಅಣ್ಣನೆಂದೂ ಕೆಲವರು ಭಾವ, ಅಳಿಯ ಈ ರೀತಿ ಇನ್ನಿತರ ನಾಮಗಳಿಂದ ಕರೆದರೂ ನಾನು ಒಬ್ಬನೇ ಅಲ್ಲವೇ ಅದೇ ಪ್ರಕಾರ ಮುಸಲ್ಮಾನರು ಅಲ್ಲಾಹು ಎನ್ನುವಾಗ , ನಾವು ಬ್ರಹ್ಮ ಎನ್ನುತ್ತೇವೆ, ಅವನ ಸ್ರಷ್ಟಿಗಳಾದ ನಾವೆಲ್ಲರೂ ಭಾರತೀಯರೇ ಒಂದಾಗಿ ಬಾಳವ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ರಾಮ್ ಕುಮಾರ್ ಆರ್ಲಪದವು (ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ), ಅಬೂಬಕರ್ ಕಲ್ಲಪದವು (ಗ್ರಾಮ ಪಂಚಾಯತ್ ಸದಸ್ಯರು ), ಈಶ್ವರ ಭಟ್ ಕಡಂದೆಲ್ (ಮಾಜಿ ಅಧ್ಯಕ್ಷರು, ವಿದ್ಯಾ ವರ್ಧಕ ಸಂಘ ಪಾಣಾಜೆ ), ಶಾಹುಲ್ ಹಮೀದ್ ಜಾಲಗದ್ದೆ (ಅಧ್ಯಕ್ಷರು, ವಿವೇಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆರ್ಲಪದವು ) ಮುಂತಾದ ಗಣ್ಯರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮುಖ್ಯ ಪ್ರಭಾಷಣ ಮಾಡಿದ ಹುಸೈನ್ ಮುಈನಿ ಮಾರ್ನಾಡ್ ರವರು ‘ದ್ವೇಷ ಬಿಟ್ಟು ದೇಶ ಕಟ್ಟು ‘ಎಂಬ ಶೀರ್ಷಿಕೆಯಡಿ ಮಾತನಾಡಿದರು. ಅಬ್ಬಾಸ್ ಮದನಿ ರೆಂಜ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮೂಸ ಮದನಿ ಕಕ್ಕೂರು ರವರು ದುಆ ನೇರವೇರಿಸಿದರು. ಅಬ್ಬಾಸ್ ಹಾಜಿ ಮಣ್ಣಾಪು, ರಝಕ್ ಬದ್ರಿಯಾ ಅಬ್ದುರಹ್ಮಾನ್ ಮಣ್ಣಾಪು , ಅಬೂಬಕರ್ ಆರ್ಲಪದವು, ಅಬ್ದುಲ್ಲ ಮದನಿ ಇರ್ದೆ, ಶರೀಫ್ ಕಡಮಾಜೆ, ಪಿ ವೈ ಮುಹಮ್ಮದ್ ಮದನಿ ಇರ್ದೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ಲ kunhi ಮಾಸ್ಟರ್ ಸ್ವಾಗತಿಸಿ ಕಾರ್ಯದರ್ಶಿ ಪಿ ಐ ಮುಹಮ್ಮದ್ ಮದನಿ ಇರ್ದೆ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.